WITT TV9 Global Summit 2024: ಸಂದೇಶ್​ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು: ಸ್ಮೃತಿ ಇರಾನಿ

ಸಂದೇಶ್​ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇಂದು ಟಿವಿ9 ನೆಟ್​ವರ್ಕ್​ ಆಯೋಜಿಸಿದ್ದ ವಾಟ್​ ಇಂಡಿಯಾ ಥಿಂಕ್ಸ್​ ಟುಡೇ ಶೃಂಗಸಭೆಯಲ್ಲಿ ಮಾತನಾಡಿದರು.

WITT TV9 Global Summit 2024: ಸಂದೇಶ್​ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು: ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us
|

Updated on:Feb 26, 2024 | 12:48 PM

ಸಂದೇಶ್​ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಹೇಳಿದ್ದಾರೆ. ಇಂದು ಟಿವಿ9 ನೆಟ್​ವರ್ಕ್​ ಆಯೋಜಿಸಿದ್ದ ವಾಟ್​ ಇಂಡಿಯಾ ಥಿಂಕ್ಸ್​ ಟುಡೇ ಶೃಂಗಸಭೆಯಲ್ಲಿ ಮಾತನಾಡಿದರು. ಅಂತಾರಾಷ್ಟ್ರೀಯ ಗಣ್ಯರ ಎದುರು ದೇಶದ ಆಂತರಿಕ ವಿಷಯಗಳ ಬಗ್ಗೆ ಚರ್ಚಿಸುವುದು ನನಗೆ ಇಷ್ಟವಿಲ್ಲ. ಸಂದೇಶಖಾಲಿಯಲ್ಲಿ ನಡೆದದ್ದು ಮನುಷ್ಯರ ಕಲ್ಪನೆಗೂ ನಿಲುಕದ್ದು ಎಂದು ಹೇಳಿದರು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಯಿಂದ ಇಡೀ ದೇಶದಲ್ಲಿ ಆಕ್ರೋಶದ ವಾತಾವರಣವಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಾಗಲೆಲ್ಲ, ಅವನು ಬಿಜೆಪಿಯವನಾಗಿದ್ದರೆ ಅವನನ್ನು ಸುಲಭವಾಗಿ ಕೊಲ್ಲಬಹುದು, ಬಿಜೆಪಿಯ ಮಹಿಳಾ ಕಾರ್ಯಕರ್ತೆಯಿದ್ದರೆ ಆಕೆಯನ್ನು ಮನೆಯಿಂದ ಹೊರಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಬಹುದು. ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರೇನಾದರೂ ಇದ್ದರೆ ಮರಕ್ಕೆ ನೇಣು ಹಾಕಿ ಸಾಯಿಸಬಹುದು.

ಬಿಜೆಪಿಯ ಹಿರಿಯ ಕಾರ್ಯಕರ್ತನಿದ್ದರೆ ಅವರ ಮನೆಗೆ ಬೆಂಕಿ ಹಚ್ಚಬಹುದು, ಏಕೆಂದರೆ ನಾವು ಬಿಜೆಪಿ ಕಾರ್ಯಕರ್ತರು, ಯಾರಾದರೂ ನಮ್ಮನ್ನು ಕೊಂದರೂ ಪರವಾಗಿಲ್ಲ, ಹೋರಾಟಕ್ಕೆ ನಾವು ಕೊಡುವ ಬೆಲೆ ಅದು. ಆದರೆ ಈಗ ಮಮತಾ ಬ್ಯಾನರ್ಜಿಯನ್ನು ವರ್ಷಗಟ್ಟಲೆ ಬೆಂಬಲಿಸಿದ ಮಹಿಳೆಯರನ್ನು ಅವರ ಮನೆಯಿಂದ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಇದಕ್ಕೇನು ಹೇಳಬೇಕು ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಮಹಿಳೆಯರಿಗಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ, ಸುಮಾರು 20 ವರ್ಷಗಳ ಹಿಂದೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಸ್ಪತ್ರೆಗಳಲ್ಲಿಯೇ ಹೆರಿಗೆಯಾಗುವಂತೆ ನೋಡಿಕೊಂಡಿದ್ದರು.ಧಾನಿ ಮೋದಿ ಅವರು ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ವಿಶಿಷ್ಟ ಗುರುತನ್ನು ನೀಡಿದ್ದಾರೆ.

ಮಹಿಳೆಯರನ್ನು ಆರ್ಥಿಕತೆಯಲ್ಲಿ ಸಮಾನ ಪಾಲುದಾರರನ್ನಾಗಿ ಮಾಡಿದರು. ಅವರು ಮಹಿಳೆಯರ ಹಿತಾಸಕ್ತಿ ಮತ್ತು ಅವರಿಗೆ ಶಕ್ತಿ ನೀಡುವಂತಹ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಇರಾನಿ ಅವರು ‘ಲಖ್ಪತಿ ದೀದಿ’ಯಿಂದ ‘ಡ್ರೋನ್ ದೀದಿ’ ವರೆಗಿನ ಯೋಜನೆಗಳನ್ನು ಪ್ರಸ್ತಾಪಿಸಿದರು.

ಮತ್ತಷ್ಟು ಓದಿ: WITT TV9 Global Summit 2024: ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಅಪಾಯಕಾರಿಯಲ್ಲ: ಸಮಿಕ್ ರಾಯ್

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವುದನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಈ ಯೋಜನೆಯು ಮಹಿಳೆಯರಿಗೆ ಹೊಸ ಶಕ್ತಿಯನ್ನು ನೀಡಿದೆ ಎಂದು ಹೇಳಿದರು. ಸುಮಾರು ಮೂರೂವರೆ ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದರು.

ಮಹಿಳೆಯರಿಗೆ ಮಾತ್ರ ಈ ಪ್ರಶ್ನೆ ಏಕೆ? ನೀವು ಮನೆ ಮತ್ತು ಕಚೇರಿಯನ್ನು ಹೇಗೆ ನಿರ್ವಹಿಸುತ್ತೀರಿ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಮಹಿಳೆಯರಿಗೆ ಮಾತ್ರ ಏಕೆ ಈ ಪ್ರಶ್ನೆ ಕೇಳುತ್ತಾರೆ. ಈ ಮೊದಲು ರಜನೀಶ್ ಕುಮಾರ್ ಇಲ್ಲಿದ್ದರು, ಅವರನ್ನು ಏಕೆ ಪ್ರಶ್ನಿಸಿಲ್ಲ ಎಂದರು.

ನನ್ನ ಮದೀನಾ ಭೇಟಿಯು ಇಸ್ಲಾಮಿಕ್ ದೇಶಗಳಲ್ಲಿ ಪ್ರಧಾನಿಯ ಸ್ವೀಕಾರಕ್ಕೆ ಸಾಕ್ಷಿ: ಸ್ಮೃತಿ ಇರಾನಿ ಸ್ಮೃತಿ ಇರಾನಿ ಇತ್ತೀಚೆಗೆ ಮದೀನಾಗೆ ಹೋಗಿದ್ದರು. ಇದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಸ್ಮೃತಿ ಇರಾನಿ ಉತ್ತರಿಸಿ ನನ್ನ ಮದೀನಾ ಭೇಟಿಯು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಪ್ರಧಾನಿಯ ಸ್ವೀಕಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಜಾಗತಿಕ ಶೃಂಗಸಭೆಯ ಭಾಗವಾಗಲಿದ್ದಾರೆ ವಾಟ್​ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಶೃಂಗಸಭೆಯು ಫೆಬ್ರವರಿ 27 ರವರೆಗೆ ಮುಂದುವರಿಯುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಲ್ಲದೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬಾಲಿವುಡ್ ತಾರೆ ಆಯುಷ್ಮಾನ್ ಖುರಾನಾ ಮತ್ತು ಕಂಗನಾ ರನೌತ್ ಸೇರಿದ್ದಾರೆ. ಅದೇ ಸಮಯದಲ್ಲಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:28 pm, Mon, 26 February 24