ಆಪ್ ಶಾಸಕ ಅಮಾನತ್ವುಲ್ಲಾ ಖಾನ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ವಕ್ಫ್ ಮಂಡಳಿಗೆ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನವಾಗಿರುವ ಆಪ್ ಶಾಸಕ ಅಮಾನತ್ವುಲ್ಲಾ ಖಾನ್ ಜೈಲೇ ಗತಿ.
ನವದೆಹಲಿ: ವಕ್ಫ್ ಮಂಡಳಿಗೆ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದೆಹಲಿ ಆಪ್ ಶಾಸಕ ಅಮಾನತ್ವುಲ್ಲಾ ಖಾನ್ಗೆ(Amanatullah Khan) ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
14 ದಿನಗಳ ಕಾಲ ನ್ಯಾಯಾಂದ ಬಂಧನಕ್ಕೆ ನೀಡಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಇಂದು (ಸೆ.26) ಆದೇಶ ಹೊರಡಿಸಿದೆ. ಈ ಮೂಲಕ ಆಮ್ ಆದ್ಮಿ ಪಾರ್ಟಿ ನಾಯಕರ ಜೈಲು ಪರೇಡ್ ಮುಂದುವರಿದಿದೆ. ಸಚಿವ ಸತ್ಯಪಾಲ್ ಜೈನ್ ಜೈಲು ಸೇರಿದ ಬಳಿಕ ಇದೀಗ ದೆಹಲಿ ಆಪ್ ಶಾಸಕ ಅಮಾನತುಲ್ಹಾ ಖಾನ್ ಸರದಿ. 2 ವರ್ಷಗಳ ಹಿಂದಿನ ವಕ್ಫ್ ಬೋರ್ಡ್‌ನಲ್ಲಿ ನಡೆಸಿದ ಭ್ರಷ್ಟಾಚಾರ ಪ್ರಕರಣದಡಿ ಅಮಾನತುಲ್ಹಾ ಬಂಧನವಾಗಿದ್ದು, ಇದೀಗ ಜೈಲು ಸೇರಿದ್ದಾರೆ.
ಎಎಪಿ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರನ್ನು ದೆಹಲಿ ಪೊಲೀಸ್ ಘಟಕದ ಭ್ರಷ್ಟಾಚಾರ ನಿಗ್ರಹ ದಳ (ACB)ಸೆಪ್ಟೆಂಬರ್ 16ರಂದು ಬಂಧಿಸಿತ್ತು. ವಕ್ಫ್ ಮಂಡಳಿಗೆ ಅಕ್ರಮ ನೇಮಕಾತಿ ಆರೋಪದ ಮೇಲೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಆ ವೇಳೆ ದೋಷಾರೋಪಣೆಯ ವಸ್ತುಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿತ್ತು.
ಅಲ್ಲದೇ ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿ ವೇಳೆ ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನತುಲ್ಲಾ ಖಾನ್ ಅವರ ಆಪ್ತ ಸಹಾಯಕ ಎಂದು ಹೇಳುವ ವ್ಯಕ್ತಿಯಿಂದ ಎರಡು ಶಸ್ತ್ರಾಸ್ತ್ರಗಳು ಮತ್ತು 24 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು.
ನಿಯಮಗಳು, ನಿಬಂಧನೆಗಳು ಮತ್ತು ಕಾನೂನಿನ ಉದ್ದೇಶಪೂರ್ವಕ ಮತ್ತು ಕ್ರಿಮಿನಲ್ ಉಲ್ಲಂಘನೆ, ಸ್ಥಾನದ ದುರುಪಯೋಗ ಮತ್ತು ಆರ್ಥಿಕ ನಷ್ಟವನ್ನು ಉಂಟು ಮಾಡುವುದು ಸೇರಿದಂತೆ ಅಪರಾಧಗಳಿಗಾಗಿ ಆಗಿನ ವಕ್ಫ್ ಬೋರ್ಡ್ ಸಿಇಒ ಮೆಹಬೂಬ್ ಆಲಂ ವಿರುದ್ಧವೂ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲಾಗಿದೆ ಎನ್ನಲಾಗಿದೆ.
ದಿಲ್ಲಿಯ ಅಬಕಾರಿ ನೀತಿಗೆ (2021-22) ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Mon, 26 September 22