ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕರ್ನಾಟಕದ ಭಾಗದಲ್ಲಿರುವ, ಮರಾಠಿ ಮಾತನಾಡುವವರು ಇರುವ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದೊಂದು ವಿಚಾರ ಪದೇಪದೆ ಏಳುತ್ತದೆ ಮತ್ತು ಅದು ವಿವಾದ ಕಿಡಿ ಹೊತ್ತಿಸುತ್ತದೆ. ಇತ್ತೀಚೆಗೆ ಸ್ವಲ್ಪ ತಣ್ಣಗಿದ್ದ ಈ ವಿಷವೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಬಾರಿ ಇದನ್ನು ಪ್ರಸ್ತಾಪಿಸಿದ್ದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್. ಇಂದು ಮಹಾರಾಷ್ಟ್ರ ಸಂಸ್ಥಾಪನಾ ದಿನದ ನಿಮಿತ್ತ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ಪವಾರ್, ಕರ್ನಾಟಕದ ಗಡಿಭಾಗದಲ್ಲಿ ನೆಲೆಸಿರುವ ಕೆಲವು ಸ್ಥಳಗಳಲ್ಲಿ ಜನರು ಸಂಪೂರ್ಣವಾಗಿ ಮರಾಠಿಯನ್ನೇ ಮಾತನಾಡುತ್ತಾರೆ. ಆ ಪ್ರದೇಶವನ್ನೆಲ್ಲ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಹೋರಾಟ ತುಂಬ ಕಾಲದಿಂದ ನಡೆಯುತ್ತಿದ್ದು, ಈ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ನಾವಿಂದು 62ನೇ ವರ್ಷದ ಮಹಾರಾಷ್ಟ್ರ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದೇವೆ. ಇಷ್ಟು ವರ್ಷವಾದರೂ ಕರ್ನಾಟಕದ ಗಡಿ ಜಿಲ್ಲೆಗಳಾದ ಮತ್ತು ಮರಾಠಿ ಮಾತನಾಡುವ ಮಂದಿಯಿರುವ ಬೀದರ್, ಭಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿಗಳನ್ನು ಇನ್ನೂ ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಮರಾಠಿ ಮಾತನಾಡುವವರು ಇರುವ ಈ ಎಲ್ಲ ಸ್ಥಳಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಅನೇಕರು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅಂಥವರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ. ಸದಾ ಅವರೊಂದಿಗೆ ನಾವಿರುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರ ಅನಾದಿ ಕಾಲದಿಂದಲೂ ಬೆಳಗಾವಿ, ಕಾರವಾರ, ನಿಪ್ಪಾಣಿಗಳೆಲ್ಲ ತಮ್ಮ ರಾಜ್ಯಕ್ಕೆ ಸೇರಿಸಬೇಕು ಎಂಬ ಬಗ್ಗೆ ಧ್ವನಿ ಎತ್ತತಲೇ ಬಂದಿದೆ. ಇದು ಅದೆಷ್ಟೋ ಬಾರಿ ಸರ್ಕಾರಗಳ ಮಧ್ಯದ ವಾದ-ಪ್ರತಿವಾದಕ್ಕೆ ಕಾರಣವಾಗಿದೆ. ಈ ಭಾಗಗಳಲ್ಲಿ ಮರಾಠಿ ಮಾತನಾಡುವವರೇ ಹೆಚ್ಚಾಗಿದ್ದರಿಂದ, ಅದನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದ ಅಲ್ಲಿನ ಹೋರಾಟಗಾರರ ವಾದ. ಆದರೆ ಇವೆಲ್ಲವೂ ಅಪ್ಪಟವಾಗಿ ಕರ್ನಾಟಕಕ್ಕೆ ಸೇರಿದ ಪ್ರದೇಶಗಳು ಎಂಬುದು ಇಲ್ಲಿನ ವಾದ. ಸದ್ಯ ಈ ಪ್ರಕರಣದ ಸುಪ್ರೀಂಕೋರ್ಟ್ನಲ್ಲಿ ಇದೆ.
ಇದನ್ನೂ ಓದಿ: ಜನಪ್ರಿಯ ಹಿಂದಿ ಹಾಡಿಗೆ ಜಾನ್ವಿ ಕಪೂರ್ ಡ್ಯಾನ್ಸ್; ಶ್ರೀದೇವಿ, ಮಾಧುರಿ ದೀಕ್ಷಿತ್ಗೆ ಹೋಲಿಸಿದ ಫ್ಯಾನ್ಸ್
Published On - 4:34 pm, Sun, 1 May 22