WITT TV9 Global Summit 2024: ಪಾಕಿಸ್ತಾನ ಉಗ್ರರನ್ನು ಎಲ್ಲಿವರೆಗೆ ಸಲಹುತ್ತೋ ಅಲ್ಲಿವರೆಗೆ ಭಾರತ-ಪಾಕ್ ಸಂಬಂಧ ಸರಿಹೋಗದು: ರಾಜನಾಥ್​ ಸಿಂಗ್

|

Updated on: Feb 27, 2024 | 12:14 PM

ಟಿವಿ9 ನೆಟ್​ವರ್ಕ್​ ಆಯೋಜಿಸಿದ್ದ ವಾಟ್​ ಇಂಡಿಯಾ ಥಿಂಕ್ಸ್​ ಟುಡೇ ಶೃಂಗಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ಸಿಂಗ್ ಪಾಕಿಸ್ತಾನ, ಭಯೋತ್ಪಾದಕೆ, ಪಿಒಕೆ ವಿಚಾರ ಕುರಿತು ಮಾತನಾಡಿದರು.

WITT TV9 Global Summit 2024: ಪಾಕಿಸ್ತಾನ ಉಗ್ರರನ್ನು ಎಲ್ಲಿವರೆಗೆ ಸಲಹುತ್ತೋ ಅಲ್ಲಿವರೆಗೆ ಭಾರತ-ಪಾಕ್ ಸಂಬಂಧ ಸರಿಹೋಗದು: ರಾಜನಾಥ್​ ಸಿಂಗ್
Follow us on

‘‘ಪಾಕಿಸ್ತಾನವು ಉಗ್ರರನ್ನು ಎಲ್ಲಿವರೆಗೆ ಸಲಹುತ್ತದೋ ಅಲ್ಲಿಯವರೆಗೆ ಭಾರತ-ಪಾಕ್​ ಸಂಬಂಧ ಸರಿಹೋಗಲು ಸಾಧ್ಯವಿಲ್ಲ’’ ಎಂದು ರಕ್ಷಣಾ ಸಚಿವ ರಾಜ​ನಾಥ್​ ಸಿಂಗ್(Rajnath Singh) ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ ಮೂರು ದಿನಗಳ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’’ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ‘‘ಪಾಕಿಸ್ತಾನದಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದೆ, ಪಾಕಿಸ್ತಾನವು ತನ್ನ ಕೆಟ್ಟ ಉದ್ದೇಶವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದೆ. ಈ ಪ್ರವೃತ್ತಿ ಎಲ್ಲಿವರೆಗೆ ಮುಂದುವರೆಯುತ್ತೋ ಅಲ್ಲಿಯವರೆಗೆ ಸಂಬಂಧ ಸುಧಾರಿಸದು’’ ಎಂದಿದ್ದಾರೆ.

ಈ ಎಲ್ಲಾ ತಪ್ಪುಗಳನ್ನು ಪಾಕಿಸ್ತಾನ ಸರಿಪಡಿಸಿದರೆ ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ಭವಿಷ್ಯದಲ್ಲಿ ಮಾತುಕತೆ ನಡೆಸಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕ ಕೃತ್ಯಗಳನ್ನು ನಿಲ್ಲಿಸಿದರೆ ಮಾತುಕತೆ ನಡೆಸಬಹುದು, ಪಾಕಿಸ್ತಾನದ ಆಡಳಿತಗಾರರು ಭಯೋತ್ಪಾದಕರನ್ನು ಪ್ರೋತ್ಸಾಹಿಸುತ್ತಾರೆ, ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದರು.

ಭಯೋತ್ಪಾದನೆಯನ್ನು ತಡೆಯುವಲ್ಲಿ ಅಮಿತ್ ಶಾ ಪ್ರಮುಖ ಪಾತ್ರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ ರಾಜನಾಥ್ ಸಿಂಗ್ ಅವರು ಭಯೋತ್ಪಾದನೆಯನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಇಂದು ಕಾಶ್ಮೀರದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣವಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆಗಳನ್ನು ಕೇಳಿದೆ. ನಮ್ಮ ಪಕ್ಷಕ್ಕೆ ಯಾರು ಬರಲು ಬಯಸುತ್ತಾರೋ ಅವರಿಗೆ ಸ್ವಾಗತ. ಬೇರೆ ಪಕ್ಷಗಳ ನಾಯಕರನ್ನು ಸೇರಿಸಿಕೊಂಡಿದ್ದೇವೆ ಎಂದರು.

ಮತ್ತಷ್ಟು ಓದಿ:WITT TV9 Global Summit 2024: ಹತ್ತು ವರ್ಷಗಳಲ್ಲಿ ರಕ್ಷಣಾ ನೀತಿ ಎಷ್ಟು ಬದಲಾಗಿದೆ? ರಾಜನಾಥ್​ ಸಿಂಗ್​ ಹೇಳಿದ್ದೇನು?

ಯುದ್ಧವನ್ನು ಶಾಂತಗೊಳಿಸುವಲ್ಲಿ ಭಾರತದ ಪ್ರಮುಖ ಪಾತ್ರ
ಜಗತ್ತು ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಸಾಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಸಮಯದಲ್ಲಿ ಅವರು ರಷ್ಯಾ-ಉಕ್ರೇನ್ ಯುದ್ಧವನ್ನು ಪ್ರಸ್ತಾಪಿಸಿದರು. ಯುದ್ಧವನ್ನು ಶಮನಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕ್ರೇನ್ ಯುದ್ಧದ ಸಂದರ್ಭದಲ್ಲಿ ವಿಶ್ವದ ಯಾವುದೇ ರಾಷ್ಟ್ರದ ಮುಖ್ಯಸ್ಥರು ಮಾಡಲಾಗದ ಕೆಲಸವನ್ನು ಮೋದಿಜೀ ಮಾಡಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

ವೇಳೆ ಪಿಒಕೆ, ಗಡಿಯಲ್ಲಿ ಸೇನೆ ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ