Accident: ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದ ವಾಹನ, ಮಹಿಳಾ ಪೊಲೀಸ್ ಹಾಗೂ ಡ್ರೈವರ್ ಸಾವು

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪೊಲೀಸ್ ಹಾಗೂ ಡ್ರೈವರ್ ಮೃತಪಟ್ಟಿದ್ದಾರೆ. ಮಹಿಳಾ ಪೊಲೀಸ್ ಪೇದೆ ಹಾಗೂ ಹರ್ಯಾಣ ಪೊಲೀಸ್​ ಇಲಾಖೆಯ ಡ್ರೈವರ್​ ಸಾವನ್ನಪ್ಪಿದ್ದಾರೆ.

Accident: ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದ ವಾಹನ, ಮಹಿಳಾ ಪೊಲೀಸ್ ಹಾಗೂ ಡ್ರೈವರ್ ಸಾವು
ಅಪಘಾತ
Image Credit source: India Today

Updated on: May 25, 2023 | 1:59 PM

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪೊಲೀಸ್ ಹಾಗೂ ಡ್ರೈವರ್ ಮೃತಪಟ್ಟಿದ್ದಾರೆ. ಮಹಿಳಾ ಪೊಲೀಸ್ ಪೇದೆ ಹಾಗೂ ಹರ್ಯಾಣ ಪೊಲೀಸ್​ ಇಲಾಖೆಯ ಡ್ರೈವರ್​ ಸಾವನ್ನಪ್ಪಿದ್ದಾರೆ. ವೇಗವಾಗಿ ವಾಹನ ಚಲಾಯಿಸುತ್ತಿದ್ದು, ನಿಯಂತ್ರಣ ಸಿಗದೆ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದರು. ಗ್ರೇಟರ್ ನೋಯ್ಡಾದ ಥಾನಾ ದಂಕೌರ್ ಪ್ರದೇಶದ ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ.

ಮೃತರು ಛತ್ತೀಸ್‌ಗಢದಿಂದ ನಾಪತ್ತೆಯಾಗಿದ್ದ ಸೋನಿಪತ್ ಬಾಲಕಿಯನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ ತಂಡದ ಭಾಗವಾಗಿದ್ದರು. ಇಬ್ಬರೂ ತಂಡದೊಂದಿಗೆ ಛತ್ತೀಸ್‌ಗಢದಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ವಾಹನವನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಬಂದಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘರ್ಷಣೆಯ ಪರಿಣಾಮ ತೀವ್ರವಾಗಿದ್ದು, ಮಹಿಳಾ ಪೇದೆ ಮತ್ತು ಚಾಲಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಮತ್ತಷ್ಟು ಓದಿ: Delhi: ಸುರಂಗ ಮಾರ್ಗದಲ್ಲಿ ಅಪಘಾತ, 15 ನಿಮಿಷಗಳ ಕಾಲ ಹರಿಯಿತು ರಕ್ತದ ಕೋಡಿ, ಮಾಹಿತಿ ನೀಡಲು ನೆಟ್​ವರ್ಕ್​ ಇಲ್ಲದೆ ಜೀವ ಹೋಯ್ತು

ಅಪಘಾತದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಇತರ ಐವರು ಪ್ರಯಾಣಿಕರಿಗೆ ಗಾಯಗಳಾಗಿವೆ. ತಕ್ಷಣ ಅವರಿಗೆ ವೈದ್ಯಕೀಯ ನೆರವು ನೀಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪೊಲೀಸರು ಅಪಘಾತದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ