ಅಮೃತಸರದ ಸ್ವರ್ಣ ಮಂದಿರದಲ್ಲಿ ಯೋಗ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಅರ್ಚನಾ ಯಾರು?

ಅರ್ಚನಾ ಮಕ್ವಾನಾ ಎಂಬುವವರು ಅಮೃತಸರದಲ್ಲಿರುವ ಸ್ವರ್ಣ ಮಂದಿರದಲ್ಲಿ ಯೋಗ ಮಾಡಿ ಎಲ್ಲರ ಕೆಂಗಣ್ಣಿಗೆ ಪಾತ್ರರಾಗಿದ್ದರು. ಅರ್ಚನಾ ಯಾರು?, ಅವರ ವೃತ್ತಿ ಏನು, ಎಲ್ಲಿಯವರು ಎನ್ನುವ ಮಾಹಿತಿ ಇಲ್ಲಿದೆ.

ಅಮೃತಸರದ ಸ್ವರ್ಣ ಮಂದಿರದಲ್ಲಿ ಯೋಗ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಅರ್ಚನಾ ಯಾರು?
ಅರ್ಚನಾ

Updated on: Jun 24, 2024 | 10:48 AM

ಅರ್ಚನಾ ಮಕ್ವಾನಾ(Archana Makwana) ಎಂಬುವವರು  ಅಂತಾರಾಷ್ಟ್ರೀಯ ಯೋಗ ದಿನ(International Yoga Day)ದಂದು ಅಮೃತಸರದ ಸ್ವರ್ಣ ಮಂದಿರದಲ್ಲಿ ಯೋಗ ಮಾಡಿ ಎಲ್ಲರ  ಕೆಂಗಣ್ಣಿಗೆ ಗುರಿಯಾಗಿದ್ದರು.  ಗುಜರಾತ್​ನ ಅರ್ಚನಾ ಮಕ್ವಾನಾ ಅವರು ಜೂನ್ 21ರಂದು ಹರ್ಮಂದಿರ್ ಸಾಹಿಬ್​ನಲ್ಲಿ ಯೋಗ ಮಾಡಿದ್ದರು.

ಅದರ ಕೆಲವು ಫೋಟೊಗಳು ಮತ್ತು ವಿಡಿಯೋಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು.

ಅದೇ ಸಮಯದಲ್ಲಿ ಕೊತ್ವಾಲಿ ಪೊಲೀಸ್​ ಠಾಣೆಯ ಪೊಲೀಸರು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಅರ್ಚನಾ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಎಫ್​ಐಆರ್​ ದಾಖಲಿಸಿದೆ.ಗೋಲ್ಡನ್ ಟೆಂಪಲ್ ಮ್ಯಾನೇಜರ್ ಭಗವತ್ ಸಿಂಗ್ ಯುವತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ಓದಿ: International Yoga Day: ಅಂತಾರಾಷ್ಟ್ರೀಯ ಯೋಗ ದಿನ; ಭಾರತದ ಗಡಿಯಲ್ಲಿ ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು

ಆ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಆ ಸಮಯದಲ್ಲಿ ಎಲ್ಲಿದ್ದರು ಎಂಬ ವಿಚಾರದ ಕುರಿತೂ ಕೂಡ ಮಾತುಕತೆ ನಡೆಸಲಾಗುತ್ತಿದೆ.

ಅರ್ಚನಾ ಮಕ್ವಾನಾ ಯಾರು?
ಅರ್ಚನಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್,  ಗುಜರಾತ್‌ನ ವಡೋದರಾ ನಿವಾಸಿ. ಅರ್ಚನಾ ವಿರುದ್ಧದ ಪ್ರತಿಭಟನೆ ಬಗ್ಗೆ ತಿಳಿದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಉದ್ದೇಶವಲ್ಲ, ಯಾರಿಗಾದರೂ ನನ್ನ ನಡವಳಿಕೆಯಿಂದ ದುಃಖವಾಗಿದ್ದರೆ ಎಲ್ಲರ ಕ್ಷಮೆ ಕೇಳುತ್ತೇನೆ , ಶ್ರೀ ಹರ್ಮಂದಿರ್​ನಲ್ಲಿ ಯೋಗ ಮಾಡುವುದು ಅಪರಾಧಕ್ಕೆ ಸಮ ಎಂದು ನನಗೆ ತಿಳಿದಿರಲಿಲ್ಲ, ಮುಂದೆ ಯಾವುದೇ ಧಾರ್ಮಿಕ ಸ್ಥಳದಲ್ಲಿ ಇಂತಹ ತಪ್ಪು ಮಾಡುವುದಿಲ್ಲ ಎಂದಿದ್ದಾರೆ.

ಮಾಹಿತಿ ಪ್ರಕಾರ ಗೋಲ್ಡನ್ ಟೆಂಪಲ್ ನ ಮಾರ್ಬಲ್ ಪಥದಲ್ಲಿ ಅರ್ಚನಾ ಮಕ್ವಾನಾ ಯೋಗ ಮಾಡಿದ್ದಾರೆ. ಈ ಮಾರ್ಗವನ್ನು ‘ಪರಿಕ್ರಮ’ ಎಂದು ಕರೆಯಲಾಗುತ್ತದೆ, ಇಲ್ಲಿ ಯಾತ್ರಿಕರು ಪ್ರದಕ್ಷಿಣೆ ಹಾಕಬಹುದು ಮತ್ತು ಪ್ರಾರ್ಥನೆ ಸಲ್ಲಿಸಬಹುದು. ಕೆಲವರು ಉದ್ದೇಶಪೂರ್ವಕವಾಗಿ ಪವಿತ್ರ ಸ್ಥಳದ ಪಾವಿತ್ರ್ಯತೆಯನ್ನು ಕಡೆಗಣಿಸುತ್ತಾರೆ ಎಂದು ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ. ಯುವತಿಯ ಕ್ರಮದಿಂದ ಸಿಖ್ಖರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:37 am, Mon, 24 June 24