Telangana Secretariat: ಛೇ! ತೆಲಂಗಾಣ ಸಚಿವಾಲಯದ ಕಚೇರಿಗಳಲ್ಲಿ ನೀರಿನ ಕೊಳಾಯಿಗಳನ್ನೂ ಕದಿಯುತ್ತಿದ್ದಾರೆ!

Hyderabad: ತೆಲಂಗಾಣ ಸರ್ಕಾರ ನಿರ್ಮಿಸಿದ ಸೆಕ್ರೆಟರಿಯೇಟ್ ಹೈದರಾಬಾದ್‌ನ ಐಕಾನ್ ಆಗಿ ಮಾರ್ಪಟ್ಟಿದೆ. 24 ಗಂಟೆಯ ಹೈ ಸೆಕ್ಯೂರಿಟಿ ಕಚೇರಿಯಾಗಿ ಪರಿವರ್ತನೆಗೊಂಡಿದೆ. ಆದರೆ ಸಣ್ಣಪುಟ್ಟ ಕಳ್ಳರು ಬಾತ್​​ ರೂಮ್​​ ಫಿಟ್ಟಿಂಗ್​ಗಳನ್ನು ದೋಚುವಷ್ಟು ಪರಿಸ್ಥಿತಿ ಹದಗೆಟ್ಟಿದೆ.

Telangana Secretariat: ಛೇ! ತೆಲಂಗಾಣ ಸಚಿವಾಲಯದ ಕಚೇರಿಗಳಲ್ಲಿ ನೀರಿನ ಕೊಳಾಯಿಗಳನ್ನೂ ಕದಿಯುತ್ತಿದ್ದಾರೆ!
ತೆಲಂಗಾಣ ಸಚಿವಾಲಯದ ಕಚೇರಿಗಳಲ್ಲಿ ನೀರಿನ ಕೊಳಾಯಿಗಳನ್ನೂ ಕದಿಯುತ್ತಿದ್ದಾರೆ
Follow us
ಸಾಧು ಶ್ರೀನಾಥ್​
|

Updated on: Jul 27, 2023 | 3:25 PM

ಹೈದರಾಬಾದ್‌, ಜುಲೈ 27: ತೆಲಂಗಾಣ ಸರ್ಕಾರವು ಅತ್ಯಂತ ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದ ಸೆಕ್ರೆಟರಿಯೇಟ್ ಹೈದರಾಬಾದ್‌ನ ಐಕಾನ್ ಆಗಿ ಮಾರ್ಪಟ್ಟಿದೆ. ಈ ಪ್ರದೇಶವು ದಿನವಿಡೀ ಪ್ರವಾಸಿಗರಿಂದ ಕೂಡಿರುತ್ತದೆ. 24 ಗಂಟೆಯ ಹೈ ಸೆಕ್ಯೂರಿಟಿ ಕಚೇರಿಯಾಗಿ ಪರಿವರ್ತನೆಗೊಂಡಿದೆ. ಆದರೆ ಸಣ್ಣಪುಟ್ಟ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಬಾತ್​​ ರೂಮ್​​ಗಳಲ್ಲಿನ ಫಿಟ್ಟಿಂಗ್​ಗಳನ್ನು ದೋಚುವಷ್ಟು ಪರಿಸ್ಥಿತಿ ಹದಗೆಟ್ಟಿದೆ.

ಹೌದು, ಸೆಕ್ರೆಟರಿಯೇಟ್‌ಗೆ ಅಂಟಿಕೊಂಡಿರುವಂತೆ ಅನೆಕ್ಸ್ ಕಟ್ಟಡವಿದೆ. ಇದು ಮೀಡಿಯಾ ಪಾಯಿಂಟ್, ವಿಸಿಟರ್ಸ್ ಕೌಂಟರ್, ಬ್ಯಾಂಕ್‌ಗಳು, ಎನ್‌ಆರ್‌ಐ ಕೇಂದ್ರ ಮತ್ತು ಕ್ಯಾಂಟೀನ್ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರವಾಸಿಗರಿಗಾಗಿ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ. ಈ ಕೊಠಡಿಗಳಲ್ಲಿ ಕುರ್ಚಿ, ಟೇಬಲ್‌, ಫ್ಯಾನ್‌, ಲೈಟ್‌ಗಳನ್ನು ಬಿಟ್ಟು ಕಳ್ಳರು ಶೌಚಾಲಯದಲ್ಲಿನ ನಲ್ಲಿಗಳನ್ನು ಮಾತ್ರ ಕದಿಯುತ್ತಿದ್ದಾರೆ.

ಸೆಕ್ರೆಟರಿಯೇಟ್ ಆರಂಭವಾದಾಗಿನಿಂದಲೂ ಪ್ರತಿ ವಾರ ಹೊಸ ಕೊಳಾಯಿಗಳನ್ನು ಫಿಕ್ಸ್ ಮಾಡುವುದೇ ಆಗಿದೆ. ಸಣ್ಣಪುಟ್ಟ ಕಳ್ಳರಿಂದ ಹೀಗೆ ಕದಿಯುವ ಚಾಳಿ ಶುರುವಾಗಿದೆ. ಇದರಲ್ಲಿ ಟ್ವಿಸ್ಟ್ ಏನೆಂದರೆ ನೂರಾರು ಸಿಸಿ ಕ್ಯಾಮೆರಾಗಳಿದ್ದರೂ ಈ ಕಳ್ಳರು ಎಲ್ಲಿಯೂ ಕ್ಯಾಮರಾ ಕೈಗೆ ಸಿಕ್ಕಿಬೀಳುತ್ತಿಲ್ಲ.

ತೆಲಂಗಾಣ ಸಚಿವಾಲಯ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಲ್ಲವೇ? ಇಂತಹ ಹತಾಶ ಸ್ಥಿತಿಯಲ್ಲಿರುವ ಕಳ್ಳರು ಯಾರು? ಎಂಬುದೇ ಅರ್ಥವಾಗದ ಪರಿಸ್ಥಿತಿ. ಈ ಕಳ್ಳರು ತುಂಬಾ ಕರಾರುವಕ್ಕಾಗಿ ಕದಿಯುತ್ತಿದ್ದಾರೆ. ಪುರುಷ ಶೌಚಾಲಯಗಳ ನಲ್ಲಿಗಳನ್ನು ಮಾತ್ರ ಕದಿಯುತ್ತಾರೆ. ಮಹಿಳೆಯರ ಶೌಚಕ್ಕೆ ಹೋಗದಿರುವುದು ಕಳ್ಳತನದ ಮತ್ತೊಂದು ಸಂಪ್ರದಾಯವಾಗಿ ಗೋಚರಿಸುತ್ತಿದೆ. ಈ ನಡುವೆ ಸ್ಟೀಲ್ ಕೊಳಾಯಿಗಳನ್ನು ಹಾಕಿದರೆ ಕಳ್ಳರು ಎತ್ತಿಕೊಂಡು ಹೋಗುತ್ತಾರೆ ಎಂಬ ಕಾರಣಕ್ಕೆ ಸೆಕ್ರೆಟರಿಯೇಟ್ ಸಿಬ್ಬಂದಿ ಪ್ಲಾಸ್ಟಿಕ್ ಪೈಪುಗಳನ್ನು ಅಳವಡಿಸುತ್ತಿದ್ದಾರೆ. ಇವುಗಳೂ ಕಳ್ಳತನವಾಗುತ್ತಿರುವುದರಿಂದ ಭದ್ರತಾ ಸಿಬ್ಬಂದಿ ಏನು ಮಾಡಬೇಕೆಂದು ತಲೆ ಕೆರೆದುಕೊಳ್ಳುತ್ತಿದ್ದಾರೆ.