Shocking News: ಪರೀಕ್ಷೆಯಲ್ಲಿ ತಪ್ಪು ಬರೆದಿದ್ದಕ್ಕೆ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ
10ನೇ ತರಗತಿ ಓದುತ್ತಿದ್ದ ನಿಖಿಲ್ ದೋಹ್ರೆ ಎಂಬ ವಿದ್ಯಾರ್ಥಿ ಸೆಪ್ಟೆಂಬರ್ 7ರಂದು ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ. ಅದಾದ ನಂತರ ಪ್ರಶ್ನೆ ಪತ್ರಿಕೆ ನೋಡಿ ಆತನ ಸಮಾಜ ವಿಜ್ಞಾನದ ಶಿಕ್ಷಕ ಆತನನ್ನು ಕ್ಲಾಸ್ ರೂಂನಲ್ಲೇ ಥಳಿಸಿದ್ದರು.
ನೊಯ್ಡಾ: ಉತ್ತರ ಪ್ರದೇಶದ ಔರಿಯಾದಲ್ಲಿ 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು (Dalit Student) ಆತನ ಶಾಲೆಯ ಶಿಕ್ಷಕ ಹೊಡೆದು ಕೊಲೆ (Murder) ಮಾಡಿರುವ ಆಘಾತಕಾರಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ತಪ್ಪಾಗಿ ಉತ್ತರ ಬರೆದಿದ್ದಕ್ಕೆ ಶಿಕ್ಷಕ ತನ್ನ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
10ನೇ ತರಗತಿ ಓದುತ್ತಿದ್ದ ನಿಖಿಲ್ ದೋಹ್ರೆ ಎಂಬ ವಿದ್ಯಾರ್ಥಿ ಸೆಪ್ಟೆಂಬರ್ 7ರಂದು ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ. ಅದಾದ ನಂತರ ಪ್ರಶ್ನೆ ಪತ್ರಿಕೆ ನೋಡಿ ಆತನ ಸಮಾಜ ವಿಜ್ಞಾನದ ಶಿಕ್ಷಕ ಆತನನ್ನು ಕ್ಲಾಸ್ ರೂಂನಲ್ಲೇ ಥಳಿಸಿದ್ದರು. ಬಳಿಕ ಆತನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಇದನ್ನೂ ಓದಿ: ದಲಿತ ಬಾಲಕ ದೇವರನ್ನು ಮುಟ್ಟಿದಕ್ಕೆ ಬೆದರಿಕೆ ಹಾಕಿ, 60 ಸಾವಿರ ದಂಡ ವಿಧಿಸಿದ ಗ್ರಾಮಸ್ಥರು
ತಾನು ಹೊಡೆದಿದ್ದರಿಂದ ಆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಶಿಕ್ಷಕನಿಗೂ ಗಾಬರಿಯಾಗಿತ್ತು. ಹೀಗಾಗಿ, ಅವರು ಕೂಡ ಆತನ ಚಿಕಿತ್ಸೆಗೆ ಹಣ ನೀಡಿ ಕಾಳಜಿ ತೋರಿಸಿದ್ದರು. ಸೆಪ್ಟೆಂಬರ್ 24ರಂದು ನಿಖಿಲ್ ಅವರ ತಂದೆ ರಾಜು ದೋಹ್ರೆ ಅವರು ತನ್ನ ಮಗನ ಶಿಕ್ಷಕನ ವಿರುದ್ಧ ಅಚ್ಚಲ್ದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಾತಿ ಸೂಚಿಸುವ ನಿಂದನೀಯ ಪದಗಳನ್ನು ಬಳಸಿ ತನ್ನ ಮಗನಿಗೆ ಬೈದು ಅವಮಾನ ಮಾಡಿದ್ದಾರೆ, ಮನಸಿಗೆ ಬಂದಂತೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿನ್ನು ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗಲ್ಲ; ಹೊಸ ಮಸೂದೆಗೆ ಅಂಗೀಕಾರ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಖಿಲ್ ಮೃತಪಟ್ಟಿದ್ದಾನೆ. ಆರೋಪಿ ಶಿಕ್ಷಕ ಅಶ್ವಿನ್ ಸಿಂಗ್ ವಿರುದ್ಧ ಅಚ್ಚಲ್ಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.