ಹಿಂದೂ ಧರ್ಮದಲ್ಲಿ ದ್ವಿಪತ್ನಿತ್ವ ಬಗ್ಗೆ ಕಾಯ್ದೆ ಏನು ಹೇಳುತ್ತದೆ? ವೈವಾಹಿಕ ಕಾನೂನುಗಳ ಬಗ್ಗೆ ಇಲ್ಲಿದೆ ಮಾಹಿತಿ
ಭಾರತದಲ್ಲಿ, ಮದುವೆಯನ್ನು ನಿಯಂತ್ರಿಸುವ ಯಾವುದೇ ಏಕರೂಪದ ಕಾನೂನು ಸಂಹಿತೆ ಇಲ್ಲ ಬದಲಿಗೆ, ವಿವಿಧ ಧರ್ಮಗಳು ವಿವಿಧ ಕಾನೂನುಗಳನ್ನು ಅನುಸರಿಸುತ್ತವೆ

ಮಹಾರಾಷ್ಟ್ರದಲ್ಲಿ (Maharashtra) ಇಬ್ಬರು ಅವಳಿ ಮಹಿಳೆಯರು ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಿರುವ ವಿಡಿಯೊವೊಂದು ನಿನ್ನೆ ಭಾರೀ ಸುದ್ದಿ ಮಾಡಿದೆ. ವಧು ಮತ್ತು ವರನ ಕುಟುಂಬಗಳು ಈ ಮದುವೆಗೆ (Marriage) ಒಪ್ಪಿಗೆ ಸೂಚಿಸಿ ಈ ಮದುವೆ ನಡೆದಿದೆ. ಆದಾಗ್ಯೂ ವರನ ವಿರುದ್ಧ ದೂರು ದಾಖಲಾಗಿದೆ. ವರದಿಯ ಪ್ರಕಾರ, ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ನಾನ್-ಕಾಗ್ನಿಜಬಲ್ (NC) ಅಪರಾಧವನ್ನು ದಾಖಲಿಸಲಾಗಿದೆ.ಭಾರತೀಯ ಸಂವಿಧಾನದ 21 ನೇ ವಿಧಿ ಮತ್ತು 1948 ರಲ್ಲಿ ಅಂಗೀಕರಿಸಲ್ಪಟ್ಟ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 16 ನೇ ವಿಧಿಯು ಮದುವೆಯಾಗುವ ವ್ಯಕ್ತಿಯ ಹಕ್ಕನ್ನು ಅಂಗೀಕರಿಸುತ್ತದೆ. ಭಾರತದಲ್ಲಿ, ಮದುವೆಯನ್ನು ನಿಯಂತ್ರಿಸುವ ಯಾವುದೇ ಏಕರೂಪದ ಕಾನೂನು ಸಂಹಿತೆ ಇಲ್ಲ ಬದಲಿಗೆ, ವಿವಿಧ ಧರ್ಮಗಳು ವಿವಿಧ ಕಾನೂನುಗಳನ್ನು ಅನುಸರಿಸುತ್ತವೆ.ಹಿಂದೂಗಳಿಗೆ 1955 ರಿಂದ ಹಿಂದೂ ವಿವಾಹ ಕಾಯಿದೆ, ಮುಸ್ಲಿಮರಿಗೆ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯಿದೆ 1937, ಕ್ರಿಶ್ಚಿಯನ್ನರಿಗೆ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ 1872 ಮತ್ತು ಪಾರ್ಸಿಗಳಿಗೆ ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯಿದೆ 1936 ಇವೆ. ಯಾವುದೇ ನಿರ್ದಿಷ್ಟ ಧಾರ್ಮಿಕ ಸಂಪ್ರದಾಯದೊಂದಿಗೆ ಗುರುತಿಸಿಕೊಳ್ಳದ ಜನರ ನಡುವಿನ ವಿವಾಹಗಳನ್ನು ನಿಯಂತ್ರಿಸುವ ಸಲುವಾಗಿ 1954 ರ ವಿಶೇಷ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು.
ದ್ವಿಪತ್ನಿತ್ವ ಬಗ್ಗೆ ಹಿಂದೂ ವಿವಾಹ ಕಾಯ್ದೆ ಏನು ಹೇಳುತ್ತದೆ?
ಹಿಂದೂಗಳಲ್ಲಿ ವೈವಾಹಿಕ ಕಾನೂನನ್ನು 1955 ರಲ್ಲಿ ಹಿಂದೂ ವಿವಾಹ ಕಾಯಿದೆಯ ಅಂಗೀಕಾರದೊಂದಿಗೆ ಕ್ರೋಡೀಕರಿಸಲಾಯಿತು. ಈ ಕಾಯಿದೆಯು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮವನ್ನು ಅನುಸರಿಸುವವರಿಗೆ ಅನ್ವಯಿಸುತ್ತದೆ. ಕಾಯಿದೆಯು ಮದುವೆಯಾಗುವ ಸಾಮರ್ಥ್ಯವನ್ನು ಹೇಳುತ್ತದೆ. ಈ ಷರತ್ತುಗಳನ್ನು ಸೆಕ್ಷನ್ 5 ರಲ್ಲಿ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಮದುವೆಯ ಸಮಯದಲ್ಲಿ ಯಾವುದೇ ಸಂಗಾತಿ ಬದುಕಿರಬಾರದು ಎಂದು ಹೇಳುತ್ತದೆ. ಇದರರ್ಥ ಹಿಂದೂ ಸಂಸ್ಕೃತಿಯಲ್ಲಿ ದ್ವಿಪತ್ನಿತ್ವ ಇಲ್ಲ.ಮದುವೆಯ ಸಮಯದಲ್ಲಿ ವಧು ಮತ್ತು ವರರು ಉತ್ತಮ ಮನಸ್ಸಿನವರಾಗಿರಬೇಕು, ಅವರು ಮದುವೆಗೆ ಮುಕ್ತ ಒಪ್ಪಿಗೆಯನ್ನು ನೀಡಬೇಕು. ಹೆಣ್ಣು ಮತ್ತು ಗಂಡು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು. ನಿಷೇಧಿತ ಸಂಬಂಧವನ್ನು ರೂಪಿಸುವ ಯಾವುದೇ ಹಂತಗಳಲ್ಲಿ ಪರಸ್ಪರ ಸಂಬಂಧ ಹೊಂದಿರಬಾರದು.ಸೋದರಸಂಬಂಧಿ ಸಂಬಂಧವನ್ನು ರೂಪಿಸುವ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರಬಾರದು ಎಂದು ಲೀಗಲ್ ಸರ್ವೀಸಸ್ ಇಂಡಿಯಾ ವರದಿ ಹೇಳಿದೆ.
ಕಾಯಿದೆಯ ಸೆಕ್ಷನ್ 17 ದ್ವಿಪತ್ನಿತ್ವವನ್ನು ಶಿಕ್ಷೆಗೆ ಒಳಪಡಿಸುತ್ತದೆ. ಇಂಡಿಯನ್ ಕಾನೂನ್‌ನ ವರದಿಯ ಪ್ರಕಾರ, “ಈ ಕಾಯಿದೆ ಜಾರಿಗೆ ಬಂದ ಯಾವುದೇ ಕಡೆಯವರ ಪತಿ ಅಥವಾ ಹೆಂಡತಿ ವಾಸಿಸುತ್ತಿದ್ದರೆ ಇಬ್ಬರು ಹಿಂದೂಗಳ ನಡುವಿನ ಯಾವುದೇ ವಿವಾಹವು ಮದುವೆಯ ದಿನದಿಂದಲೇ ಅನೂರ್ಜಿತವಾಗಿರುತ್ತದೆ. ಭಾರತೀಯ ದಂಡ ಸಂಹಿತೆಯ (1860 ರ 45) ವಿಭಾಗಗಳು 494 ಮತ್ತು 495 ರ ನಿಬಂಧನೆಗಳು ಅದಕ್ಕೆ ಅನುಗುಣವಾಗಿ ಅನ್ವಯಿಸುತ್ತವೆ.”
ಮದುವೆ ಕಾನೂನುಗಳ ಸುಧಾರಣೆ
ವರ್ಷಗಳು ಕಳೆದಂತೆ ವಿವಿಧ ಧರ್ಮಗಳಲ್ಲಿ ಮದುವೆಯ ಪದ್ಧತಿಗಳೊಂದಿಗೆ ಚಾಲ್ತಿಯಲ್ಲಿರುವ ಸಾಮಾಜಿಕ ಅನಿಷ್ಟಗಳೆಂದು ಪರಿಗಣಿಸಲಾದ ಕೆಲವು ಆಚರಣೆಗಳನ್ನು ನಿಷೇಧಿಸಲು ಸಂಸತ್ತು ಕಾನೂನುಗಳನ್ನು ಮಾಡಿದೆ. ಉದಾಹರಣೆಗೆ: ಸತಿ, ಬಾಲ್ಯವಿವಾಹ, ತ್ರಿವಳಿ ತಲಾಖ್ ಇತ್ಯಾದಿ. ಸತಿ ಹಿಂದೂಗಳಲ್ಲಿ ಒಂದು ಆಚರಣೆಯಾಗಿದ್ದು, ಇದರಲ್ಲಿ ಪತಿಯ ಮರಣದ ಸಂದರ್ಭದಲ್ಲಿ, ಮೃತ ವ್ಯಕ್ತಿಯ ಹೆಂಡತಿಯು ತನ್ನ ಮೃತ ಗಂಡನ ಚಿತೆಗೆ ಹಾರಿ ಪ್ರಾಣಕಳೆದುಕೊಳ್ಳುವ ಸಂಪ್ರದಾಯವಾಗಿದೆ. ಕಮಿಷನ್ ಆಫ್ ಪ್ರಿವೆನ್ಶನ್ ಆಫ್ ಸತಿ ಆಕ್ಟ್ 1987 ಪ್ರಸ್ತುತ ಜಾರಿಯಲ್ಲಿದೆ. ಇದು ಭಾರತೀಯ ಭೂಪ್ರದೇಶದಲ್ಲಿ ಸತಿ ಪದ್ಧತಿಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ವಿಧವೆಯೊಬ್ಬಳನ್ನು ಸ್ವಯಂಪ್ರೇರಿತ ಅಥವಾ ಅನೈಚ್ಛಿಕವಾಗಿ ಸುಡುವುದನ್ನು ಅಥವಾ ಜೀವಂತ ಸಮಾಧಿ ಮಾಡುವುದನ್ನು ಈ ಕಾಯಿದೆ ನಿಷೇಧಿಸುವುದರ ಜತೆಗೆ ಸತಿ ಆಚರಣೆಯ ವೈಭವೀಕರಣವನ್ನು ಸಹ ಇದು ನಿಷೇಧಿಸುತ್ತದೆ. ಕಾಯಿದೆಯ ಪ್ರಕಾರ ಸತಿ ಎಂಬ ಪದವು ವಿಧವೆಯನ್ನು “ಸುಡುವ ಅಥವಾ ಸಜೀವವಾಗಿ ಹೂಳುವ” ಕ್ರಿಯೆಯನ್ನು ತನ್ನ ಮೃತ ಪತಿ ಅಥವಾ ಇತರ ಸಂಬಂಧಿ, ಅಥವಾ ಪತಿಗೆ ಸಂಬಂಧಿಸಿದ ಯಾವುದೇ ಲೇಖನ, ವಸ್ತು ಪ್ರಕಟಿಸಬಾರದು ಎಂದು ಲೀಗಲ್ ಸರ್ವಿಸಸ್ ಇಂಡಿಯಾದ ವರದಿಯು ಹೇಳುತ್ತದೆ.
ಮಹಿಳೆಯರ ವಿವಾಹ ವಯಸ್ಸನ್ನು 21ಕ್ಕೆ ಏರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸಂಸದೀಯ ಸ್ಥಾಯಿ ಸಮಿತಿ ಸಾಧಕ-ಬಾಧಕಗಳನ್ನು ಅಳೆದು ತೂಗುತ್ತಿದೆ. ಭಾರತದಲ್ಲಿ ವಿವಾಹಗಳನ್ನು ನಿಯಂತ್ರಿಸುವ ವಿವಿಧ ವೈಯಕ್ತಿಕ ಕಾನೂನುಗಳೊಂದಿಗೆ, ಸರ್ಕಾರವು ಕಾನೂನನ್ನು ತಿದ್ದುಪಡಿ ಮಾಡಲು ಬಯಸುತ್ತದೆ. ಬೇಟಿ ಬಚಾವೋ ಬೇಟಿ ಪಢಾವೋ ನಂತಹ ಕೇಂದ್ರೀಕೃತ ಯೋಜನೆಗಳ ಹೊರತಾಗಿ ಉತ್ತಮ ಅನುಷ್ಠಾನದ ಅಗತ್ಯವಿರುತ್ತದೆ, ಶಿಕ್ಷಣದಿಂದ ಆರೋಗ್ಯ ರಕ್ಷಣೆ ಮತ್ತು ಜಾಗೃತಿ ಅಭಿಯಾನದವರೆಗೆ ಬಾಲ್ಯ ವಿವಾಹಕ್ಕೆ ಕಾರಣವಾಗುವ ಅಂಶಗಳನ್ನು ಪರಿಹರಿಸಲು ರಾಜ್ಯಗಳು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿವೆ.
ಉದಾಹರಣೆಗೆ ಪಶ್ಚಿಮ ಬಂಗಾಳದ ಕನ್ಯಾಶ್ರೀ ಯೋಜನೆ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಹುಡುಗಿಯರಿಗೆ ಹಣಕಾಸಿನ ನೆರವು ನೀಡುತ್ತದೆ. ಆದಾಗ್ಯೂ, ಮಗಳ ಮದುವೆಯ ಸಮಯದಲ್ಲಿ ಬಡ ಕುಟುಂಬಗಳಿಗೆ 25,000 ಒಂದು ಬಾರಿ ಪಾವತಿಯನ್ನು ಒದಗಿಸುವ ರೂಪಶ್ರೀ ಎಂಬ ಇನ್ನೊಂದು ಯೋಜನೆಯು ಪ್ರತಿಕೂಲವಾಗಬಹುದು ಎಂದು ಮಹಿಳಾ ಕಾರ್ಯಕರ್ತರು ಸೂಚಿಸಿದ್ದಾರೆ. ಬಿಹಾರ ಮತ್ತು ಇತರ ರಾಜ್ಯಗಳು ಹುಡುಗಿಯರು ಸುರಕ್ಷಿತವಾಗಿ ಶಾಲೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಸೈಕಲ್ ಯೋಜನೆಯನ್ನು ಜಾರಿಗೆ ತಂದಿವೆ. ಉತ್ತರ ಪ್ರದೇಶವು ಹುಡುಗಿಯರು ಶಾಲೆಗೆ ಮರಳಲು ಪ್ರೋತ್ಸಾಹಿಸುವ ಯೋಜನೆಯನ್ನು ಹೊಂದಿದೆ.
ತ್ರಿವಳಿ ತಲಾಖ್
ಮುಸ್ಲಿಂ ಪುರುಷನು ಮೂರು ಬಾರಿ “ತಲಾಖ್” (ವಿಚ್ಛೇದನ) ಎಂದು ಹೇಳುವ ಮೂಲಕ ನಿಮಿಷಗಳಲ್ಲಿ ತನ್ನ ಹೆಂಡತಿಯನ್ನು ವಿಚ್ಛೇದನ ಮಾಡಲು ಅನುಮತಿಸುವ “ತ್ರಿವಳಿ ತಲಾಖ್” ನ ಇಸ್ಲಾಮಿಕ್ ಆಚರಣೆಯನ್ನು 2017 ರಲ್ಲಿ ಭಾರತದ ಸುಪ್ರೀಂಕೋರ್ಟ್ ಕಾನೂನುಬಾಹಿರಗೊಳಿಸಿತು.