AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ನೌಕರರಿಗೆ ಮೋದಿ ಬಂಪರ್ ಗಿಫ್ಟ್.. ಏನಿದು ಎಲ್‌ಟಿಸಿ ನಗದು ಯೋಜನೆ?

ದೆಹಲಿ: ದೇಶದಲ್ಲಿ ಕೊರೊನಾ ವೈರಸ್​ನಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಸಂಪ್ರದಾಯಿಕವಲ್ಲದ ಯೋಜನೆಗಳಿಂದ ದೇಶದಲ್ಲಿ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಆರ್ಥಿಕತೆ ಚೇತರಿಕೆಯಾಗುವ ವಿಶ್ವಾಸವೂ ಇದೆ. ಇದಕ್ಕಾಗಿ ಹೊಸ ಯೋಜನೆ ಸಿದ್ಧವಾಗಿದೆ. ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಜಿಡಿಪಿ ಕುಸಿಯುತ್ತಿದೆ. ಕೈಗಾರಿಕಾ ಉತ್ಪಾದನೆ ಕೂಡ ಕುಸಿದಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೇ, ಉದ್ಯೋಗ ನಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಉದ್ಯೋಗ ನಷ್ಟ ತಪ್ಪಿಸಲು ಬೇಡಿಕೆ ಹೆಚ್ಚಾಗುವಂತೆ ಮಾಡಬೇಕು. ಇದಕ್ಕಾಗಿ ಈಗ ಮೋದಿ […]

ಕೇಂದ್ರ ನೌಕರರಿಗೆ ಮೋದಿ ಬಂಪರ್ ಗಿಫ್ಟ್.. ಏನಿದು ಎಲ್‌ಟಿಸಿ ನಗದು ಯೋಜನೆ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
ಆಯೇಷಾ ಬಾನು
|

Updated on: Oct 13, 2020 | 6:58 AM

Share

ದೆಹಲಿ: ದೇಶದಲ್ಲಿ ಕೊರೊನಾ ವೈರಸ್​ನಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಸಂಪ್ರದಾಯಿಕವಲ್ಲದ ಯೋಜನೆಗಳಿಂದ ದೇಶದಲ್ಲಿ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಆರ್ಥಿಕತೆ ಚೇತರಿಕೆಯಾಗುವ ವಿಶ್ವಾಸವೂ ಇದೆ. ಇದಕ್ಕಾಗಿ ಹೊಸ ಯೋಜನೆ ಸಿದ್ಧವಾಗಿದೆ.

ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಜಿಡಿಪಿ ಕುಸಿಯುತ್ತಿದೆ. ಕೈಗಾರಿಕಾ ಉತ್ಪಾದನೆ ಕೂಡ ಕುಸಿದಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೇ, ಉದ್ಯೋಗ ನಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಉದ್ಯೋಗ ನಷ್ಟ ತಪ್ಪಿಸಲು ಬೇಡಿಕೆ ಹೆಚ್ಚಾಗುವಂತೆ ಮಾಡಬೇಕು. ಇದಕ್ಕಾಗಿ ಈಗ ಮೋದಿ ಸರ್ಕಾರ 2 ಹೊಸ ಯೋಜನೆಗಳನ್ನು ಘೋಷಿಸಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಲಾಂಗ್ ಟ್ರಾವೆಲ್ಸ್ ಕನ್ಷೆಷನ್ ಅಡಿ ನಗದು ಹಣ ನೀಡುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಕೇಂದ್ರ ನೌಕರರಿಗೆ ಎಲ್‌ಟಿಸಿ ನೀಡಲು ನಿರ್ಧಾರ ನಗದು ವೋಚರ್ ಅನ್ನು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಇದನ್ನು ಬಳಸಿ ನೌಕರರು ಖರೀದಿಗೆ ಮುಂದಾಗಬಹುದು. ಮುಂದಿನ ವರ್ಷದ ಮಾರ್ಚ್ ಒಳಗೆ ಖರೀದಿ ಮಾಡಬೇಕು.ಇದರಿಂದ ಬೇಡಿಕೆ ಸೃಷ್ಟಿಯಾಗುತ್ತೆ. ಬೇಡಿಕೆ ಸೃಷ್ಟಿಯಾದ್ರೆ, ಉತ್ಪಾದನೆ ಹೆಚ್ಚಿಸಲು ಉದ್ಯೋಗಾವಕಾಶ ಸೃಷ್ಟಿಸಬೇಕಾಗುತ್ತೆ. ಹೀಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎನ್ನುವ ನಿರೀಕ್ಷೆ ಇದೆ. ಹೊಸ ಉದ್ಯೋಗ ಸೃಷ್ಟಿಯಾಗದೇ ಹೋದರೂ, ಇರುವ ಉದ್ಯೋಗಗಳು ಉಳಿದರೇ, ಸಾಕು ಎನ್ನುವ ಪರಿಸ್ಥಿತಿ ದೇಶದಲ್ಲಿದೆ. ಹೀಗಾಗಿ ಬೇಡಿಕೆ ಸೃಷ್ಟಿಸಲು ಕೇಂದ್ರ 49 ಲಕ್ಷ ಉದ್ಯೋಗಿಗಳಿಗೆ ಎಲ್‌ಟಿಸಿ ಮೂಲಕ ನಗದು ನೀಡುವ ಯೋಜನೆ ಘೋಷಿಸಿದೆ. ಹಾಗಾದ್ರೆ ಖರೀದಿಗೆ ಇರುವ ನಿಯಮಗಳು ಏನು ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.

ಖರೀದಿ ನಿಯಮ ಹೀಗಿದೆ ಎಲ್‌ಟಿಸಿ ವೋಚರ್​ನಲ್ಲಿ ಕೇಂದ್ರ ನೌಕರರು ಶೇಕಡಾ 12 ರಷ್ಟು ಜಿಎಸ್‌ಟಿ ಇರುವ ಉತ್ಪನ್ನ ಖರೀದಿ ಮಾಡಬೇಕು. ಆಹಾರೇತರ ಉತ್ಪನ್ನ ಖರೀದಿಸಬೇಕಾದ್ರೂ ಗೃಹಬಳಕೆ ಸಾಮಗ್ರಿ ಖರೀದಿಸಲು ಅವಕಾಶ ನೀಡಲಾಗಿದೆ. ಖರೀದಿ ವೇಳೆ ಡಿಜಿಟಲ್ ಪೇಮೆಂಟ್ ಮಾಡಬೇಕು. ಕೇಂದ್ರ ಸರ್ಕಾರದ 49 ಲಕ್ಷ ನೌಕರರಿಗೆ ಎಲ್‌ಟಿಸಿ ವೋಚರ್ ನೀಡಲು 5,675 ಕೋಟಿ ರೂಪಾಯಿ ಹಣ ನೀಡಲಾಗುತ್ತದೆ. ಹಾಗೇ ಸಾರ್ವಜನಿಕ ಸ್ವಾಮ್ಯದ ಕಂಪನಿ ನೌಕರರಿಗೂ ಎಲ್‌ಟಿಸಿ ವೋಚರ್ ನೀಡಲು 1,900 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಸರ್ಕಾರಿ ನೌಕರರ ಜೊತೆಗೆ ಕೆಲ ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ 12 ಸಾವಿರ ಕೋಟಿ ಸಾಲ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇನ್ನೂ ಬಜೆಟ್ ನಲ್ಲಿ ಹೆಚ್ಚುವರಿಯಾಗಿ 25 ಸಾವಿರ ಕೋಟಿ ರೂಪಾಯಿಯನ್ನು ರಸ್ತೆ ನಿರ್ಮಾಣ, ಡಿಫೆನ್ಸ್ ಮೂಲಸೌಕರ್ಯ, ನೀರು ಸರಬರಾಜು, ನಗರಾಭಿವೃದ್ಧಿಗಾಗಿ ಖರ್ಚು ಮಾಡಲಾಗುತ್ತೆ. ಈ ಮೂಲಕ ನಿರ್ಮಲಾ ಸೀತಾರಾಮನ್ ಘೋಷಣೆಗಳಿಂದ ದೇಶದಲ್ಲಿ 1 ಲಕ್ಷ ಕೋಟಿ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರವಿದೆ.