cheetahs: ನಮೀಬಿಯಾದಿಂದ ಬಂದಿರುವ ಚೀತಾಗಳನ್ನು ಜನರು ಯಾವಾಗ ನೋಡಬಹುದು? ಮೋದಿ ಹೇಳಿದ್ದೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 26, 2022 | 4:03 PM

ಚೀತಾಗಳನ್ನು ವೀಕ್ಷಿಸಲು ರಚಿಸಲಾದ ಕಾರ್ಯಪಡೆಯ ಶಿಫಾರಸಿನ ಆಧಾರದ ಮೇಲೆ ಜನರು ಚೀತಾಗಳನ್ನು ಯಾವಾಗ ನೋಡಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ‘ಮನ್ ಕಿ ಬಾತ್’ ಹೇಳಿದ್ದಾರೆ.

cheetahs: ನಮೀಬಿಯಾದಿಂದ ಬಂದಿರುವ ಚೀತಾಗಳನ್ನು ಜನರು ಯಾವಾಗ ನೋಡಬಹುದು? ಮೋದಿ ಹೇಳಿದ್ದೇನು?
Follow us on

ದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ವೀಕ್ಷಿಸಲು ರಚಿಸಲಾದ ಕಾರ್ಯಪಡೆಯ ಶಿಫಾರಸಿನ ಆಧಾರದ ಮೇಲೆ ಜನರು ಚೀತಾಗಳನ್ನು ಯಾವಾಗ ನೋಡಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ‘ಮನ್ ಕಿ ಬಾತ್’ ಹೇಳಿದ್ದಾರೆ. ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಹೇಳಿರುವಂತೆ ಸ್ನೇಹಿತರೇ, ಈಗಾಗಲೇ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ನೀವು ವೀಕ್ಷಣೆ ಮಾಡಲು ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ಚೀತಾಗಳ ಮೇಲೆ ನಿಗಾ ಇಡುತ್ತದೆ ಮತ್ತು ಅವು ಇಲ್ಲಿನ ಪರಿಸರಕ್ಕೆ ಎಷ್ಟು ಹೊಂದಿಕೊಂಡಿದೆ ಎಂಬುದನ್ನು ನೋಡುತ್ತದೆ. ಇದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು, ನಂತರದಲ್ಲಿ ನೀವು ಚೀತಾಗಳನ್ನು ನೋಡಬಹುದು ಎಂದು ಪಿಎಂ ಮೋದಿ ತಮ್ಮ ಮಾಸಿಕ ರೇಡಿಯೊ ಪ್ರಸಾರವಾದ ‘ಮನ್ ಕಿ ಬಾತ್’ನ 93 ನೇ ಸಂಚಿಕೆಯಲ್ಲಿ ಹೇಳಿದರು.

ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ದೇಶದ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ‘ಮನ್ ಕಿ ಬಾತ್’ನಲ್ಲಿ ಹೇಳಿದ್ದಾರೆ. 130 ಕೋಟಿ ಭಾರತೀಯರು ಸಂತೋಷದಿಂದಿದ್ದಾರೆ, ಹೆಮ್ಮೆಪಡುವ ವಿಷಯವಾಗಿದ್ದು, ಇದು ಪ್ರಕೃತಿಯ ಮೇಲಿನ ಭಾರತದ ಪ್ರೀತಿ ಎಂದು ಪ್ರಧಾನಿ ಹೇಳಿದರು. ನಮೀಬಿಯಾದಿಂದ ಬಂದಿರುವ ಚೀತಾಗಳನ್ನು ಯಾವಾಗ ನೋಡಲು ಅವಕಾಶ ಸಿಗುತ್ತದೆ ಎಂಬ ಕುತೂಹಲದ ಪ್ರಶ್ನೆಗಳನ್ನು ಜನರು ಮುಂದಿಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕಾರ್ಯಕ್ರಮದ ಮೂಲಕ ಚೀತಾಗಳಿಗೆ ಯಾವ ಹೆಸರನ್ನು ಇಡಬೇಕು ಎಂದು ಮೋದಿ ಜನರಲ್ಲಿ ಕೇಳಿದ್ದಾರೆ.

ಇದಕ್ಕೆ ನಿಮಗೆ ಕೆಲವೊಂದು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ MyGov ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು, ಅದರಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ನಾನು ಜನರಲ್ಲಿ ಹೇಳುತ್ತೇವೆ. ಈ ವೇದಿಕೆಯಲ್ಲಿ ಚೀತಾಗಳಿಗೆ ಯಾವ ಹೆಸರನ್ನು ಇಡಬೇಕು ಎಂದು ನಿಮ್ಮ ಪ್ರಶ್ನೆಯನ್ನು ಇಡುತ್ತೇವೆ, ಅಲ್ಲಿ ನೀವು ಉತ್ತರಿಸಬೇಕು ಎಂದು ಹೇಳೀದ್ದಾರೆ. ಇದೊಂದು ಮಗುವಿಗೆ ನಾಮಕರಣ ಮಾಡಿದಂತೆ ನೀವು ಇದಕ್ಕೆ ಹೆಸರನ್ನು ಸೂಚಿಸಬಹುದು. ನಮ್ಮ ಸಮಾಜ ಮತ್ತು ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆ, ನಮ್ಮನ್ನು ಸುಲಭವಾಗಿ ಸೆಳೆಯುತ್ತದೆ.

Published On - 4:01 pm, Mon, 26 September 22