ಉದ್ಘಾಟನೆ ನಂತರ ಕುಟುಂಬ ಸಮೇತ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಕೇಜ್ರಿವಾಲ್

|

Updated on: Jan 17, 2024 | 7:28 PM

“ನಾನು ಎಲ್ಲರನ್ನೂ ಭೇಟಿಯಾದೆ. ಎಲ್ಲರೂ ಸಂತೋಷವಾಗಿರುವಂತೆ ತೋರುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ನಂತರ, ಜನರು ಭೇಟಿ ನೀಡಲು ಅಯೋಧ್ಯೆಗೆ ಹೆಚ್ಚಿನ ಯಾತ್ರಿ ರೈಲುಗಳನ್ನು ವ್ಯವಸ್ಥೆ ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಉದ್ಘಾಟನೆ ನಂತರ ಕುಟುಂಬ ಸಮೇತ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ ಜನವರಿ 17: ಜನವರಿ 22 ರ ಉದ್ಘಾಟನಾ ಸಮಾರಂಭದ ನಂತರ ತಮ್ಮ ಕುಟುಂಬದೊಂದಿಗೆ (ಹೆಂಡತಿ, ಮಕ್ಕಳು ಮತ್ತು ಪೋಷಕರು) ರಾಮಮಂದಿರಕ್ಕೆ (Ram mandir) ಭೇಟಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind  kejriwal) ಬುಧವಾರ ಹೇಳಿದ್ದಾರೆ. ನಾನು ನನ್ನ ಹೆಂಡತಿ, ಮಕ್ಕಳು ಮತ್ತು ಪೋಷಕರೊಂದಿಗೆ ರಾಮಮಂದಿರಕ್ಕೆ ಹೋಗಲು ಬಯಸುತ್ತೇನೆ.ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ನಾವು ಹೋಗುತ್ತೇವೆ ಎಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್ ಹೇಳಿದರು.

ಆಹ್ವಾನದ ಬಗ್ಗೆ ಕೇಳಿದಾಗ, ಕೇಜ್ರಿವಾಲ್ “ನನಗೆ ಅವರಿಂದ (ಸರ್ಕಾರ) ಪತ್ರ ಬಂದಿದೆ.ನಾವು ಅವರಿಗೆ ಕರೆ ಮಾಡಿದಾಗ, ವೈಯಕ್ತಿಕ ಆಹ್ವಾನ ನೀಡಲು ತಂಡ ಬರಲಿದೆ ಎಂದು ನಮಗೆ ತಿಳಿಸಲಾಯಿತು. ಆ ತಂಡ ಇನ್ನೂ ಬಂದಿಲ್ಲ ಎಂದಿದ್ದಾರೆ. ಆಮಂತ್ರಣ ಪತ್ರಿಕೆಯ ಪ್ರಕಾರ ಒಬ್ಬರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಇಷ್ಟೊಂದು ವಿವಿಐಪಿಗಳು ಇರುವುದರಿಂದ ಅವರ ಮೇಲೆ ಹೆಚ್ಚಿನ ಭದ್ರತೆಯನ್ನು ಕೇಂದ್ರೀಕರಿಸಲಾಗುವುದು ಎಂದು ಅವರು ಹೇಳಿದರು.


ತ್ಯಾಗರಾಜ್ ಸ್ಟೇಡಿಯಂನಲ್ಲಿ ನಡೆದ ಧಾರ್ಮಿಕ ಸಂಗೀತ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಅವರು ಹಿರಿಯರ ಗುಂಪನ್ನು ಭೇಟಿಯಾದರು. ಈ ಹಿರಿಯರು ದೆಹಲಿ ದ್ವಾರಕಾಧೀಶಕ್ಕೆ ತೀರ್ಥಯಾತ್ರೆಗೆ ತೆರಳಿದರು. ಇವರಿಗೆ ದೆಹಲಿ ಸರ್ಕಾರ ಹಣ ನೀಡುತ್ತದೆ.  ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ ಅಡಿಯಲ್ಲಿ, ದೆಹಲಿ ಸರ್ಕಾರವು ಪುರಿ, ರಾಮೇಶ್ವರಂ, ಅಯೋಧ್ಯೆ, ಗೋಲ್ಡನ್ ಟೆಂಪಲ್, ಅಜ್ಮೀರ್ ಷರೀಫ್ ದರ್ಗಾ, ಇತ್ಯಾದಿಗಳನ್ನು ಒಳಗೊಂಡಂತೆ ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಸಂಪೂರ್ಣ ಸರ್ಕಾರಿ ಅನುದಾನಿತ ತೀರ್ಥಯಾತ್ರೆಗೆ ಹಿರಿಯ ನಾಗರಿಕರನ್ನು ಕಳುಹಿಸುತ್ತದೆ. ಅಯೋಧ್ಯೆಗೆ ವಿಶೇಷ ರೈಲು ಸೇವೆಗೆ ದೆಹಲಿ ಸರ್ಕಾರ ಪ್ರಯತ್ನಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದರು.

“ನಾನು ಎಲ್ಲರನ್ನೂ ಭೇಟಿಯಾದೆ. ಎಲ್ಲರೂ ಸಂತೋಷವಾಗಿರುವಂತೆ ತೋರುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ನಂತರ, ಜನರು ಭೇಟಿ ನೀಡಲು ಅಯೋಧ್ಯೆಗೆ ಹೆಚ್ಚಿನ ಯಾತ್ರಿ ರೈಲುಗಳನ್ನು ವ್ಯವಸ್ಥೆ ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: ಜನವರಿ 23 ರಿಂದ ಭಕ್ತರಿಗೆ ರಾಮದರ್ಶನ ಮಾಡುವ ಅವಕಾಶ: ಗೋಪಾಲ್ ಜೀ, ರಾಮಮಂದಿರ ನಿರ್ಮಾಣ ಜವಾಬ್ದಾರಿ ಹೊತ್ತವರು

ಜನವರಿ 22 ರಂದು ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಹಲವಾರು ರಾಜಕೀಯ ನಾಯಕರು, ಕ್ರಿಕೆಟಿಗರು, ಚಲನಚಿತ್ರ ತಾರೆಯರು ಮತ್ತು ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಏತನ್ಮಧ್ಯೆ, ಆಮ್ ಆದ್ಮಿ ಪಕ್ಷದ (ಎಎಪಿ) ಗುಜರಾತ್ ಘಟಕವು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಮುಂಬರುವ ಪ್ರಾಣ ಪ್ರತಿಷ್ಠೆಯನ್ನು ಗೌರವಿಸಲು ಜನವರಿ 20 ರಿಂದ ಪ್ರಾರಂಭವಾಗುವ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಬುಧವಾರ ಪ್ರಕಟಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ