ದೆಹಲಿ: ಮಹಿಳೆಯರು ಬಿಕಿನಿ ಹಾಕವುದು ಅವರ ಮೂಲಭೂತ ಹಕ್ಕು ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi) ಟ್ವೀಟ್ಗೆ (Tweet) ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಪ್ರಿಯಾಂಕಾ ಗಾಂಧಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ದೇಶದ ಕ್ಷಮೆ ಕೇಳಬೇಕು. ಮಹಿಳೆಯರ ಬಟ್ಟೆ(Dress) ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ತಾಯಿ ಹೇಳಿ ಕೇಳಿ ಇಟಲಿಯವರು. ಅವರು ಯಾರನ್ನು ಮದುವೆಯಾಗಿದ್ದಾರೆ ಎನ್ನುವುದು ವೈಯಕ್ತಿಕ. ಮಹಿಳೆಯರ ಬಟ್ಟೆಯಿಂದ ಕೆಲವರು ಉದ್ವೇಗಗೊಳ್ಳುತ್ತಾರೆ. ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ, ಪಿಎಫ್ಐ ಕೈವಾಡವಿದೆ. ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರನ್ನು ಬಳಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರು ಭಾರತ ಮಾತೆ ಮಕ್ಕಳು. ಹೀಗಾಗಿ ನಾವೆಲ್ಲಾ ಒಂದೇ ತಾಯಿಯ ಮಕ್ಕಳು. ಎಲ್ಲಾ ಅಲ್ಪ ಸಂಖ್ಯಾತರು ಕೆಟ್ಟವರಲ್ಲ. ರಾಜಕಾರಣದಲ್ಲಿ ನಾವು ಕೇಸರೀಕರಣ ಮಾಡುತ್ತೇವೆ. ಆದರ ಶಿಕ್ಷಣದಲ್ಲಿ ನಾವು ಕೇಸರೀಕರಣ ಮಾಡಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ರೇಣುಕಚಾರ್ಯ ಸ್ಪಷ್ಟನೆ: ನನ್ನ ಹೇಳಿಕೆಯಿಂದ ನೋವಾಗಿದ್ದರೇ ನಾನು ಕ್ಷಮೆ ಕೇಳುತ್ತೇನೆ
ನಾನು ಪ್ರಿಯಾಂಕಾ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದೆ. ಡ್ರೇಸ್ ಕೋಡ್ ಮೂಲಭೂತ ಹಕ್ಕು ಒಪ್ಪಿಕೊಳ್ಳುವ ವಿಚಾರ ಆದರೆ ಕರ್ನಟಕದಲ್ಲಿ ಸೃಷ್ಟಿಯಾಗಿರುವ ಸಂಘರ್ಷದಿಂದ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಇಂತಹ ಹೇಳಿಕೆ ನೀಡಬಾರದು. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರು ಮೈತುಂಬ ಬಟ್ಟೆ ಹಾಕಬೇಕು. ನಾನು ಮಹಿಳೆಯರನ್ನು ಅವಮಾನಿಸಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೇ ನಾನು ಕ್ಷಮೆ ಕೇಳುತ್ತೇನೆ ಎಂದು ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
ಅವರು ‘ಮುತ್ತು’ರಾಜ ಬಿಡಪ್ಪ.. ಆದರೆ ನಮ್ಮನೆ ಪಕ್ಕದ ರಾಜಕುಮಾರ್ ಅಲ್ಲ: ಡಿ.ಕೆ ಶಿವಕುಮಾರ್
ಮಹಿಳೆಯರ ಉಡುಪಿನ ಬಗ್ಗೆ ರೇಣುಕಾಚಾರ್ಯ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ರೇಣುಕಾಚಾರ್ಯ ಮುತ್ತುರಾಜ, ಅವರ ಬಗ್ಗೆ ಮಾತನಾಡಲ್ಲ. ರೇಣುಕಾಚಾರ್ಯ ಪಕ್ಕದ ಮನೆಯ ರಾಜಕುಮಾರ್ ಅಲ್ಲ. ರೇಣುಕಾಚಾರ್ಯ ಬೇರೆ ರಾಜಕುಮಾರ್ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ:
ಬಿಕಿನಿಯನ್ನಾದರೂ ಧರಿಸಲಿ, ಹಿಜಾಬನ್ನಾದರೂ ಹಾಕಲಿ ಅದು ಹೆಣ್ಣುಮಕ್ಕಳ ಹಕ್ಕು, ಕಿರುಕುಳ ನಿಲ್ಲಿಸಿ: ಪ್ರಿಯಾಂಕಾ ಗಾಂಧಿ ಟ್ವೀಟ್
Published On - 1:15 pm, Wed, 9 February 22