ದೇಶಕ್ಕೀಗ ಒಮಿಕ್ರಾನ್​ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ

| Updated By: Lakshmi Hegde

Updated on: Nov 27, 2021 | 12:47 PM

Omicron: ಒಮಿಕ್ರಾನ್​ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ಅದಾದ ಬಳಿಕ ಹಾಂಗ್​ಕಾಂಗ್​​ನಲ್ಲಿ ಇಬ್ಬರಲ್ಲಿ ದೃಢಪಟ್ಟಿದೆ. ಇಸ್ರೇಲ್​ನಲ್ಲಿ ಒಂದು ಮತ್ತು ಬೆಲ್ಜಿಯಂನಲ್ಲಿ ಒಂದು ಒಮೊಕ್ರಾನ್​ ಪ್ರಕರಣಗಳು ದಾಖಲಾಗಿವೆ. 

ದೇಶಕ್ಕೀಗ ಒಮಿಕ್ರಾನ್​ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us on

ಕೊರೊನಾ ಒಂದು ಹಂತದಲ್ಲಿ ಕಡಿಮೆಯಾಯಿತು ಎಂದು ಸ್ವಲ್ಪ ಮಟ್ಟಿಗೆ ನಿರಾಳವಾಗುವ ಹೊತ್ತಲ್ಲೇ ಇನ್ನೊಂದು ರೂಪಾಂತರಿ ಶಾಕ್​ ಎದುರಾಗಿದೆ. ದಕ್ಷಿಣ ಆಫ್ರಿಕಾದ ಬೋಟ್ಸ್​ವಾನಾದಲ್ಲಿ ಮೊದಲು ಪತ್ತೆಯಾದ ಕೊರೊನಾದ ಹೊಸ ತಳಿ B.1.1.529ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್​ ಎಂದು ಹೆಸರಿಟ್ಟಿದೆ. ಇಲ್ಲಿಯವರೆಗೆ ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಎನಿಸಿಕೊಂಡಿದ್ದ ಡೆಲ್ಟಾಕ್ಕಿಂತಲೂ ವೇಗವಾಗಿ ಹಡುವ ಈ ಒಮಿಕ್ರಾನ್​ ವಿಶ್ವದಾದ್ಯಂತ ಆತಂಕ ಮೂಡಿಸಿದೆ.  

ಇನ್ನು ಇದೀಗ ಪತ್ತೆಯಾದ ಒಮಿಕ್ರಾನ್​ ಅಥವಾ B.1.1.529 ವೈರಾಣು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಆದರೆ ಕೊರೊನಾದ ಈ ಹೊಸ ತಳಿ ಎಷ್ಟರ ಮಟ್ಟಿಗೆ ಅಪಾಯ ತರಬಲ್ಲದು. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ, ಸಾವಿನ ಪ್ರಮಾಣವನ್ನುಎಷ್ಟರಮಟ್ಟಿಗೆ ಹೆಚ್ಚಿಸುತ್ತದೆ ಎಂಬುದನ್ನು ಹೇಳಲು ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆರೋಗ್ಯ ತಜ್ಞರಂತೂ ಇದನ್ನು ಸೂಪರ್ ಸ್ಟ್ರೇನ್​ ಎಂದೇ ಕರೆಯುತ್ತಿದ್ದು, ಒಮಿಕ್ರಾನ್​ 30ಕ್ಕೂ ಹೆಚ್ಚು ರೂಪಾಂತಗಳನ್ನು ಒಳಗೊಂಡಿದೆ. ಇದು ಕೊರೊನಾದ ಉಳಿದೆಲ್ಲ ಹೊಸ ತಳಿಗಳಿಗಿಂತ ಹೆಚ್ಚು ಮತ್ತು ಡೆಲ್ಟಾಕ್ಕಿಂತಲೂ ಎರಡು ಪಟ್ಟು ಅಧಿಕ ಎಂದು ಹೇಳಲಾಗಿದೆ.

ಒಮಿಕ್ರಾನ್​ ಬಗೆಗಿರುವ ಆತಂಕಗಳು 
ಒಮಿಕ್ರಾನ್​​ನ ಸ್ಪೈಕ್​ ಪ್ರೊಟಿನ್​​ನಲ್ಲಿರುವ 32 ರೂಪಾಂತರಗಳಿಂದಾಗಿ ಇದು ಲಸಿಕೆಯ ದಕ್ಷತೆಯನ್ನು ಶೇ.40ಕ್ಕೆ ಇಳಿಸುತ್ತದೆ. ಒಮಿಕ್ರಾನ್​ನಲ್ಲಿರುವ ಆರ್​203ಕೆ ಮತ್ತು ಜಿ204ಆರ್​ ಎಂಬ ರೂಪಾಂತರಗಳು ವೈರಸ್​ ವೇಗವಾಗಿ ಹರಡಲು ಕಾರಣವಾಗುತ್ತವೆ ಎಂದು ಯುಕೆ ಮೂಲದ ಆರೋಗ್ಯ ತಜ್ಞರು ಹೇಳಿದ್ದಾಗಿ ಡೇಲಿಮೇಲ್​ ವರದಿ ಮಾಡಿದೆ. ಹಾಗೇ, ಎಚ್​655ವೈ, ಎನ್​679ಕೆ ಮತ್ತು ಪಿ681ಎಚ್​​ ರೂಪಾಂತರು ಒಮಿಕ್ರಾನ್​ ವೈರಾಣುಗಳು ಮನುಷ್ಯರ ಜೀವಕೋಶಗಳನ್ನು ಸುಲಭವಾಗಿ ನುಸುಳಲು ಸಹಾಯ ಮಾಡುತ್ತವೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಲಸಿಕೆ ಹಾಕಿದರೂ ಈ ಒಮಿಕ್ರಾನ್​ಗಳಿಂದ ಅವರುಗಳ ದಕ್ಷತೆಯೇ ಕಡಿಮೆಯಾಗುತ್ತದೆ. ಇದೇ ಬಹುದೊಡ್ಡ ಆತಂಕವಾಗಿ ಪರಿಣಮಿಸಿದೆ.

ಎಲ್ಲೆಲ್ಲಿ ಕಾಣಿಸಿಕೊಂಡಿದೆ?
ಒಮಿಕ್ರಾನ್​ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ಅದಾದ ಬಳಿಕ ಹಾಂಗ್​ಕಾಂಗ್​​ನಲ್ಲಿ ಇಬ್ಬರಲ್ಲಿ ದೃಢಪಟ್ಟಿದೆ. ಇಸ್ರೇಲ್​ನಲ್ಲಿ ಒಂದು ಮತ್ತು ಬೆಲ್ಜಿಯಂನಲ್ಲಿ ಒಂದು ಒಮೊಕ್ರಾನ್​ ಪ್ರಕರಣಗಳು ದಾಖಲಾಗಿವೆ.  ಅಂದಹಾಗೆ ಈ ಹಾಂಗ್​ಕಾಂಗ್​​ನಲ್ಲಿ ಸೋಂಕಿಗೆ ತುತ್ತಾದವರಲ್ಲಿ ಒಬ್ಬರು, ದಕ್ಷಿಣಾಫ್ರಿಕಾದಲ್ಲಿ ಕಾಣಿಸಿಕೊಂಡ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಂಕಷ್ಟದಲ್ಲಿ ಸಾರಿಗೆ ನೌಕರರು; 3 ತಿಂಗಳಿನಿಂದ ಸರಿಯಾದ ಸಂಬಳವಿಲ್ಲದೇ ದುಸ್ತರಗೊಂಡಿದೆ ಬದುಕು