ಪ್ರೀತಿಯ ನೆಪ.. Social Mediaಗೆ ಆಹಾರವಾದ ಫೋಟೋಗಳು: ನೊಂದ ಟೆಕ್ಕಿ ಯುವತಿ ಆತ್ಮಹತ್ಯೆ
ಹೈದರಾಬಾದ್: ಪ್ರೇಮದ ಹಸಿಬಿಸಿಯಲ್ಲಿ ವಂಚಿಸಿದ ಪ್ರಿಯಕರನ ವಂಚನೆ ಸಹಿಸದಾದ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ ಹಳಿಗೆ ಬಿದ್ದು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮೆಡಿಪಲ್ಲಿಯಲ್ಲಿ ಘಟನೆ ನಡೆದಿದ್ದು, ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಎಂದು ತಿಳಿದುಬಂದಿದೆ. ಆರೋಪಿ, ಪ್ರಿಯಕರ ಅಜಯ್ ಪ್ರೀತಿಸೋ ನೆಪದಲ್ಲಿ ಶ್ವೇತಾ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ. ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿದ್ದ ಅಜಯ್ಗೆ ಅದನ್ನು ಹಿಂತೆಗೆಯುವಂತೆ ಶ್ವೇತಾ ಗೋಗರೆದಿದ್ದಾಳೆ. ಅಗ ಅಜಯ್, ಶ್ವೇತಾಗೆ ಬ್ಲಾಕ್‌ಮೇಲ್ ಮಾಡತೊಡಗಿದ್ದಾನೆ. ಫೋಟೋ ತೆಗೆಯದೆ […]
ಹೈದರಾಬಾದ್: ಪ್ರೇಮದ ಹಸಿಬಿಸಿಯಲ್ಲಿ ವಂಚಿಸಿದ ಪ್ರಿಯಕರನ ವಂಚನೆ ಸಹಿಸದಾದ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ ಹಳಿಗೆ ಬಿದ್ದು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮೆಡಿಪಲ್ಲಿಯಲ್ಲಿ ಘಟನೆ ನಡೆದಿದ್ದು, ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಎಂದು ತಿಳಿದುಬಂದಿದೆ.
ಆರೋಪಿ, ಪ್ರಿಯಕರ ಅಜಯ್ ಪ್ರೀತಿಸೋ ನೆಪದಲ್ಲಿ ಶ್ವೇತಾ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ.
ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿದ್ದ ಅಜಯ್ಗೆ ಅದನ್ನು ಹಿಂತೆಗೆಯುವಂತೆ ಶ್ವೇತಾ ಗೋಗರೆದಿದ್ದಾಳೆ. ಅಗ ಅಜಯ್, ಶ್ವೇತಾಗೆ ಬ್ಲಾಕ್‌ಮೇಲ್ ಮಾಡತೊಡಗಿದ್ದಾನೆ. ಫೋಟೋ ತೆಗೆಯದೆ ಅಜಯ್ ಕಿರುಕುಳ ನೀಡಿದ್ದಾನೆ.
ವಿವಾಹವಾಗೋದಾಗಿ ಹೇಳಿ ಮೋಸ: ಸೋಷಿಯಲ್ ಮೀಡಿಯದಲ್ಲಿ ಫೋಟೋ ಹಾಕಿದ್ದಕ್ಕೆ ಅವಮಾನಕ್ಕೀಡಾದಂತೆ ಶ್ವೇತಾ ಭಾವಿಸಿದ್ದಳು. ತನ್ನ ಮರ್ಯಾದೆಗೆ ಧಕ್ಕೆ ಮಾಡಿದ್ದಾಗಿ ಅಜಯ್ ವಿರುದ್ಧ ಪೊಲೀಸರಿಗೆ ಶ್ವೇತಾ ದೂರು ನೀಡಿದ್ದಳು. ಅದಾದ ನಂತರವೂ ಶ್ವೇತಾಗೆ ಅಜಯನ ಕಿರುಕುಳ ತಪ್ಪಲಿಲ್ಲ. ಕೊನೆಗೆ ಇದರಿಂದ ಬೇಸತ್ತು ಟೆಕ್ಕಿ ಶ್ವೇತಾ ರೈಲಿಗೆ ತಲೆ ಕೊಟ್ಟು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.