ನವಾಬ್​ ಮಲಿಕ್​ ಬಗ್ಗೆ ಸ್ಫೋಟಕ ವಿಷಯ ಬಹಿರಂಗ ಮಾಡ್ತೇನೆ; ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಎಚ್ಚರಿಕೆ

ನವಾಬ್​ ಮಲಿಕ್​ ಬಗ್ಗೆ ಸ್ಫೋಟಕ ವಿಷಯ ಬಹಿರಂಗ ಮಾಡ್ತೇನೆ; ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಎಚ್ಚರಿಕೆ
ದೇವೇಂದ್ರ ಫಡ್ನವೀಸ್​ ಮತ್ತು ನವಾಬ್​ ಮಲಿಕ್

ಜೈದೀಪ್​ ರಾಣಾನೊಂದಿಗೆ ಫೋಟೋ ತೆಗೆಸಿಕೊಂಡಾಕ್ಷಣ ಅವನೊಂದಿಗೆ ಸಂಬಂಧ ಇದೆ ಎಂದು ಭಾವಿಸಬೇಕಾಗಿಲ್ಲ. ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ತಂಡವೊಂದು ನಮ್ಮನ್ನು ಭೇಟಿಯಾಗಿತ್ತು. ಆಗ ತೆಗೆಸಿಕೊಂಡ ಫೋಟೋ ಇದಾಗಿದೆ ಎಂದು ಫಡ್ನವೀಸ್​ ಸ್ಪಷ್ಟನೆ ನೀಡಿದ್ದಾರೆ.

TV9kannada Web Team

| Edited By: Lakshmi Hegde

Nov 01, 2021 | 3:32 PM

ಮುಂಬೈ ಡ್ರಗ್ಸ್​ ಕೇಸ್​​ಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಎನ್​ಸಿಪಿ ಸಚಿವ ನವಾಬ್​ ಮಲಿಕ್​ ಇಂದು ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೆಸರನ್ನು ಎಳೆದುತಂದಿದ್ದಾರೆ. ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಈಗಾಗಲೇ ಜೈಲುಪಾಲಾಗಿರುವ ಡ್ರಗ್​ ಪೆಡ್ಲರ್​ ಜೈದೀಪ್​ ರಾಣಾ ಅವರೊಂದಿಗೆ ದೇವೇಂದ್ರ ಫಡ್ನವೀಸ್​ ಮತ್ತು ಅವರ ಪತ್ನಿ ಅಮೃತಾ ಫಡ್ನವೀಸ್​ ನಿಂತಿರುವ ಒಂದೆರಡು ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದು ಇದೀಗ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಆದರೆ ಅದರ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್​​ ನವಾಬ್​​ ಮಲಿಕ್​ಗೆ ತಿರುಗೇಟು ನೀಡಿದ್ದು, ನವಾಬ್​ ಮಲಿಕ್​​ಗೂ, ಭೂಗತ ಜಗತ್ತಿಗೂ ಇರುವ ಸಂಪರ್ಕವನ್ನು ದೀಪಾವಳಿ ನಂತರ ನಾವು ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ. 

ನವಾಬ್​ ಮಲಿಕ್​ ಅನಗತ್ಯವಾಗಿ ಡ್ರಗ್ಸ್​ ಕೇಸ್​​ನಲ್ಲಿ ನನ್ನ ಮತ್ತು ಪತ್ನಿ ಅಮೃತಾಳ ಹೆಸರನ್ನು ಎಳೆದುತಂದಿದ್ದಾರೆ. ಇದು ಆಧಾರ ರಹಿತವಾದ ಆರೋಪ. ಆದರೇನು ಈಗ ನವಾಬ್​ ಮಲಿಕ್​ ಆಟ ಶುರು ಮಾಡಿದ್ದಾರೆ..ಪಟಾಕಿ ಹಚ್ಚಿದ್ದಾರೆ. ಇದಕ್ಕೊಂದು ಲಾಜಿಕಲ್​ ಅಂತ್ಯವನ್ನು ನಾನು ಕೊಡುತ್ತೇನೆ. ದೀಪಾವಳಿಯ ನಂತರ ನಾನು ಬಾಂಬ್​ ಸ್ಫೋಟಿಸುತ್ತೇನೆ ಎಂದು ಹೇಳಿದ್ದಾರೆ.  ಮುಂಬೈ ಭೂಗತ ಜಗತ್ತಿಗೂ, ನವಾಬ್​ ಮಲಿಕ್​ಗೂ ಇರುವ ಸಂಪರ್ಕವನ್ನು ನಾನು ಸಾರ್ವಜನಿಕರ ಎದುರು, ದಾಖಲೆ ಸಮೇತ ಪ್ರಸ್ತುತ ಪಡಿಸುತ್ತೇನೆ ಎಂದು ಹೇಳಿದ್ದಾರೆ.

ಈ ಜೈದೀಪ್​ ರಾಣಾನೊಂದಿಗೆ ಫೋಟೋ ತೆಗೆಸಿಕೊಂಡಾಕ್ಷಣ ಅವನೊಂದಿಗೆ ಸಂಬಂಧ ಇದೆ ಎಂದು ಭಾವಿಸಬೇಕಾಗಿಲ್ಲ. ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ತಂಡವೊಂದು ನಮ್ಮನ್ನು ಭೇಟಿಯಾಗಿತ್ತು. ಆಗ ತೆಗೆಸಿಕೊಂಡ ಫೋಟೋ ಇದಾಗಿದೆ. ಆ ತಂಡದೊಂದಿಗೆ ಇರುವವರೆಲ್ಲರೊಂದಿಗೂ ಫೋಟೋ ಇದೆ. ಆದರೆ ಈ ಫೋಟೋವನ್ನಷ್ಟೇ ಹಾಕುವ ಮೂಲಕ ನವಾಬ್​ ಮಲಿಕ್​ ಬೇರೇನೋ ಹೇಳಲು ಹೊರಟಿದ್ದಾರೆ ಎಂದು ಫಡ್ನವೀಸ್​ ಹೇಳಿದ್ದಾರೆ.  ಮುಂಬೈ ಡ್ರಗ್​ ಕೇಸ್​ಗೆ ಸಂಬಂಧಪಟ್ಂತೆ ನವಾಬ್​ ಮಲಿಕ್​ ಫಡ್ನವೀಸ್​ ವಿರುದ್ಧ ಆರೋಪ ಮಾಡಿದ್ದಲ್ಲದೆ, ಅವರ ಆಡಳಿತ ಅವಧಿಯಲ್ಲೇ ಅಂದರೆ, 2014-2018ರ ಅವಧಿಯಲ್ಲೇ ಮುಂಬೈನಲ್ಲಿ ಮಾದಕ ದ್ರವ್ಯದ ಪ್ರಮಾಣ ಹೆಚ್ಚಾಗಿದೆ ಎಂದೂ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಪ್ರಕಾಶ್ ಝಾರ ವೆಬ್ ಸರಣಿಯಿಂದ ಡಾಬರ್ ಮತ್ತು ಸಬ್ಯಸಾಚಿ ಮಂಗಳಸೂತ್ರವರೆಗೆ: ಮಧ್ಯಪ್ರದೇಶದ ಗೃಹ ಸಚಿವರ ಆಕ್ಷೇಪ, ನಿಲುವುಗಳು ಹೀಗಿತ್ತು

Follow us on

Related Stories

Most Read Stories

Click on your DTH Provider to Add TV9 Kannada