ದೆಹಲಿ ಸೆಪ್ಟೆಂಬರ್ 09: ಜಿ20 ಶೃಂಗಸಭೆಯಲ್ಲಿ (G20 Summit) ಅಂಗೀಕರಿಸಲಿರುವ ಉದ್ದೇಶಿತ ನವದೆಹಲಿ ಘೋಷಣೆ ಕುರಿತು ವಿಶ್ವನಾಯಕರನ್ನು ಒಮ್ಮತ ಮೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ, ಒಂದು ಒಳ್ಳೆಯ ಸುದ್ದಿ ಇದೆ. ಎಲ್ಲರ ಸಹಕಾರದೊಂದಿಗೆ ನವದೆಹಲಿ ಘೋಷಣೆಯಲ್ಲಿ ಒಮ್ಮತ ಮೂಡಿದೆ ಎಂದು ಹೇಳಿದ್ದಾರೆ. ಈ ದೊಡ್ಡ ಬೆಳವಣಿಗೆಯನ್ನು ಹಲವಾರು ನಾಯಕರು ಮತ್ತು ಅಧಿಕಾರಿಗಳು ಸ್ವಾಗತಿಸಿದ್ದಾರೆ. ಇಂದು ಜಿ20 ನಾಯಕರ ಶೃಂಗಸಭೆಯಲ್ಲಿ ನವದೆಹಲಿ ಘೋಷಣೆಯನ್ನುಅಧಿಕೃತವಾಗಿ ಅಂಗೀಕರಿಸಲಾಗಿದೆ. ಪ್ರಧಾನಿ ಮೋದಿ ಅವರ ಮಾನವ ಕೇಂದ್ರಿತ ಜಾಗತೀಕರಣ ಮತ್ತು ಜಾಗತಿಕ ಕಾಳಜಿಗಳ ಕುರಿತು ಅನುರಣನ ಮತ್ತು ಮನ್ನಣೆ ಇದು…ಎಲ್ಲಾ G20 ಸದಸ್ಯರಿಗೆ ಅವರ ಸಹಕಾರ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಭಾರತದ G20 ಶೆರ್ಪಾ ಅಮಿತಾಭ್ ಕಾಂತ್ ಅವರು ಈ ಘೋಷಣೆಯನ್ನು ಐತಿಹಾಸಿಕ ಎಂದು ಕರೆದಿದ್ದಾರೆ. ಎಲ್ಲಾ ಅಭಿವೃದ್ಧಿ ಮತ್ತು ಭೌಗೋಳಿಕ ರಾಜಕೀಯ ವಿಷಯಗಳಲ್ಲಿ ಶೇ 100 ಒಮ್ಮತವಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಭೌಗೋಳಿಕ ರಾಜಕೀಯದ ಉಲ್ಲೇಖವು ವಿಶೇಷವಾಗಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಪುರಿ, ಘೋಷಣೆಯ ಅಂಗೀಕಾರವನ್ನು ಸಂಭ್ರಮಾಚರಣೆ ಮತ್ತು ಸಂತೋಷದ ಕ್ಷಣ ಎಂದು ಕರೆದರು. “ನವದೆಹಲಿ ಘೋಷಣೆಯು ಸಂಪೂರ್ಣ ಗಮನವನ್ನು ತೋರಿಸುತ್ತದೆ. ಮಾನವ-ಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ತರಲು G20 ವೇದಿಕೆಯನ್ನು ಬಳಸುವುದು ಭಾರತೀಯ ವಿಧಾನವಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: G20 Summit: ನಾಯಕರ ಘೋಷಣೆಗೆ ಜಿ20 ಒಮ್ಮತ: ಪ್ರಧಾನಿ ಮೋದಿ
ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಮರು-ರಚಿಸಲಾದ ಭಾರತೀಯ ಪ್ಯಾರಾಗಳು “ಬಹಳ ಪ್ರಬುದ್ಧ ಮತ್ತು ಬುದ್ಧಿವಂತ ನಿಲುವನ್ನು ಬಿಂಬಿಸುತ್ತದೆ ಎಂದು ಹೇಳಿದರು. ಇದು ಯುದ್ಧದ ಯುಗವಲ್ಲ ಎಂದು ಭಾರತ ಪುನರುಚ್ಚರಿಸಿದೆ. ಕಳೆದ ವರ್ಷ ಸಮರ್‌ಕಂಡ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದಾಗ ಪ್ರಧಾನಿ ಮೋದಿಯವರು “ಯುದ್ಧದ ಯುಗವಲ್ಲ” ಎಂಬ ಹೇಳಿಕೆಯನ್ನು ನೀಡಿದ್ದರು.
“ಈ ರೀತಿಯ ಬಹುಪಕ್ಷೀಯ ವೇದಿಕೆಗಳನ್ನು ಬಳಸಬೇಕಾದ ಸ್ಪೂರ್ತಿ ಇದು ಎಂದು ನಾನು ಭಾವಿಸುತ್ತೇನೆ. ಈ ಕ್ಷೇತ್ರದಲ್ಲಿ ನನಗೆ 50 ವರ್ಷಗಳ ಅನುಭವ ಇರುವುದರಿಂದ ಅಲ್ಲ, ಇದು ಮೋದಿ ಅಭಿವೃದ್ಧಿ ಮಾದರಿಯಾಗಿದೆ” ಎಂದು ಸಚಿವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ