ಗಾಂಧೀಜಿಯವರ ಜನ್ಮ ಜಾತಕದಲ್ಲಿ ಯಾವ ಯೋಗವಿತ್ತು? ಸ್ವಾತಂತ್ರ್ಯ ಹೋರಾಟದ ಬಗ್ಗೆ ಕುಂಡಲಿಯಲ್ಲಿ ಹೇಳಿದ್ದೇನು?
ಗಾಂಧಿ ಅವರ ಜಾತಕ ಹೇಗಿತ್ತು? ಅವರ ಜನ್ಮ ಕುಂಡ್ಲಿ ಏನು ಹೇಳುತ್ತದೆ. ಇಲ್ಲಿದೆ ಮಾಹಿತಿ. ಮಹಾತ್ಮ ಗಾಂಧೀಜಿಯವರು 2 ಅಕ್ಟೋಬರ್ 1869 ರಂದು ಬೆಳಿಗ್ಗೆ 8.40 ಕ್ಕೆ ಪೋರಬಂದರ್‌ನಲ್ಲಿ ಜನಿಸಿದರು. ಇವರ ಜನ್ಮ ಜಾತಕದ ಪ್ರಕಾರ ತುಲಾ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗವು ಚಾಮರ ಯೋಗ ಇತ್ತು.
ಇಂದು ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನ, ಸಂದರ್ಭದಲ್ಲಿ ಭಾರತದದ್ಯಾಂತ ಸಂಭ್ರಮದಿಂದ ಈ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಗಾಂಧಿ ಅವರ ಆದರ್ಶಗಳನ್ನು ಬೆಳೆಸುವ ಸಂದೇಶಗಳನ್ನು ಭಾರತದದ್ಯಾಂತ ಕೂಗಿ ಹೇಳಲಾಗುತ್ತಿದೆ. ಈ ಮಧ್ಯೆ ಇಷ್ಟೊಂದು ಸಾಧನೆ ಮಾಡಿದ ಗಾಂಧಿ ಅವರ ಜಾತಕ ಹೇಗಿತ್ತು? ಅವರ ಜನ್ಮ ಕುಂಡ್ಲಿ ಏನು ಹೇಳುತ್ತದೆ. ಇಲ್ಲಿದೆ ಮಾಹಿತಿ. ಮಹಾತ್ಮ ಗಾಂಧೀಜಿಯವರು 2 ಅಕ್ಟೋಬರ್ 1869 ರಂದು ಬೆಳಿಗ್ಗೆ 8.40 ಕ್ಕೆ ಪೋರಬಂದರ್‌ನಲ್ಲಿ ಜನಿಸಿದರು. ಇವರ ಜನ್ಮ ಜಾತಕದ ಪ್ರಕಾರ ತುಲಾ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗವು ಚಾಮರ ಯೋಗ ಇತ್ತು. ಗುರು ಮತ್ತು ಚ೦ದ್ರರಿಂದಲೂ ಗಜಕೇಸರಿ ಯೋಗವು ಏರ್ಪಡುತ್ತಿದ್ದು, ಈ ಎಲ್ಲಾ ಸಂಯೋಗಗಳಿಂದಾಗಿ, ಗಾಂಧಿ ಅವರ ಕಾಲದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.
ಉತ್ತರಾರ್ಧದಿಂದ ಎಲ್ಲಾ ಲಾಭದಾಯಕ ಗ್ರಹಗಳು ಕೇಂದ್ರದಲ್ಲಿ ಇರುವುದರಿಂದ, ಆದರ್ಶ ವ್ಯಕ್ತಿಯಾಗಲು ಸಾಧ್ಯವಾಗಿತ್ತು. ಗಾಂಧಿ ಅವರು 4 ಸೆಪ್ಟೆಂಬರ್ 1888ರಂದು ಕಾನೂನು ಅಧ್ಯಯನ ಮಾಡಲು ಲಂಡನ್‌ಗೆ ಹೋದರು. ಈ ಸಮಯದಲ್ಲಿ ಚತುರ್ವಿಂಶಾಂಶ ಕುಂಡಲಿಯಲ್ಲಿ ಪಂಚಮೇಶನು ಜ್ಞಾನದ ಅಧಿಪತಿ ಮತ್ತು ಶುಕ್ರನು ಹನ್ನೆರಡನೆಯ ಅಧಿಪತಿಯಾಗಿದ್ದು, ಉಚ್ಛ ಶುಕ್ರನು ಹತ್ತನೇ ಮನೆಯಲ್ಲಿದ್ದನು. ಇದು ವಿದೇಶಕ್ಕೆ ಹೋಗುವ ಮೂಲಕ ಶೈಕ್ಷಣಿಕ ಪ್ರಗತಿಯ ಸಾಧ್ಯತೆಯನ್ನು ತೋರಿಸುತ್ತದೆ. ಆ ಸಮಯದಲ್ಲಿ ರಾಹುವಿನ ದಶಾ ಶುಕ್ರನ ದೂರವಾಗಿತ್ತು. ಚತುರ್ವಿಂಶಾಂಶ ಕುಂಡಲಿಯ ಹನ್ನೆರಡನೇ ಮನೆಯಲ್ಲಿ ರಾಹು ಸ್ಥಾನ ಪಡೆದಿದ್ದಾನೆ. ರಾಹುವನ್ನು ವಿದೇಶಗಳ ಕಾರಕ ಎಂದೂ ಹೇಳಲಾಗುತ್ತದೆ.
ಇದನ್ನೂ ಓದಿ: ‘ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಚಿಂತನೆಯನ್ನು ಮಕ್ಕಳು ಅಳವಡಿಸಿಕೊಳ್ಳಲಿ’: ಶಿವರಾಜ್ಕುಮಾರ್
ಜೂನ್ 10, 1891ರಂದು, ಗಾಂಧಿ ಅವರು ವಕೀಲ ಶಿಕ್ಷಣ ಪೂರ್ಣಗೊಳಿಸಿದ ನಂತರ ಭಾರತಕ್ಕೆ ಮರಳಿದರು ಮತ್ತು ಬಾಂಬೆಯ ಹೈಕೋರ್ಟ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅದರೆ ಅವರಿಗೆ ಇದರಲ್ಲಿ ಉನತ್ನಮಟ್ಟಕ್ಕೆ ಹೋಗಲು ಸಾಧ್ಯವಾಗಿಲ್ಲ. ಏಕೆಂದರೆ, ಆ ಸಮಯದಲ್ಲಿ ಜನ್ಮ ಕುಂಡ್ಲಿಯಲ್ಲಿ ದೋಷಗಳಿತ್ತು. ಇನ್ನು ಗಾಂಧಿ ಅವರು ಆಫ್ರಿಕಾ ಪ್ರವಾಸ ಮತ್ತು ಅಲ್ಲಿ ಅವರು 22 ವರ್ಷ ಮಾಡಿದ ಸೇವೆಗಳ ಫಲವಾಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿತ್ತು.
ನಂತರ ಗಾಂಧಿ ಅವರ ಹೋರಾಟ ಮುಂದುವರಿದು 1947 ಆಗಸ್ಟ್ 15ರಂದು ದೊರಕಿತ್ತು. ಮಂಗಳ, ಲಗ್ನ ಮತ್ತು ಅಂತರದಶ ನಾಥ ಶುಕ್ರ ಅಷ್ಟಮೇಷದ ಪ್ರಕಾರ ಮರಣ ಸಂಭವಿಸಲಿದೆ ಎಂದು ಹೇಳಲಾಗಿತ್ತು. ಈ ಪ್ರಕಾರವೇ ಜನವರಿ 30, 1948 ಸಾವನ್ನಪ್ಪಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ