ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪಾದಯಾತ್ರೆಯನ್ನು ಆರಂಭಿಸಲು ರಾಮೇಶ್ವರಂ ಆಯ್ಕೆ ಮಾಡಿದ್ದೇಕೆ?

|

Updated on: Jul 27, 2023 | 5:45 PM

ರಾಮೇಶ್ವರಂ 64 ತೀರ್ಥಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 22 ಒಂದೇ ದೇವಾಲಯದಲ್ಲಿ ಕಂಡುಬರುತ್ತವೆ. ಪಟ್ಟಣದ ಪ್ರಸಿದ್ಧ ರಾಮನಾಥಸ್ವಾಮಿ ದೇವಸ್ಥಾನದಲ್ಲಿ 22 ತೀರ್ಥಗಳು ಅಥವಾ ಬಾವಿಗಳಿವೆ. ಈ 22 ಬಾವಿಗಳು ಅಯೋಧ್ಯೆಗೆ ಹೋಗುವಾಗ ಇಲ್ಲಿಗೆ ಆಗಮಿಸಿದಾಗ ಭಗವಾನ್ ರಾಮನ ಬತ್ತಳಿಕೆಯಲ್ಲಿದ್ದ 22 ಬಾಣಗಳನ್ನು ಪ್ರತಿನಿಧಿಸುತ್ತವೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪಾದಯಾತ್ರೆಯನ್ನು ಆರಂಭಿಸಲು ರಾಮೇಶ್ವರಂ ಆಯ್ಕೆ ಮಾಡಿದ್ದೇಕೆ?
ರಾಮೇಶ್ವರಂ
Follow us on

ಚೆನ್ನೈ ಜುಲೈ 27: ತಮಿಳುನಾಡಿನ (Tamil Nadu)  ರಾಮೇಶ್ವರಂನಲ್ಲಿ (Rameswaram) ಬಿಜೆಪಿ ಅಧ್ಯಕ್ಷ  ಅಣ್ಣಾಮಲೈ (Annamalai) ಅವರ ‘ಎನ್ ಮಣ್ಣ್ ಎನ್ ಮಕ್ಕಳ್’ ಯಾತ್ರೆ ನಾಳೆ (ಜುಲೈ 28) ಆರಂಭವಾಗಲಿದ್ದು  ಬಿಜೆಪಿ ಇತಿಹಾಸ ಮತ್ತು ಪುರಾಣದಲ್ಲಿ ಪ್ರಾಮುಖ್ಯತೆ ಪಡೆದಿರುವ ದಕ್ಷಿಣಭಾರತದ ರಾಮೇಶ್ವರಂವನ್ನೇ  ಆಯ್ಕೆ ಮಾಡಿದ್ದು ಯಾಕೆ ಎಂಬುದಕ್ಕೆ ಇಲ್ಲಿದೆ ಉತ್ತರ. ರಾಮೇಶ್ವರಂ ದೇಶದ 12 ಪ್ರಸಿದ್ಧ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಜುಲೈ 27 ರಂದು ಭಾರತದ 11 ನೇ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ. ಅವರು ಜನಿಸಿದ್ದೇ ಈ ಕರಾವಳಿ ಪಟ್ಟಣದಲ್ಲಿ.

ಇದು ಸ್ವಾಮಿ ವಿವೇಕಾನಂದರು ಭೇಟಿ ನೀಡಿದ ಪಟ್ಟಣಗಳಲ್ಲಿ ಒಂದಾಗಿದೆ. ರಾಮನಾಡಿನ ಜಮೀನ್ದಾರ್ ಮಧುರೈನಲ್ಲಿ ಯುವ ಸ್ವಾಮಿ ವಿವೇಕಾನಂದರಿಗೆ ಆತಿಥ್ಯ ವಹಿಸಿದ್ದರು. ಅವರೇ ವಿಶ್ವ ಧರ್ಮಗಳ ಸಂಸತ್ತಿಗೆ ಹಾಜರಾಗಲು ಚಿಕಾಗೋ ಪ್ರವಾಸವನ್ನು ಪ್ರಾಯೋಜಿಸಿದರು.
ರಾಮೇಶ್ವರಂ ರಾಮ ಲಂಕಾದಿಂದ ಹಿಂದಿರುಗುವಾಗ ರಾವಣನನ್ನು (ಬ್ರಾಹ್ಮಣನಾಗಿದ್ದ) ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದ ಸ್ಥಳವಾಗಿದೆ. ರಾಮೇಶ್ವರಂನಲ್ಲಿ ಸಿಗುವ ಮರಳನ್ನು ಬಳಸಿ ಸೀತಾದೇವಿ ಶಿವಲಿಂಗವನ್ನು ರಚಿಸಿದ್ದಳ. ಇನ್ನೂ ಒಂದು ಶಿವಲಿಂಗವಿದೆ ಮತ್ತು ಅದು ಶ್ರೀರಾಮನ ಕಟ್ಟಾ ಭಕ್ತ ಹನುಮಂತನು ತಂದದ್ದು.

ರಾಮೇಶ್ವರಂ 64 ತೀರ್ಥಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 22 ಒಂದೇ ದೇವಾಲಯದಲ್ಲಿ ಕಂಡುಬರುತ್ತವೆ. ಪಟ್ಟಣದ ಪ್ರಸಿದ್ಧ ರಾಮನಾಥಸ್ವಾಮಿ ದೇವಸ್ಥಾನದಲ್ಲಿ 22 ತೀರ್ಥಗಳು ಅಥವಾ ಬಾವಿಗಳಿವೆ. ಈ 22 ಬಾವಿಗಳು ಅಯೋಧ್ಯೆಗೆ ಹೋಗುವಾಗ ಇಲ್ಲಿಗೆ ಆಗಮಿಸಿದಾಗ ಭಗವಾನ್ ರಾಮನ ಬತ್ತಳಿಕೆಯಲ್ಲಿದ್ದ 22 ಬಾಣಗಳನ್ನು ಪ್ರತಿನಿಧಿಸುತ್ತವೆ.

ಶ್ರೀರಾಮ ಮತ್ತು ಅವರ ಸಹೋದರ ಲಕ್ಷ್ಮಣರು ತಮ್ಮ ಕೂದಲನ್ನು (ಜಡೆ) ತೊಳೆದ ಬಾವಿಯೇ ಜಡತೀರ್ಥಂ. ದೇವಾಲಯದಲ್ಲಿರುವ ಕೊನೆಯ ಬಾವಿಯನ್ನು (ಅಥವಾ ತೀರ್ಥಂ) ಕೋಡಿ ತೀರ್ಥಂ ಎಂದು ಕರೆಯಲಾಗುತ್ತದೆ. ಶ್ರೀಕೃಷ್ಣನು ತನ್ನ ಮಾವ ಕಂಸನನ್ನು ಕೊಂದ ಪಾಪದಿಂದ ತನ್ನನ್ನು ತಾನು ಮುಕ್ತಗೊಳಿಸಲು ಇದು ಸಹಾಯ ಮಾಡಿದೆ ಎಂದು ನಂಬಲಾಗಿದೆ.

ವಿಲ್ಲೋಂಡಿ ತೀರ್ಥಂ, ತಮಿಳಿನಲ್ಲಿ ವಿಲ್ ಎಂದರೆ ಬಿಲ್ಲು. ಭಗವಾನ್ ರಾಮನು ನೆಲದ ಮೇಲೆ ಬಾಣವನ್ನು ಹೂಡಿದನು. ಚಿಮ್ಮಿದ ಕಾರಂಜಿ ಸೀತೆಯ ಬಾಯಾರಿಕೆಯನ್ನು ನೀಗಿಸಲು ಸಹಾಯ ಮಾಡಿತು ಎಂದು ಹೇಳಲಾಗುತ್ತದೆ.ಇನ್ನೊಂದು ತೀರ್ಥವೆಂದರೆ ಸುಗ್ರೀವರ ತೀರ್ಥಂ, ವಾನರ ಸೇನೆಯು ಲಂಕಾವನ್ನು ವಶಪಡಿಸಿಕೊಳ್ಳಲು ರಾಮನಿಗೆ ಸಹಾಯ ಮಾಡಿದ ವಾನರ ರಾಜನಾದ ಸುಗ್ರೀವನ ಹೆಸರನ್ನು ಇಡಲಾಗಿದೆ.

ರಾಮನಾಥಸ್ವಾಮಿ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿ ಪ್ರಸಿದ್ಧ ಪಂಚಮುಖಿ ಆಂಜನೇಯ ದೇವಸ್ಥಾನವಿದೆ. ದಂತಕಥೆಯ ಪ್ರಕಾರ, ಪಾತಾಳ ಲೋಕದ ಅಧಿಪತಿಯಾದ ಮಹಿರಾವಣನಿಂದ ಭಗವಾನ್ ರಾಮ ಮತ್ತು ಅವನ ಸಹೋದರ ಲಕ್ಷ್ಮಣನನ್ನು ರಕ್ಷಿಸಲು ಭಗವಾನ್ ಹನುಮಂತನು ಪಂಚಮುಖಿ (ಐದು ಮುಖ) ಆದನು. ಪಂಚಮುಖಿಯ ಪಾತ್ರವನ್ನು ವಹಿಸಿ, ಮಹಿರಾವಣನನ್ನು ಕೊಲ್ಲಲು ಆಂಜನೇಯನು ಪಾತಾಳ ಲೋಕದಲ್ಲಿ ಐದು ದೀಪಗಳನ್ನು ಹಚ್ಚಿದನು.

ಇದನ್ನೂ ಓದಿ: ರಾಜಸ್ಥಾನದಲ್ಲಿ ರೆಡ್ ಡೈರಿ ಕಾಂಗ್ರೆಸ್​​ನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ: ಗೆಹ್ಲೋಟ್ ಸರ್ಕಾರ ವಿರುದ್ಧ ಮೋದಿ ವಾಗ್ದಾಳಿ

ಪಂಚಮುಖಿ ಆಂಜನೇಯ ದೇವಸ್ಥಾನವು ಪ್ರಸಿದ್ಧ ಸೇತು ಸಮುದ್ರಂ ಸೇತುವೆಯನ್ನು ನಿರ್ಮಿಸಲು ಬಳಸಲಾದ ತೇಲುವ ಕಲ್ಲುಗಳನ್ನು ಸಹ ಹೊಂದಿದೆ. ನಮಗೆ ತಿಳಿದಿರುವಂತೆ ಈ ಸೇತುವೆಯು ಶ್ರೀರಾಮನು ರಾವಣನನ್ನು ಕೊಲ್ಲಲು ಮತ್ತು ಸೀತಾದೇವಿಯನ್ನು ರಕ್ಷಿಸಲು ವಾನರ ಸೈನ್ಯ ಲಂಕಾಗೆ ಹೋಗಲು ಸಹಾಯ ಮಾಡಿತು.

ದುರದೃಷ್ಟವಶಾತ್ ಇತಿಹಾಸ ಮತ್ತು ಪುರಾಣಗಳಲ್ಲಿರುವ ಈ ಹೆಸರನ್ನೇ ಬೆಂಗಳೂರಿನಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಹೋಟೆಲ್ ಗೆ ಇರಿಸಲಾಗಿದೆ. ಅದೇ ರಾಮೇಶ್ವರಂ ಕೆಫೆ, ಆದರೆ ಈ ಹೋಟೆಲ್ ಹೆಸರಲ್ಲಿ h ಎಂಬ ಒಂದಕ್ಷರವನ್ನು ಸೇರಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Thu, 27 July 23