ತಂದೆಗೆ ಕಿಡ್ನಿ ಕೊಡೋ ಸಮಯ ಬಂದಾಗ ಮಗ ಓಡಿ ಹೋಗಿದ್ದ: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್​ಜೆಡಿ ಹೀನಾಯವಾಗಿ ಸೋತ ಬಳಿಕ, ಲಾಲು ಪ್ರಸಾದ್ ಯಾದವ್ ಮನೆಯಲ್ಲಿ ಕುದಿಯುತ್ತಿದ್ದ ಕುಟುಂಬ ಕಲಹ ಬೀದಿಗೆ ಬಂದಿದೆ. ತೇಜಸ್ವಿ ಯಾದವ್ ಮತ್ತು ಅವರ ಆಪ್ತರಿಂದ ಅವಮಾನಕ್ಕೊಳಗಾಗಿರುವುದಾಗಿ ಆರೋಪಿಸಿ ಇತ್ತೀಚೆಗೆ ರಾಜಕೀಯದಿಂದ ಹೊರನಡೆಯುವುದಾಗಿ ಘೋಷಿಸಿದ್ದ ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂವೇದನಾಶೀಲ ವೀಡಿಯೊವನ್ನು ಹಂಚಿಕೊಂಡಿದ್ದು, ವಿವಾದವನ್ನು ಮತ್ತಷ್ಟು ಹೆಚ್ಚಾಗಿದೆ.

ತಂದೆಗೆ ಕಿಡ್ನಿ ಕೊಡೋ ಸಮಯ ಬಂದಾಗ ಮಗ ಓಡಿ ಹೋಗಿದ್ದ: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ
ರೋಹಿಣಿ ಆಚಾರ್ಯ

Updated on: Nov 19, 2025 | 8:26 AM

ಪಾಟ್ನಾ, ನವೆಂಬರ್ 19: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್​ಜೆಡಿ(RJD) ಹೀನಾಯವಾಗಿ ಸೋತ ಬಳಿಕ, ಲಾಲು ಪ್ರಸಾದ್ ಯಾದವ್ ಮನೆಯಲ್ಲಿ ಕುದಿಯುತ್ತಿದ್ದ ಕುಟುಂಬ ಕಲಹ ಬೀದಿಗೆ ಬಂದಿದೆ. ತೇಜಸ್ವಿ ಯಾದವ್ ಮತ್ತು ಅವರ ಆಪ್ತರಿಂದ ಅವಮಾನಕ್ಕೊಳಗಾಗಿರುವುದಾಗಿ ಆರೋಪಿಸಿ ಇತ್ತೀಚೆಗೆ ರಾಜಕೀಯದಿಂದ ಹೊರನಡೆಯುವುದಾಗಿ ಘೋಷಿಸಿದ್ದ ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂವೇದನಾಶೀಲ ವೀಡಿಯೊವನ್ನು ಹಂಚಿಕೊಂಡಿದ್ದು, ವಿವಾದವನ್ನು ಮತ್ತಷ್ಟು ಹೆಚ್ಚಾಗಿದೆ.

ರೋಹಿಣಿ ಅವರು ಪತ್ರಕರ್ತ ಕನ್ಹಯ್ಯಾ ಭೇಲಾರಿ ಅವರೊಂದಿಗಿನ ತಮ್ಮ ಫೋನ್ ಸಂಭಾಷಣೆಯ 5 ನಿಮಿಷ, 44 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ನಾನು ನನ್ನ ಪೋಷಕರ ಮನೆಗೆ ಎಷ್ಟು ಬಾರಿ ಭೇಟಿ ನೀಡುತ್ತೇನೆ ಮತ್ತು ನಾನು ಎಷ್ಟು ಕಾಲ ಅಲ್ಲಿಯೇ ಇರುತ್ತೇನೆ ಎಂಬುದರ ಕುರಿತು ನಿಮ್ಮ ಬಳಿ ಯಾವುದೇ ಡೇಟಾ ಇದೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸುವುದನ್ನು ಕೇಳಬಹುದು.

ಕಿಡ್ನಿ ಕೊಡೋ ಸಮಯ ಬಂದಾಗ ಮಗ ಓಡಿ ಹೋಗಿದ್ದ ಎಂದು ತೇಜಸ್ವಿ ಯಾದವ್​ ಬಗ್ಗೆ ರೋಹಿಣಿ ಟೀಕೆ ಮಾಡಿದ್ದಾರೆ. ಹಾಗೆಯೇ ರೋಹಿನಿ ಚುನಾವಣೆಗೂ ಮುನ್ನ ಲಾಲು ನಿವಾಸದಲ್ಲಿ ಹೆಚ್ಚು ದಿನಗಳ ಕಾಲ ಇದ್ದರು, ಚುನಾವಣೆಯಲ್ಲಿ ಅವರು ಸೋಲು ಕಾಣುತ್ತಿದ್ದಂತೆ ಮನೆಯಿಮದ ಹೊರಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಆರ್‌ಜೆಡಿ ಸೋಲಿನ ಬಳಿಕ ಕುಟುಂಬ, ರಾಜಕೀಯವೆರಡನ್ನೂ ತೊರೆದ ಲಾಲು ಯಾದವ್ ಮಗಳು ರೋಹಿಣಿ ಆಚಾರ್ಯ

ತನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡುವ ನಿರ್ಧಾರವನ್ನು ಪ್ರಶ್ನಿಸುವವರಿಗೆ ಅವರು ಸವಾಲು ಹಾಕಿದರು, ಅವರು ಸಾರ್ವಜನಿಕ ಚರ್ಚೆಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು. ಮಗಳ ಮೂತ್ರಪಿಂಡ ಕೊಳಕು ಎಂದು ಕರೆಯುವವರು ಮೊದಲು ತಮ್ಮ ಸ್ವಂತ ಮೂತ್ರಪಿಂಡವನ್ನು ದಾನ ಮಾಡಬೇಕು. ಬಾಟಲಿ ರಕ್ತ ನೀಡುವ ಯೋಚನೆ ಬಂದರೆ ನಡುಗುವ ಜನರು ಮೂತ್ರಪಿಂಡ ದಾನದ ಬಗ್ಗೆ ಬೋಧಿಸುತ್ತೀರಾ.

ತೇಜಸ್ವಿ ಯಾದವ್ ಲಾಲು ಪ್ರಸಾದ್‌ಗೆ ತಮ್ಮ ಮೂತ್ರಪಿಂಡವನ್ನು ಏಕೆ ನೀಡಲಿಲ್ಲ ಎಂದು ರೋಹಿಣಿ ಕೇಳುತ್ತಿದ್ದಾರೆ. ಮೂತ್ರಪಿಂಡ ದಾನದ ಬಗ್ಗೆ ಮಾತನಾಡುವುದು ಸುಲಭ, ಆದರೆ ಯಾರೂ ಅದನ್ನು ಮಾಡುವುದಿಲ್ಲ.

ತೇಜಸ್ವಿ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ, ನನ್ನ ಮೇಲೆ ಚಪ್ಪಲಿ ಎತ್ತಿದ್ದಾರೆ, ಆಪ್ತರು ನನ್ನದು ಕೊಳಕು ಕಿಡ್ನಿ, ಈ ಕೊಳಕು ಕಿಡ್ನಿಯ ಬದಲಾಗಿ ಚುನಾವಣಾ ಟಿಕೆಟ್ ಪಡೆದಿದ್ದಳು ಎಂದು ಆರೋಪಿಸಿರುವುದಾಗಿ ರೋಹಿಣಿ ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:24 am, Wed, 19 November 25

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us