ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಕುಗ್ಗಿದ ಫಲವತ್ತತೆ ದರ, ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ

|

Updated on: Oct 21, 2024 | 2:13 PM

ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಫಲವತ್ತತೆ ದರ ಕಡಿಮೆಯಾಗಿದ್ದು, ಹೆಚ್ಚು ಮಕ್ಕಳನ್ನು ಹೊಂದುವಂತೆ ಜನಪ್ರತಿನಿಧಿಗಳು ಮನವಿ ಮಾಡುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಲವು ಕಾನೂನುಗಳಲ್ಲಿ ಮಾರ್ಪಾಟು ಮಾಡುವುದಾಗಿಯೂ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಕುಗ್ಗಿದ ಫಲವತ್ತತೆ ದರ, ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ
ಜನಸಂಖ್ಯೆ
Follow us on

ದಕ್ಷಿಣ ಭಾರತದ ಜನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್  ಮನವಿ ಮಾಡಿದ್ದಾರೆ.  ಆಂಧ್ರಪ್ರದೇಶದ ಹಲವು ಗ್ರಾಮಗಳು ಮತ್ತು ದೇಶಾದ್ಯಂತ ಕೇವಲ ವೃದ್ಧರು ಮಾತ್ರ ಉಳಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಯುವಕರು ಬೇರೆ ನಗರಗಳಿಗೆ ತೆರಳಿದ್ದಾರೆ ಇನ್ನೂ ಕೆಲವರು ದೇಶವನ್ನೇ ಬಿಟ್ಟು ದೂರ ಉಳಿದಿದ್ದಾರೆ.

ಫಲವತ್ತತೆ ದರ ಕುಸಿತ
ದಕ್ಷಿಣದ ರಾಜ್ಯಗಳಲ್ಲಿ ಫಲವತ್ತತೆ ದರವು ಈಗಾಗಲೇ 1.6 ಕ್ಕೆ ಕುಸಿದಿದೆ, ಇದು ರಾಷ್ಟ್ರೀಯ ಸರಾಸರಿ 2.1 ಕ್ಕಿಂತ ಕಡಿಮೆಯಾಗಿದೆ.
ಫಲವತ್ತತೆ ದರವು ಇಳಿಮುಖವಾಗುತ್ತಿದ್ದರೆ, 2047 ರ ವೇಳೆಗೆ ವೃದ್ಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಮಕ್ಕಳ ಸಂಖ್ಯೆ ಇಳಿಮುಖವಾಗುತ್ತದೆ.

ಚೀನಾ, ಜಪಾನ್​ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸುತ್ತಿವೆ
ಜಪಾನ್, ಚೀನಾ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳು ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದು, ಅಲ್ಲಿನ ನಾಗರಿಕರಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಸಲಹೆ ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಶೇ.1.6ಕ್ಕೆ ಕುಸಿದಿದೆ ಎಂದು ಮಾಹಿತಿ ನೀಡಿದರು. ಇದಲ್ಲದೆ, ಭಾರತದ ಸರಾಸರಿ ಬೆಳವಣಿಗೆ ದರವು 1950 ರ ದಶಕದಲ್ಲಿ 6.2% ರಿಂದ 2021 ರಲ್ಲಿ 2.1% ಕ್ಕೆ ಇಳಿದಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ದಕ್ಷಿಣ ರಾಜ್ಯಗಳಲ್ಲಿ ಫಲವತ್ತತೆ ದರಗಳು
– ಆಂಧ್ರ ಪ್ರದೇಶ: 1.70
– ಕರ್ನಾಟಕ: 1.70
– ಕೇರಳ: 1.80
– ತಮಿಳುನಾಡು: 1.80
– ತೆಲಂಗಾಣ: 1.82

ಭಾರತದ TFR 1950 ರಲ್ಲಿ ಪ್ರತಿ ಮಹಿಳೆಗೆ 6.18 ಮಕ್ಕಳಿಂದ 2021 ರಲ್ಲಿ 1.91 ಕ್ಕೆ ಗಮನಾರ್ಹವಾಗಿ ಕಡಿಮೆಯಾಗಿದೆ.
2050 ರ ವೇಳೆಗೆ 1.29 ಕ್ಕೆ ಮತ್ತು 2100 ರ ವೇಳೆಗೆ 1.04 ಕ್ಕೆ ಇಳಿಯುವ ನಿರೀಕ್ಷೆಯಿದೆ. ಇದು ಕುಗ್ಗುತ್ತಿರುವ ಜನಸಂಖ್ಯೆಗೆ ಕಾರಣವಾಗಬಹುದು.

ಫಲವತ್ತತೆ ದರದಲ್ಲಿ ಕುಸಿತಕ್ಕೆ ಕಾರಣವೇನು?
ಮಹಿಳೆಯರಲ್ಲಿ ಹೆಚ್ಚಿದ ಶಿಕ್ಷಣ ಮತ್ತು ಉದ್ಯೋಗಿಗಳ ಭಾಗವಹಿಸುವಿಕೆ
ಮದುವೆ ಮತ್ತು ಮಗುವನ್ನು ಹೆರುವಲ್ಲಿ ವಿಳಂಬ
ಗರ್ಭನಿರೋಧಕಗಳ ಬಳಕೆ

ಮತ್ತಷ್ಟು ಓದಿ: 16 ಮಕ್ಕಳನ್ನು ಹೊಂದುವಂತೆ ಜನತೆಗೆ ಮನವಿ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ಹೆಚ್ಚು ಮಕ್ಕಳಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನನ್ನು ಈ ಹಿಂದೆಯೇ ಮಾಡಿದ್ದೆವು ಎಂದು ಚಂದ್ರಬಾಬು ನಾಯ್ಡು ಹೇಳಿದರು. ಆದರೆ ಈಗ ನಾವು ಆ ಕಾನೂನನ್ನು ರದ್ದುಪಡಿಸುತ್ತಿದ್ದೇವೆ, ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದರು.

ಆದರೆ ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ವಯಸ್ಸಾದ ಜನಸಂಖ್ಯೆಯು ಆತಂಕಕಾರಿ ವಿಷಯವಾಗಿದೆ. ಜಪಾನ್, ಚೀನಾ ಸೇರಿದಂತೆ ಕೆಲವು ಯುರೋಪಿಯನ್ ರಾಷ್ಟ್ರಗಳು ಸಹ ಈ ಸಮಸ್ಯೆಯಿಂದ ಹೋರಾಡುತ್ತಿವೆ ಎಂದು ಅವರು ಹೇಳಿದರು. ಯುವಜನರು ದೇಶದ ಇತರ ಭಾಗಗಳಿಗೆ ಅಥವಾ ವಿದೇಶಗಳಿಗೆ ತೆರಳುತ್ತಿರುವ ಕಾರಣ ದಕ್ಷಿಣ ಭಾರತದಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ.

ಮತ್ತಷ್ಟು ಓದಿ: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಹೆಚ್ಚು ಮಕ್ಕಳನ್ನು ಹೊಂದುವಂತೆ ಯುವಕರಿಗೆ ಚಂದ್ರಬಾಬು ನಾಯ್ಡು ಸಲಹೆ

ಹಿಂದಿನ ಅವಧಿಯಲ್ಲಿ 1995 ಮತ್ತು 2004 ರ ನಡುವೆ ಸಣ್ಣ ಕುಟುಂಬ ಪರಿಕಲ್ಪನೆಯನ್ನು ಬೆಂಬಲಿಸಿದ ನಿಲುವಿನಲ್ಲಿ ಈಗ ಸಾಕಷ್ಟು ಬದಲಾವಣೆಗಾಗಿವೆ ಎಂದು ನಾಯ್ಡು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಭಾರತೀಯ ಯುವಕರು ದೇಶದ ಇತರ ಭಾಗಗಳಿಗೆ ವಿದೇಶಗಳಿಗೆ ವಲಸೆ ಹೋಗುವುದರಿಂದ ಸಮಸ್ಯೆ ಜಟಿಲವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ