ಬಿಕಿನಿಯನ್ನಾದರೂ ಧರಿಸಲಿ, ಹಿಜಾಬನ್ನಾದರೂ ಹಾಕಲಿ ಅದು ಹೆಣ್ಣುಮಕ್ಕಳ ಹಕ್ಕು, ಕಿರುಕುಳ ನಿಲ್ಲಿಸಿ: ಪ್ರಿಯಾಂಕಾ ಗಾಂಧಿ ಟ್ವೀಟ್
ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು. ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ. ಇಲ್ಲವೇ ಹಿಜಾಬ್ ಆದರೂ ಹಾಕಲಿ ಅವರಿಗೆ ಬೇಕಾದ ಬಟ್ಟೆ ಧರಿಸುವುದು ಅವರ ಹಕ್ಕಾಗಿರುತ್ತದೆ. ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ದೆಹಲಿ: ಹಿಜಾಬ್ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಈ ಹಿಜಾಬ್ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು(Students) ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಉಡುಪಿ, ಕುಂದಾಪುರ, ಭದ್ರಾವತಿ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ. ಹೀಗಿರುವಾಗಲೇ ಹಿಜಾಬ್ ವಿವಾದ(Hijab controversy) ಹೈಕೋರ್ಟ್ ಮೆಟ್ಟಿಲೇರಿದೆ. ಹಿಜಾಬ್ ಧರಿಸಲು ಅನುಮತಿಗೆ ಕೋರಿ ಮುಸ್ಲಿಂ ಯುವತಿಯರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಿಜಾಬ್- ಕೇಸರಿ ವಿವಾದ ರಾಜಕೀಯದಲ್ಲೂ ಸಂಚಲನ ಮೂಡಿಸಿದ್ದು, ಟ್ವೀಟ್ ಮೂಲಕ ಅನೇಕರು ಪರ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಟ್ವೀಟ್ ಬಳಿಕ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಟ್ವೀಟ್ ಮಾಡಿದ್ದಾರೆ.
ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು. ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ. ಇಲ್ಲವೇ ಹಿಜಾಬ್ ಆದರೂ ಹಾಕಲಿ ಅವರಿಗೆ ಬೇಕಾದ ಬಟ್ಟೆ ಧರಿಸುವುದು ಅವರ ಹಕ್ಕಾಗಿರುತ್ತದೆ. ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ. ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
Whether it is a bikini, a ghoonghat, a pair of jeans or a hijab, it is a woman’s right to decide what she wants to wear.
This right is GUARANTEED by the Indian constitution. Stop harassing women. #ladkihoonladsaktihoon
— Priyanka Gandhi Vadra (@priyankagandhi) February 9, 2022
ಶಾಲೆಗಳಲ್ಲಿ ಬಿಕಿನಿ ಹಾಕಲು ಅವಕಾಶ ಮಾಡಿಕೊಡುತ್ತೀರಾ? ಪ್ರಿಯಾಂಕಾ ಗಾಂಧಿ ಟ್ವೀಟ್‌ಗೆ ಪ್ರಮೋದ್ ಮುತಾಲಿಕ್ ಕಿಡಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ನಾಚಿಕೆಯಾಗಬೇಕು. ಶಾಲೆಗಳಲ್ಲಿ ಬಿಕಿನಿ ಹಾಕಲು ಅವಕಾಶ ಮಾಡಿಕೊಡುತ್ತೀರಾ? ಇದೊಂದು ಹೀನವಾದ ಹೇಳಿಕೆ. ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದರಿಂದ ಸಮಾನತೆ ಇರುತ್ತದೆ. ನಿಮ್ಮ ಅಜ್ಜಿಯವರೇ ಸಮವಸ್ತ್ರ ಸಂಹಿತೆ ಜಾರಿಗೆ ತಂದವರು. ಇಂತಹ ಹೇಳಿಕೆ ಕೊಡುವ ಮುಂಚೆ ಯೋಚಿಸಬೇಕು ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಬಳಿಕ ಮಂಡ್ಯ ಯುವತಿಗೆ 5 ಲಕ್ಷ ಬಹುಮಾನ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರೋ 5 ಲಕ್ಷ ಬಹುಮಾನ ನೀಡುತ್ತಾರೆಂಬ ಮಾಹಿತಿ ಇದೆ. ಇಂತಹ ಬೆಳವಣಿಗೆ ಸರಿಯಲ್ಲ. ಜೈಶ್ರೀರಾಮ್ ಎನ್ನುವವರಿಗೆ ಬಹುಮಾನ ಕೊಡಲು ಹೋಗುತ್ತಾರೆ. ಇಸ್ಲಾಂ ಪ್ರವೃತ್ತಿ ಅತಿಕ್ರಮಣ, ಇಡೀ ಜಗತ್ತೇ ಇದನ್ನು ಹೇಳುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣದಲ್ಲಿ ಹಿಜಾಬ್ ಅಷ್ಟೊಂದು ಮುಖ್ಯವಾಗಿದ್ದರೆ, ರಾಹುಲ್ ಗಾಂಧಿಯೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ?!-ಬಿಜೆಪಿ ತಿರುಗೇಟು
Published On - 10:58 am, Wed, 9 February 22