ಕೃಷಿ ಕಾಯ್ದೆ ಬೆಂಬಲಿಸುವ ರೈತ ಒಕ್ಕೂಟಗಳಿಗೂ ಚರ್ಚೆಗೆ ಅವಕಾಶ್ ನೀಡುತ್ತೇವೆ- ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ಕೃಷಿ ಕಾಯ್ದೆಗಳ ಕುರಿತು ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ. ಹೀಗಾಗಿ ವಿರೋಧಿಸುವವರ ಜತೆ, ಬೆಂಬಲಿಸುವವರಿಗೂ ಸಮಾನ ಅವಕಾಶ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೃಷಿ ಕಾಯ್ದೆ ಬೆಂಬಲಿಸುವ ರೈತ ಒಕ್ಕೂಟಗಳಿಗೂ ಚರ್ಚೆಗೆ ಅವಕಾಶ್ ನೀಡುತ್ತೇವೆ- ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

Updated on: Jan 08, 2021 | 9:07 PM

ದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸುವ ರೈತ ಒಕ್ಕೂಟಗಳ ಜೊತೆ ಕೃಷಿ ಕಾಯ್ದೆಗಳನ್ನು ಬೆಂಬಲಿಸುವ ಸಂಘಟನೆಗಳೂ ಇವೆ. ಎರಡೂ ಸಂಘಟನೆಗಳಿಗೂ ಚರ್ಚೆಗೆ ಸಮಾನ ಅವಕಾಶ ನೀಡುತ್ತಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ಕುರಿತು ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ. ಹೀಗಾಗಿ ವಿರೋಧಿಸುವವರ ಜತೆ, ಬೆಂಬಲಿಸುವವರಿಗೂ ಸಮಾನ ಅವಕಾಶ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಗುರುದ್ವಾರದ ಧಾರ್ಮಿಕ ಮುಖ್ಯಸ್ಥರೋರ್ವರು ರೈತರು ಚಳಿಯಲ್ಲಿ ತೊಂದರೆ ಅನುಭವಿಸುತ್ತಿರುವುದರ ಕುರಿತು ಪ್ರಸ್ತಾಪಿಸಿದ್ದಾರೆ.
ಈ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

Delhi Chalo ರೈತರ ಪ್ರತಿಭಟನೆ ಅಂತ್ಯಗೊಳಿಸಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಯತ್ನ