ಹೈದರಾಬಾದ್: ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಪ್ರೇಮದ ಹೆಸರಲ್ಲಿ ಪಾಗಲ್ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟ್ನಲ್ಲಿ ನಡೆದಿದೆ. ಈ ಪಾಗಲ್ ಪ್ರೇಮಿಯಿಂದಾಗಿ ಯುವತಿ ಸಜೀವ ದಹನವಾಗಿದ್ದಾಳೆ.
ಚಿನ್ನಾರಿ.. ನರ್ಸ್
ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಚಿನ್ನಾರಿ ಎಂಬ ಯುವತಿಗೆ ಪ್ರೇಮದ ಹೆಸರಲ್ಲಿ ನಾಗಭೂಷಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ಸಹ ನೀಡಿದ್ದಳು. ಆದರೆ ಪೊಲೀಸರು ಈ ವಿಷಯನ್ನು ಗಂಭೀರವಾಗಿ ಪರಿಗಣಿಸದೆ ರಾಜಿ ಮಾಡಿಸಿದ್ದರು, ಯುವತಿ ಹಾಗೂ ಯುವಕನನ್ನು ಠಾಣೆಗೆ ಕರೆಯಿಸಿ ಪಂಚಾಯ್ತಿ ಮಾಡಿ ಯುವಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದಾದ ನಂತರ ಸಹ ಯುವಕ ನಾಗಭೂಷಣ್ನ ಕಿರುಕುಳ ಕಡಿಮೆಯಾಗಿರಲಿಲ್ಲ.
ಯುವತಿ ಸಜೀವ ದಹನ; ಪಾಗಲ್ ಪ್ರೇಮಿ ಸಾವು
ಅಕ್ಟೋಬರ್ 12ರ ರಾತ್ರಿ ಈ ಪಾಗಲ್ ಪ್ರೇಮಿ ಯುವತಿಯ ಜೊತೆ ಮಾತಾಡಬೇಕೆಂದು ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಯುವತಿ ಆತನೊಂದಿಗೆ ಮಾತನಾಡಲು ಒಪ್ಪದಿದ್ದಾಗ, ಜೊತೆಯಲ್ಲೇ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಧಿಡೀರನೆ ಹೊತ್ತಿಕೊಂಡಿದೆ.
ಅಗ್ನಿ ಸ್ಪರ್ಶವಾಗಿ ಯುವತಿ ಸಜೀವ ದಹನವಾಗಿದ್ದಾಳೆ. ಹಾಗೂ ಯವಕನಿಗೂ ಸಹ ಸುಟ್ಟ ಗಾಯಗಳಾಗಿದ್ದು, ಗುಂಟೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪಾಗಲ್ ಪ್ರೇಮಿ ನಾಗಭೂಷಣ್ ಸಹ ಮೃತಪಟ್ಟಿದ್ದಾನೆ.
Published On - 10:58 am, Tue, 13 October 20