AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಹೈದರಾಬಾದ್: ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಪ್ರೇಮದ ಹೆಸರಲ್ಲಿ ಪಾಗಲ್ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟ್​ನಲ್ಲಿ ನಡೆದಿದೆ. ಈ ಪಾಗಲ್ ಪ್ರೇಮಿಯಿಂದಾಗಿ ಯುವತಿ ಸಜೀವ ದಹನವಾಗಿದ್ದಾಳೆ. ಚಿನ್ನಾರಿ.. ನರ್ಸ್​​ ಆಸ್ಪತ್ರೆಯೊಂದರಲ್ಲಿ ನರ್ಸ್​​ ಆಗಿದ್ದ ಚಿನ್ನಾರಿ ಎಂಬ ಯುವತಿಗೆ‌ ಪ್ರೇಮದ ಹೆಸರಲ್ಲಿ ನಾಗಭೂಷಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ಸಹ ನೀಡಿದ್ದಳು. ಆದರೆ ಪೊಲೀಸರು ಈ ವಿಷಯನ್ನು ಗಂಭೀರವಾಗಿ ಪರಿಗಣಿಸದೆ ರಾಜಿ ಮಾಡಿಸಿದ್ದರು, ಯುವತಿ ಹಾಗೂ […]

ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಆಯೇಷಾ ಬಾನು
|

Updated on:Oct 14, 2020 | 9:38 AM

Share

ಹೈದರಾಬಾದ್: ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಪ್ರೇಮದ ಹೆಸರಲ್ಲಿ ಪಾಗಲ್ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟ್​ನಲ್ಲಿ ನಡೆದಿದೆ. ಈ ಪಾಗಲ್ ಪ್ರೇಮಿಯಿಂದಾಗಿ ಯುವತಿ ಸಜೀವ ದಹನವಾಗಿದ್ದಾಳೆ.

ಚಿನ್ನಾರಿ.. ನರ್ಸ್​​ ಆಸ್ಪತ್ರೆಯೊಂದರಲ್ಲಿ ನರ್ಸ್​​ ಆಗಿದ್ದ ಚಿನ್ನಾರಿ ಎಂಬ ಯುವತಿಗೆ‌ ಪ್ರೇಮದ ಹೆಸರಲ್ಲಿ ನಾಗಭೂಷಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ಸಹ ನೀಡಿದ್ದಳು. ಆದರೆ ಪೊಲೀಸರು ಈ ವಿಷಯನ್ನು ಗಂಭೀರವಾಗಿ ಪರಿಗಣಿಸದೆ ರಾಜಿ ಮಾಡಿಸಿದ್ದರು, ಯುವತಿ ಹಾಗೂ ಯುವಕನನ್ನು ಠಾಣೆಗೆ ಕರೆಯಿಸಿ ಪಂಚಾಯ್ತಿ ಮಾಡಿ ಯುವಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದಾದ ನಂತರ ಸಹ ಯುವಕ ನಾಗಭೂಷಣ್​ನ ಕಿರುಕುಳ ಕಡಿಮೆಯಾಗಿರಲಿಲ್ಲ.

ಯುವತಿ ಸಜೀವ ದಹನ; ಪಾಗಲ್ ಪ್ರೇಮಿ ಸಾವು ಅಕ್ಟೋಬರ್ 12ರ ರಾತ್ರಿ ಈ ಪಾಗಲ್ ಪ್ರೇಮಿ ಯುವತಿಯ ಜೊತೆ ಮಾತಾಡಬೇಕೆಂದು ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಯುವತಿ‌ ಆತನೊಂದಿಗೆ ಮಾತನಾಡಲು ಒಪ್ಪದಿದ್ದಾಗ, ಜೊತೆಯಲ್ಲೇ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಧಿಡೀರನೆ ಹೊತ್ತಿಕೊಂಡಿದೆ.

ಅಗ್ನಿ ಸ್ಪರ್ಶವಾಗಿ ಯುವತಿ ಸಜೀವ ದಹನವಾಗಿದ್ದಾಳೆ. ಹಾಗೂ ಯವಕನಿಗೂ ಸಹ ಸುಟ್ಟ ಗಾಯಗಳಾಗಿದ್ದು, ಗುಂಟೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪಾಗಲ್ ಪ್ರೇಮಿ ನಾಗಭೂಷಣ್ ಸಹ ಮೃತಪಟ್ಟಿದ್ದಾನೆ.

Published On - 10:58 am, Tue, 13 October 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್