WITT Global Summit: ಪುರುಷರಿಗೆ ಥಳಿಸುವುದರಿಂದ ಲಿಂಗ ಸಮಾನತೆ ಖಚಿತಪಡಿಸಲು ಸಾಧ್ಯವಿಲ್ಲ: ಸ್ಮೃತಿ ಇರಾನಿ

|

Updated on: Feb 26, 2024 | 5:47 PM

ಭಾರತವು ತನ್ನ ಸ್ವಾತಂತ್ರ್ಯದ ಹೋರಾಟದಲ್ಲಿ, ರಾಣಿ ಲಕ್ಷ್ಮೀಬಾಯಿ ಎಂಬ ಮಹಿಳಾ ಆಡಳಿತಗಾರ್ತಿಯನ್ನು ಹೊಂದಿದ್ದು, ತನ್ನ ಮಗುವನ್ನು ಬೆನ್ನಿನ ಮೇಲೆ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿ ಕುದುರೆಯ ಮೇಲೆ ಯುದ್ಧಕ್ಕೆ ಹೋಗಿದ್ದಳು ಎಂಬುದಕ್ಕೆ ಐತಿಹಾಸಿಕವಾಗಿ ಸಾಕ್ಷಿಯಾಗಬಲ್ಲ ಏಕೈಕ ರಾಷ್ಟ್ರವಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

WITT Global Summit: ಪುರುಷರಿಗೆ ಥಳಿಸುವುದರಿಂದ ಲಿಂಗ ಸಮಾನತೆ ಖಚಿತಪಡಿಸಲು ಸಾಧ್ಯವಿಲ್ಲ: ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us on

ದೆಹಲಿ ಫೆಬ್ರವರಿ 26: ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಲಿಂಗ ಅಸಮಾನತೆ ಕೊನೆಗೊಳ್ಳಬೇಕು. ಸಮಾನತೆಯ (Gender equality) ಘೋಷವಾಕ್ಯವಾಗಿ ಮಹಿಳಾ ಸಬಲೀಕರಣದಿಂದ ಪ್ರಗತಿಯ ಸಂಕೇತವಾಗಿ ಮಹಿಳಾ ಸಾಧನೆಗೆ ನಿರೂಪಣೆ ಬದಲಾಗಬೇಕು. TV9 ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ‘ ಗ್ಲೋಬಲ್ ಶೃಂಗಸಭೆಯ 2024 ರ ಆವೃತ್ತಿಯಲ್ಲಿ ಈ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (Smriti Irani) ಮಾತನಾಡಿದ್ದಾರೆ. ‘India: Poised For The Next Big Leap ಎಂಬುದೇ ಈ ಶೃಂಗಸಭೆಯ ಧ್ಯೇಯ. ಜನಸಂಖ್ಯೆಯ ಶೇಕಡಾ 50 ರಷ್ಟಿರುವ ಮಹಿಳೆಯರು ಭಾರತದ ಬೆಳವಣಿಗೆಯ ಕಥೆಗೆ ಪ್ರಮುಖ ಕೊಡುಗೆದಾರರಾಗಿದ್ದಾರೆ.  ನಮ್ಮ ಮಹಿಳೆಯರನ್ನು ನಿರ್ಬಂಧಿಸುವ ಬದಲು ನಮ್ಮ ಹುಡುಗರಿಗೆ ಕಲಿಸುವ ಸಮಯ ಬಂದರೂ, ಪುರುಷರಿಗೆ ಥಳಿಸುವುದು ಲಿಂಗ ಸಮಾನತೆಯನ್ನು ಖಚಿತಪಡಿಸುವುದಿಲ್ಲ. ನಾವು ಮಹಿಳೆಯರನ್ನು ಮಹಿಳೆಯರ ಸಮಸ್ಯೆಗಳಿಗೆ ಮಾತ್ರ ಸೀಮಿತಗೊಳಿಸಿದಾಗ ನಾವು ಅವರಿಗೆ ದೊಡ್ಡ ಅಪಚಾರ ಮಾಡುತ್ತೇವೆ ಎಂದು ಸಚಿವೆ ಹೇಳಿದ್ದಾರೆ.

“ಪುರುಷರನ್ನು ಹೊಡೆಯುವುದು ಲಿಂಗ ಸಮಾನತೆಯನ್ನು ಖಚಿತಪಡಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ನಾವು ಇದರ ಬಗ್ಗೆ ಒಂದು ಕೈ ನೋಡುತ್ತೇವೆ ಎಂದು ನೀವು ಪ್ರತಿಯೊಬ್ಬ ಮನುಷ್ಯನನ್ನು ಬೊಟ್ಟು ಮಾಡಿದರೆ ನಮಗೆ ಅಗತ್ಯವಿರುವ ಸಾಮಾಜಿಕ ಸಮತೋಲನವನ್ನು ನೀವು ಸೃಷ್ಟಿಸುವುದಿಲ್ಲ, ”ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಎಲ್ಲವನ್ನೂ ನಿಭಾಯಿಸುವುದು ಅಥವಾ ಚೌಕಟ್ಟು ಮೀರಿ ಬರುವುದು ಹೇಗೆ ಎಂದು ಕೇಳಿದಾಗ, “ಗಾಜಿನ ಚಾವಣಿಯ ಕಲ್ಪನೆಯು ಅಮೆರಿಕನ್ ಕಲ್ಪನೆಯಾಗಿದೆ. ಇದು ಗ್ಲೋಬಲ್ ಸೌತ್ ಪರಿಕಲ್ಪನೆಯಲ್ಲ. ಈ ಗಾಜಿನ ಮೇಲ್ಛಾವಣಿಗಳ ಬಗ್ಗೆ ಯುಎಸ್ ಮಾತನಾಡುತ್ತಿರುವಾಗ, ಮಹಿಳೆಯರು ಮತ್ತು ಸಮಾಜದಲ್ಲಿ ಅವರ ನಿಲುವಿಗೆ ಸಂಬಂಧಿಸಿದಂತೆ ಭಾರತವು ಈಗಾಗಲೇ ಮೈಲುಗಲ್ಲುಗಳನ್ನು ದಾಟಿತ್ತು ಎಂದಿದ್ದಾರೆ.

“ನಾವು 2013 ರಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆಯನ್ನು ಅಂಗೀಕರಿಸಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆ ಬರೆದ ‘ಅರ್ಥಶಾಸ್ತ್ರ’ದಲ್ಲಿ ವಿಶೇಷವಾಗಿ ಸಾರ್ವಜನಿಕ ಅಧಿಕಾರಿಯಿಂದ ಮಹಿಳೆಗೆ ಕಿರುಕುಳಕ್ಕೊಳಗಾದರೆ ನಿರ್ವಾಹಕರು ಅಥವಾ ಆಡಳಿತಗಾರರು ಏನು ಮಾಡಬೇಕು ಎಂಬುದಕ್ಕೆ ದಾಖಲಿತ ಪುರಾವೆಗಳಿವೆ ”ಎಂದು ಕೇಂದ್ರ ಸಚಿವರು ಹೇಳಿದರು.

“ಭಾರತವು ತನ್ನ ಸ್ವಾತಂತ್ರ್ಯದ ಹೋರಾಟದಲ್ಲಿ, ರಾಣಿ ಲಕ್ಷ್ಮೀಬಾಯಿ ಎಂಬ ಮಹಿಳಾ ಆಡಳಿತಗಾರ್ತಿಯನ್ನು ಹೊಂದಿದ್ದು, ತನ್ನ ಮಗುವನ್ನು ಬೆನ್ನಿನ ಮೇಲೆ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿ ಕುದುರೆಯ ಮೇಲೆ ಯುದ್ಧಕ್ಕೆ ಹೋಗಿದ್ದಳು ಎಂಬುದಕ್ಕೆ ಐತಿಹಾಸಿಕವಾಗಿ ಸಾಕ್ಷಿಯಾಗಬಲ್ಲ ಏಕೈಕ ರಾಷ್ಟ್ರವಾಗಿದೆ. ‘ವಿರಾಸತ್ ಭಿ, ವಿಕಾಸ್ ಭಿ’ ಎಂದರೆ ಇದೇ,” ಎಂದು ಅವರು ಹೇಳಿದ್ದಾರೆ.

ಸ್ಮೃತಿ ಇರಾನಿ ಅವರ ಹಿಂದಿರುವ ‘ನಾರಿ ಶಕ್ತಿ’ ಬಗ್ಗೆ ಕೇಳಿದಾಗ ನಗಾಡಿದ ಅವರು, “ಪುರುಷರಿಗೆ ಈ ಪ್ರಶ್ನೆಯನ್ನು ಎಂದಿಗೂ ಕೇಳಲಾಗುವುದಿಲ್ಲ. ಇದು ಸವಾಲು ಮಾಡಬೇಕಾದ ಸೈಕಾಲಜಿ. ಶಿಕ್ಷಣ ಪಡೆಯದ ಪುರುಷರು ಮಹಿಳೆಯರಿಗೆ ಅಂತರ್ಗತ ಪಕ್ಷಪಾತವನ್ನು ಹೊಂದಿರುತ್ತಾರೆ. ಎಲ್ಲರಲ್ಲೂ ಗುರುತಿಸಲಾಗದ ಪಕ್ಷಪಾತವಿದೆ. ಈ ಪ್ರಶ್ನೆಗೆ ಉತ್ತರಿಸುವ ಮೂಲಕ ನಾನು ಆ ಪಕ್ಷಪಾತವನ್ನು ಪ್ರಚೋದಿಸಲು ಬಯಸುವುದಿಲ್ಲ. ನಿಮ್ಮ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ನೀವು ಇಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ಕೇಳಿದರೆ, ನನ್ನದನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ನಾನು ನಿಮಗೆ ಹೇಳುತ್ತೇನೆ ಎಂದಿದ್ದಾರೆ ಸಚಿವೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಇತ್ತೀಚಿನ ಪೋಸ್ಟ್ ಕುರಿತು ಮಾತನಾಡಿರುವ ಅವರು, ತಮ್ಮ ತಂದೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ತೊಂದರೆಗೆ ಸಿಲುಕುವುದು ತನ್ನ ತಂದೆಗೆ ಅಭ್ಯಾಸವಾಗಿದೆ ಎಂದು ಹೇಳಿದರು. ಅವರು ಫೋಟೋಗೆ ಶೀರ್ಷಿಕೆ ನೀಡಿದ್ದು, “ಬಾಸ್ ತಂದೆಯನ್ನು ಭೇಟಿಯಾದಾಗ ಅವರು ನಿಮ್ಮ ಬಗ್ಗೆ ದೂರುಗಳನ್ನು ವಿನಿಮಯ ಮಾಡಿಕೊಳ್ಳುವುದಿಲ್ಲಎಂದು ನೀವು ಪ್ರಾರ್ಥಿಸುತ್ತೀರಿ PTM ಚಲ್ ರಹೀ ಹೈ (PTM ನಡೆಯುತ್ತಿದೆ).”ಎಂಬುದಾಗಿತ್ತು.

ಇದನ್ನೂ ಓದಿ: ಸಂದೇಶ್​ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು: ಸ್ಮೃತಿ ಇರಾನಿ

“ನನಗೆ 47 ವರ್ಷ ಮತ್ತು ನಾನು ಪ್ರಧಾನಿ ಮೋದಿಯವರ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದೇನೆ. ನಾನು ಇತಿಹಾಸಕ್ಕೆ ಸಾಕ್ಷಿಯಾಗಲು ಬದುಕಿದ್ದೇನೆ… ಇತಿಹಾಸವನ್ನು ನಿರ್ಮಿಸಿದ ದಂತಕಥೆಯೊಂದಿಗೆ ನಾನು ಇದ್ದೇನೆ. ನಾನು ಉತ್ತೀರ್ಣಳಾಗಿದ್ದೇನೆಯೋ ಅಥವಾ ವಿಫಲಳಾಗಿದ್ದೇನೆಯೋ ಎಂದು ನನಗೆ ಖಚಿತವಿಲ್ಲ, ಆದರೆ ವರದಿ ಕಾರ್ಡ್‌ನಲ್ಲಿ ಪ್ರಧಾನಿ ಮೋದಿ ಅವರ ಸಹಿ ಇದೆ ಮತ್ತು ಅದು ಅಮೂಲ್ಯವಾಗಿದೆ, ”ಎಂದು ಅವರು ಹೇಳಿದರು. “ಭಾರತ ಇಂದು ಏನು ಮಾಡುತ್ತದೆಯೋ ಜಗತ್ತು ನಾಳೆ ಮಾಡುತ್ತದೆ” ಎಂಬ ಸಂದೇಶದೊಂದಿಗೆ ಸ್ಮೃತಿ ಮಾತು ಮುಕ್ತಾಯಗೊಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ