ಡೆಲಿವರಿಯಾದ 14 ದಿನಗಳಲ್ಲೇ ಡ್ಯೂಟಿಗೆ ಹಾಜರ್​: ಕೂಸೊಂದಿಗೆ ಕಚೇರಿಗೆ ಬಂದ IAS ಅಧಿಕಾರಿ!

ಲಕ್ನೋ: ಕಚೇರಿ ಹಾಗೂ ಕೆಲಸದ ಸ್ಥಳಗಳಲ್ಲಿ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ನೀಡಲಾದ ಮೊದಲನೇ ಸೌಲಭ್ಯವೆಂದರೆ ಅದು ಹೆರಿಗೆ ರಜೆ. ಅಂತೆಯೇ, ಹೆರಿಗೆ ಹಾಗೂ ನವಜಾತ ಶಿಶುವಿನ ಲಾಲನೆಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಅದರೆ, ಇಲ್ಲೊಬ್ಬರು IAS ಅಧಿಕಾರಿ ತಮಗೆ ನೀಡಲಾಗಿದ್ದ ಹೆರಿಗೆ ರಜೆಯ ಪ್ರಯೋಜನ ಪಡೆಯದೆ ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಹೌದು, ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಸದ್ಯ ಕೊವಿಡ್​ […]

ಡೆಲಿವರಿಯಾದ 14 ದಿನಗಳಲ್ಲೇ ಡ್ಯೂಟಿಗೆ ಹಾಜರ್​: ಕೂಸೊಂದಿಗೆ ಕಚೇರಿಗೆ ಬಂದ IAS ಅಧಿಕಾರಿ!
Follow us
KUSHAL V
|

Updated on:Oct 13, 2020 | 6:48 PM

ಲಕ್ನೋ: ಕಚೇರಿ ಹಾಗೂ ಕೆಲಸದ ಸ್ಥಳಗಳಲ್ಲಿ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ನೀಡಲಾದ ಮೊದಲನೇ ಸೌಲಭ್ಯವೆಂದರೆ ಅದು ಹೆರಿಗೆ ರಜೆ. ಅಂತೆಯೇ, ಹೆರಿಗೆ ಹಾಗೂ ನವಜಾತ ಶಿಶುವಿನ ಲಾಲನೆಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಅದರೆ, ಇಲ್ಲೊಬ್ಬರು IAS ಅಧಿಕಾರಿ ತಮಗೆ ನೀಡಲಾಗಿದ್ದ ಹೆರಿಗೆ ರಜೆಯ ಪ್ರಯೋಜನ ಪಡೆಯದೆ ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಹೌದು, ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಸದ್ಯ ಕೊವಿಡ್​ ನೋಡಲ್​ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ IAS ಅಧಿಕಾರಿ ಸೌಮ್ಯಾ ಪಾಂಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಇದಲ್ಲದೆ, ತಮ್ಮ ನವಜಾತ ಶಿಶುವನ್ನು ತಮ್ಮೊಟ್ಟಿಗೆ ಕಚೇರಿಗೂ ಕರೆತಂದಿದ್ಧಾರೆ.

ಈ ಕುರಿತು ಮಾತನಾಡಿದ ಸೌಮ್ಯಾ ಪಾಂಡೆ ನಾನೊಬ್ಬ IAS ಅಧಿಕಾರಿ. ಹಾಗಾಗಿ, ನನ್ನ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿ ತಾಯಿಗೂ ತನ್ನ ಮಗುವಿನ ಲಾಲನೆಪಾಲನೆ ಮಾಡಲು ಆ ದೇವರು ಶಕ್ತಿ ನೀಡಿರುತ್ತಾನೆ. ಗ್ರಾಮೀಣ ಭಾರತದಲ್ಲಂತೂ ಮಹಿಳೆಯರು ಗರ್ಭವತಿ ಆಗಿರುವಾಗಲೂ ಮನೆಗೆಲಸವನ್ನು ಮಾಡಿಕೊಂಡು ತದನಂತರ ಹೆರಿಗೆ ಬಳಿಕವೂ ಹಸುಗೂಸು ಮತ್ತು ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುತ್ತಾರೆ. ಹಾಗೆಯೇ, ನನಗೂ ನನ್ನ ಕರ್ತವ್ಯ ನಿರ್ವಹಿಸಲು ಆ ದೇವರು ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.

ಜೊತೆಗೆ, ನನ್ನ ಬೆನ್ನಿಗೆ ನಿಂತ ಜಿಲ್ಲಾಡಳಿತಕ್ಕೆ ಹಾಗೂ ನನ್ನ ಸಿಬ್ಬಂದಿಗೆ ನಾನು ಕೃತಜ್ಞಳಾಗಿರುವೆ ಎಂದು ಹೇಳಿದ್ದಾರೆ. ಸೌಮ್ಯಾ ತಮ್ಮ ಆಪರೇಷನ್​ ಸಂದರ್ಭದಲ್ಲಿ 22 ದಿನಗಳ ಕಾಲ ಹಾಗೂ ಹೆರಿಗೆ ಬಳಿಕ ಎರಡು ವಾರಗಳ ರಜೆ ಪಡೆದಿದ್ದರು.

Published On - 6:37 pm, Tue, 13 October 20

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ