AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಔಷಧ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ಇಡೀ ವ್ಯವಸ್ಥೆಯೇ ಒಗ್ಗಟ್ಟಾಗಿದೆ’; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಭಾರತ ದೇಶದಲ್ಲಿ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್​ಪಿ) ಹಾಗೂ ಚಿಲ್ಲರೆ ವ್ಯಾಪಾರಿಗಳು ಖರೀದಿಸುವ ನೈಜ ಬೆಲೆಯ ನಡುವಿನ ಭಾರಿ ಅಂತರವನ್ನು ಸರಿಪಡಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ. ಭಾರತದಲ್ಲಿ ಔಷಧ ಬೆಲೆ ನಿಗದಿಯ ಅಕ್ರಮ ಹಾಗೂ ವ್ಯತ್ಯಾಸಗಳನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ 2 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, "ಇಡೀ ವ್ಯವಸ್ಥೆ ಔಷಧ ತಯಾರಿಕಾ ಕಂಪನಿಗಳ ಪರವಾಗಿಯೇ ಏಕೆ ಕೆಲಸ ಮಾಡುತ್ತಿದೆ?" ಎಂದು ಪ್ರಶ್ನಿಸಿತಲ್ಲದೆ, ಈ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ.

'ಔಷಧ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ಇಡೀ ವ್ಯವಸ್ಥೆಯೇ ಒಗ್ಗಟ್ಟಾಗಿದೆ'; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್Image Credit source: PTI
ಸುಷ್ಮಾ ಚಕ್ರೆ
|

Updated on: Oct 27, 2026 | 5:11 PM

Share

ನವದೆಹಲಿ, ಅಕ್ಟೋಬರ್ 27: ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್​ಪಿ) ಮತ್ತು ಚಿಲ್ಲರೆ ವ್ಯಾಪಾರಿಗಳು ಖರೀದಿಸುವ ದರದ ನಡುವೆ ಇರುವ ಭಾರಿ ವ್ಯತ್ಯಾಸವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, “ಇಡೀ ವ್ಯವಸ್ಥೆಯು ಔಷಧ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ಏಕೆ ಕೆಲಸ ಮಾಡುತ್ತಿದೆ?” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ದೇಶದಲ್ಲಿ ಔಷಧಗಳ ಬೆಲೆ ನಿಗದಿ ಕುರಿತ ಅರ್ಜಿಗಳ ವಿಚಾರಣೆ ನಡೆಸಿ, ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ಸರ್ಕಾರದ ಕಣ್ಣೆದುರೇ ಅಕ್ರಮ:

“ಸರ್ಕಾರವೇ ಇದಕ್ಕೆ ಆಸ್ಪದ ನೀಡುತ್ತಿದೆ. ಸರ್ಕಾರದ ಕಣ್ಣೆದುರಲ್ಲೇ ಈ ಭಾರಿ ಲಾಭಾಂಶದ ದಂದೆ ನಡೆಯುತ್ತಿದೆ. ಇದನ್ನು ಯಾವುದೇ ನಿಯಂತ್ರಣವಿಲ್ಲದೆ ಹೀಗೆಯೇ ಮುಂದುವರಿಯಲು ಬಿಡಬೇಕೇ?” ಎಂದು ಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಭಾರತ ದೇಶದಲ್ಲಿ ಔಷಧಗಳ ಬೆಲೆಯನ್ನು ನಿಯಂತ್ರಿಸಬೇಕಾದ ‘ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ’ವು (NPPA) ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುವ ಸಂಸ್ಥೆಯಂತೆ ಕಾಣಿಸುತ್ತಿದೆ ಎಂದು ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಇದನ್ನೂ ಓದಿ: ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ಆರೋಪ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್

ಕೇಂದ್ರ ಸರ್ಕಾರದ ವಾದ ಮತ್ತು ಸಮರ್ಥನೆ:

ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, “ಇಡೀ ಔಷಧೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರದಿರುವುದೇ ಸರ್ಕಾರದ ನಿಯಮಾವಳಿಯಾಗಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಔಷಧಗಳ ಬೆಲೆ ಅತ್ಯಂತ ಕಡಿಮೆಯಾಗಿದೆ” ಎಂದು ವಾದಿಸಿದರು.

ಇದನ್ನೂ ಓದಿ: ವಿಪಕ್ಷದ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ; ಎಸ್‌ಐಆರ್ ಪರ ಸುಪ್ರೀಂ ಕೋರ್ಟ್​ನಲ್ಲಿ ಸರ್ವಾನುಮತದ ಸಮರ್ಥನೆ

ಕ್ಯಾನ್ಸರ್ ಔಷಧಗಳ ಬೆಲೆ ಮಿತಿ ಉಲ್ಲೇಖ:

ಇದೇ ವಿಚಾರಣೆಯ ಸಂದರ್ಭದಲ್ಲಿ ಅಕ್ಟೋಬರ್ 12ರಂದು ನಡೆದ ವಿಚಾರಣೆಯನ್ನು ಉಲ್ಲೇಖಿಸಿದ ಕೋರ್ಟ್, ಕ್ಯಾನ್ಸರ್ ನಿರೋಧಕ ಔಷಧಗಳ ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಿರುವುದಾಗಿ ಸರ್ಕಾರ ಹೇಳಿರುವುದು ಸಂತಸಪಡುವ ವಿಷಯವೇನಲ್ಲ. ಕ್ಯಾನ್ಸರ್ ಔಷಧಗಳಂತೆ ಇತರ ಅಗತ್ಯ ಹಾಗೂ ಜೀವ ರಕ್ಷಕ ಔಷಧಗಳ ವ್ಯಾಪಾರ ಲಾಭಾಂಶಕ್ಕೂ ಸರ್ಕಾರ ಏಕೆ ಮಿತಿ ವಿಧಿಸುತ್ತಿಲ್ಲ? ಎಂದು ಪ್ರಶ್ನಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ