Nitish Kumar: ಡೋಂಟ್​ಕೇರ್ ಅಂದ್ರೆ ಹೇಗೆ; ಬಿಜೆಪಿಯೊಂದಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ಮುನಿಸಿಗಿದೆ 5 ಕಾರಣಗಳು

Amit Shash VS JDU: ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ಈ ಮಹತ್ವದ ಬೆಳವಣಿಗೆಗೆ ಸಂಬಂಧಿಸಿದ ಐದು ಮುಖ್ಯ ಅಂಶಗಳಿವು...

Nitish Kumar: ಡೋಂಟ್​ಕೇರ್ ಅಂದ್ರೆ ಹೇಗೆ; ಬಿಜೆಪಿಯೊಂದಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ಮುನಿಸಿಗಿದೆ 5 ಕಾರಣಗಳು
ಅಮಿತ್ ಶಾ ಮತ್ತು ನಿತೀಶ್ ಕುಮಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 08, 2022 | 7:57 AM

ದೆಹಲಿ: ಬಿಹಾರದ ಮುಖ್ಯಮಂತ್ರಿ ಮತ್ತು ಕೇಂದ್ರದ ಆಡಳಿತಾರೂಢ ಎನ್​ಡಿಎ ಮೈತ್ರಿಕೂಟದ ಪ್ರಮುಖ ಪಕ್ಷ ‘ಸಂಯುಕ್ತ ಜನತಾ ದಳ’ದ (Janata Dal United – JDU) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಮಂಗಳವಾರ ಪಕ್ಷದ ಸಭೆ ಕರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಸಿಟ್ಟಿಗೆದ್ದಿರುವ ಅವರು, ಹಲವು ವೇದಿಕೆಗಳಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ಈ ಮಹತ್ವದ ಬೆಳವಣಿಗೆಗೆ ಸಂಬಂಧಿಸಿದ ಐದು ಮುಖ್ಯ ಅಂಶಗಳಿವು…

  1. ಬಿಹಾರ ವಿಧಾನಸಭೆಯ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ಸ್ಥಾನಚ್ಯುತಿಗೆ ನಿತೀಶ್ ಕುಮಾರ್ ಆಗ್ರಹಿಸುತ್ತಿದ್ದಾರೆ. ಸಿನ್ಹಾ ಅವರ ವಿಚಾರದಲ್ಲಿ ನಿತೀಶ್ ಹಲವು ಬಾರಿ ಸಿಟ್ಟಿಗೆದ್ದಿದ್ದು ಉಂಟು. ತಮ್ಮ ಸರ್ಕಾರದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸಿನ್ಹಾ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲ ಎಂದು ನಿತೀಶ್ ಹೇಳಿದ್ದಾರೆ.
  2. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟ ವಿಸ್ತರಿಸಿದಾಗ ತಮ್ಮ ಪಕ್ಷ ಜೆಡಿಯುಗೆ ಕೇವಲ ಒಂದೇಒಂದು ಸಂಪುಟ ಸ್ಥಾನ ನೀಡಿದ್ದು ನಿತೀಶ್ ಅವರಿಗೆ ಸಿಟ್ಟು ತರಿಸಿತ್ತು. ಬಿಹಾರದಲ್ಲಿ ಸಚಿವ ಸಂಪುಟ ವಿಸ್ತರಿಸಿದ ಅವರು, ತಮ್ಮ ಪಕ್ಷದ 8 ಮಂದಿಗೆ ಸಚಿವ ಸ್ಥಾನ ನೀಡಿ, ಬಿಜೆಪಿಯ ಒಬ್ಬರಿಗೆ ಮಾತ್ರ ಸಚಿವ ಸಂಪುಟದಲ್ಲಿ ಅವಕಾಶ ನೀಡಿ ಎದಿರೇಟು ಕೊಟ್ಟಿದ್ದರು.
  3. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು ಎನ್ನುವ ಚಿಂತನೆಯನ್ನು ನಿತೀಶ್ ಕುಮಾರ್ ಒಪ್ಪುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಈ ವಿಚಾರವನ್ನು ವಿರೋಧ ಪಕ್ಷಗಳು ಸಹ ಒಪ್ಪಿಲ್ಲ. ಈ ವಿಚಾರದಲ್ಲಿ ಜೆಡಿಯು ವಿರೋಧ ಪಕ್ಷಗಳ ವಿಚಾರಧಾರೆಯನ್ನೇ ಪ್ರತಿಪಾದಿಸುತ್ತಿದೆ.
  4. ಬಿಹಾರ ಸಚಿವ ಸಂಪುಟದಲ್ಲಿ ಬಿಜೆಪಿಯ ಯಾರಿಗೆಲ್ಲಾ ಸಂಪುಟ ಸ್ಥಾನ ನೀಡಬೇಕು ಎನ್ನುವ ಬಗ್ಗೆ ತಮ್ಮದೇ ಅಂತಿಮ ನಿರ್ಧಾರವಾಗಬೇಕು ಎಂದು ನಿತೀಶ್​ ಕುಮಾರ್ ಬಯಸಿದ್ದಾರೆ. ಆದರೆ ಬಿಜೆಪಿಯ ಬಿಹಾರ ಘಟಕದ ಮೇಲೆ ಬಿಗಿಹಿಡಿತ ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದಕ್ಕೆ ಅವಕಾಶ ನೀಡುತ್ತಿಲ್ಲ. ನಿತೀಶ್ ಅವರಿಗೆ ಆಪ್ತರಾಗಿರುವ ಬಿಜೆಪಿಯ ಸುಶೀಲ್ ಮೋದಿ ಅವರಿಗೆ ಬೇರೊಂದು ಜವಾಬ್ದಾರಿ ನೀಡಿ, ಬಿಹಾರದಿಂದ ಹೊರಗೆ ಕಳಿಸಲಾಗಿದೆ.
  5. ಕೇಂದ್ರ ಸಚಿವ ಸಂಪುಟಕ್ಕೆ ಜೆಡಿಯು ಸಂಸದರನ್ನು ಸೇರಿಸಿಕೊಳ್ಳುವ ವೇಳೆಯಲ್ಲಿಯೂ ನಿತೀಶ್ ಅವರ ಮಾತಿಗೆ ಬಿಜೆಪಿ ಮನ್ನಣೆ ನೀಡದಿರುವುದೂ ಸಹ ಎರಡೂ ಪಕ್ಷಗಳ ನಡುವೆ ಭಿನ್ನಮತ ಹೆಚ್ಚಾಗಲು ಮತ್ತೊಂದು ಕಾರಣ ಎನಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಆರ್​ಸಿಪಿ ಸಿಂಗ್ ಅವರು ನಿತೀಶ್ ಅವರನ್ನು ಲೆಕ್ಕಕ್ಕೆ ಇರಿಸದೇ ನೇರವಾಗಿ ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಸಂಪರ್ಕ ಸಾಧಿಸಿದ್ದರು. ಸಿಂಗ್ ನಿನ್ನೆಯಷ್ಟೇ ಜೆಡಿಯುನಿಂದ ಹೊರನಡೆದರು. ‘ನಮ್ಮ ಪಕ್ಷವು ಕೇಂದ್ರ ಸಚಿವ ಸಂಪುಟಕ್ಕೆ ಏಕೆ ಸೇರಬೇಕು. ನಾವು ಸೇರುವುದಿಲ್ಲ ಎಂದು 2019ರಲ್ಲಿಯೇ ನಿತೀಶ್ ಕುಮಾರ್ ನಿರ್ಧರಿಸಿದ್ದರು’ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಾಜನ್ ಸಿಂಗ್ ಹೇಳಿದ್ದರು.

Published On - 7:57 am, Mon, 8 August 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು