ನವದೆಹಲಿ: ಮಣಿಪುರದಲ್ಲಿ ದ್ವೇಷದ ಬೀಜವನ್ನು ಬಿತ್ತಿದ್ದು ಯಾರು? ಕಾಂಗ್ರೆಸ್ (Congress) ಪಕ್ಷವೇ ಅಲ್ಲಿ ದ್ವೇಷವನ್ನು ಬಿತ್ತಿತ್ತು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಈಶಾನ್ಯವು ಬಾಂಬ್, ಬಂದ್ ಮತ್ತು ಸ್ಫೋಟಗಳಿಗೆ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ನವರ ನೀತಿ ‘ಲುಕ್ ಈಸ್ಟ್’ ಆಗಿತ್ತು. ಆದರೆ ಪ್ರಧಾನಿ ಮೋದಿ ಅವರು ‘ಆ್ಯಕ್ಟ್ ಈಸ್ಟ್’ ನೀತಿಯನ್ನು ಪ್ರಾರಂಭಿಸಿದರು. ಭಾರತ ಸರ್ಕಾರವು ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
‘ತುಕ್ಡೆ-ತುಕ್ಡೆ’ ಗ್ಯಾಂಗ್‌ನ ಬೆಂಬಲಿಗರು ಮಾತ್ರ ‘ಭಾರತ ಮಾತೆಯನ್ನು’ ವಿಭಜಿಸುವ, ಕೊಲ್ಲುವ ಬಗ್ಗೆ ಯೋಚಿಸಬಹುದು. ಅವರಿಗೆ ಮಣಿಪುರದ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ಸಂವಿಧಾನದ ಹತ್ಯೆ, ಭಾರತ ಮಾತೆಯ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ರಾಜಸ್ಥಾನದ ಮಹಿಳೆಯರ ಬಗ್ಗೆ ಚಿಂತೆಯಿಲ್ಲ, ನೀವು (ಕಾಂಗ್ರೆಸ್ನವರು) ಪಶ್ಚಿಮ ಬಂಗಾಳ, ಬಿಹಾರ, ಮಣಿಪುರದ ಮಹಿಳೆಯರಲ್ಲಿ ತಾರತಮ್ಯ ಮಾಡಿ ಎಂದು ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH | Union Minister Anurag Thakur says, “Who sowed the seeds of hatred in Manipur? It was sown by Congress. During Congress rule, Northeast was known for ‘Bomb, Bandh and Blast’. Your policy was ‘Look East’ but PM Modi started ‘Act East’ policy… Govt of India is taking all… pic.twitter.com/907lbI4mkz
— ANI (@ANI) August 11, 2023
ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಮೈತ್ರಿಕೂಟ ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಚರ್ಚೆಯ ಕೊನೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣದ ಬಗ್ಗೆ ಕಾಂಗ್ರೆಸ್ ಸಂಸದರು ಮಾಡಿದ ಟೀಕೆಗೆ ಅನುರಾಗ್ ಠಾಕೂರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
#WATCH | Union Minister Anurag Thakur says, “Only supporters of ‘Tukde-Tukde’ gang can think of dividing, killing ‘Bharat Mata’. They are not concerned about the women of Manipur. They talk about the murder of Constitution, Bharat Mata. Rahul Gandhi is not worried about the women… pic.twitter.com/xM7qNwZDD7
— ANI (@ANI) August 11, 2023
ಕಾಂಗ್ರೆಸ್ ನಾಯಕರಿಗೆ ಅಸಭ್ಯ ಪದಗಳನ್ನು ಬಳಸುವುದು ಮತ್ತು ಸುಳ್ಳು ಹೇಳುವುದು ಅಭ್ಯಾಸವಾಗಿದೆ. ಅವರ ಹೆಮ್ಮೆ ಮತ್ತು ಅಹಂ ಅವರನ್ನು ‘ಘಮಂಡಿಯಾ’ ಮೈತ್ರಿಕೂಟದ ಸದಸ್ಯರನ್ನಾಗಿ ಮಾಡಿದೆ ಎಂದು ಠಾಕೂರ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ‘ನಕಲಿ ಸಹಿ’ ಆರೋಪ: ರಾಜ್ಯಸಭೆಯಿಂದ ಎಎಪಿ ಸಂಸದ ರಾಘವ್ ಚಡ್ಡಾ ಅಮಾನತು
ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಠಾಕೂರ್, ತುಕ್ಡೆ-ತುಕ್ಡೆ ಗ್ಯಾಂಗ್‌ನ ಬೆಂಬಲಿಗರು ಮಾತ್ರ ನಮ್ಮ ಭಾರತಮಾತೆಯನ್ನು ಕೊಲ್ಲುವ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ. ಅವರು (ರಾಹುಲ್ ಗಾಂಧಿ) ಮಣಿಪುರದ ಬಗ್ಗೆ ಕಾಳಜಿ ಹೊಂದಿಲ್ಲ, ಆದರೆ ಮಾಧ್ಯಮಗಳಲ್ಲಿ ತಮ್ಮ ವರ್ಚಸ್ಸಿನ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.
ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ ಎಂಬ ರಾಹುಲ್ ಗಾಂಧಿಯ ಹೇಳಿಕೆ ಹಾಗೂ ಇತರ ಕೆಲವು ಹೇಳಿಕೆಗಳನ್ನು ನಂತರ ಸ್ಪೀಕರ್ ಓಂ ಬಿರ್ಲಾ ಅವರು ಕಡತದಿಂದ ತೆಗೆದುಹಾಕಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ