ಬಂಗಲೆ ಮಾರಿ 19 ವರ್ಷಗಳ ಸತತ ಹೋರಾಟದ ಬಳಿಕ ಮಹಾರಾಷ್ಟ್ರ ಸಚಿವರ ಸಂಬಂಧಿಯಿಂದ ಮಹಿಳೆಗೆ ಬಂತು ಹಣ
ಮೂವರು ಆಟಿಸಂ ಮಕ್ಕಳ ಪೋಷಣೆಯ ಹೊಣೆ ಆಗಲೇ ಮಹಿಳೆಗೆ 50 ವರ್ಷ ದಾಟಿತ್ತು, ಯಾವುದೋ ಕಾರಣಗಳಿಂದಾಗಿ ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದರು. ಆದರೆ ಹಣ ಮಾತ್ರ ಬಂದಿರಲಿಲ್ಲ. ಆ ಮಕ್ಕಳನ್ನು ಜತೆಗಿಟ್ಟುಕೊಂಡು ಸತತ 19ಕ್ಕೂ ಹೆಚ್ಚು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ್ದರು, ಅವರಿಗೆ ಈಗ 78 ವರ್ಷ ವಯಸ್ಸು.
ಮೂವರು ಆಟಿಸಂ ಮಕ್ಕಳ ಪೋಷಣೆಯ ಹೊಣೆ ಆಗಲೇ ಮಹಿಳೆಗೆ 50 ವರ್ಷ ದಾಟಿತ್ತು, ಯಾವುದೋ ಕಾರಣಗಳಿಂದಾಗಿ ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದರು. ಆದರೆ ಹಣ ಮಾತ್ರ ಬಂದಿರಲಿಲ್ಲ. ಆ ಮಕ್ಕಳನ್ನು ಜತೆಗಿಟ್ಟುಕೊಂಡು ಸತತ 19ಕ್ಕೂ ಹೆಚ್ಚು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ್ದರು, ಅವರಿಗೆ ಈಗ 78 ವರ್ಷ ವಯಸ್ಸು.
2021ರಲ್ಲಿ ಅವರ ಪತಿ ಸಾವನ್ನಪ್ಪಿದ್ದಾಗ ಒಮ್ಮೆ ದಿಕ್ಕೇ ತೋಚದ್ದಾಗಿತ್ತಂತೆ, ತಾನು ಹೋದ ಮೇಲೆ ಮಕ್ಕಳ ಗತಿ ಏನು ಎಂಬುದು ಅವರ ಸಂಕಟವಾಗಿತ್ತು. ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಮತ್ತು ಅವರ ಕುಟುಂಬದೊಂದಿಗೆ ಸುಮಾರು 19 ವರ್ಷಗಳ ಕಾನೂನು ಹೋರಾಟದ ನಂತರ, 78 ವರ್ಷದ ಡೋರೀನ್ ಫೆರ್ನಾಂಡಿಸ್ ಅವರು ತಮ್ಮ ಪೂರ್ವಜರ ಬಂಗಲೆಯ ಮಾರಾಟದಿಂದ ತನಗೆ ಬರಬೇಕಾದ ಹಣವನ್ನು ಅಂತಿಮವಾಗಿ ಪಡೆದಿದ್ದಾರೆ.
ಭುಜಬಲ್ ಅವರ ಸೋದರಳಿಯ ಸಮೀರ್ ಭುಜಬಲ್‌ಗೆ ಸೇರಿದ ಪರ್ವೇಶ್ ಕನ್‌ಸ್ಟ್ರಕ್ಷನ್‌ನಿಂದ ಫರ್ನಾಂಡಿಸ್ ಅವರು 8.41 ಕೋಟಿ ರೂ. ಪಡೆದಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕಿ ಅಂಜಲಿ ದಮಾನಿಯಾ ಅವರು ಫರ್ನಾಂಡಿಸ್ ಕುಟುಂಬದ ದುರವಸ್ಥೆಯನ್ನು ಸಾರ್ವಜನಿಕ ಗಮನಕ್ಕೆ ತಂದರು.
ಮತ್ತಷ್ಟು ಓದಿ: Bengaluru: ಆಟಿಸಂ ಮಕ್ಕಳ ವಿಶೇಷ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ
ಸುಮಾರು 20 ವರ್ಷಗಳ ನಂತರ ಭುಜಬಲ್ ಕುಟುಂಬವು ಅಂತಿಮವಾಗಿ ಡೋರೀನ್ ಫೆರ್ನಾಂಡಿಸ್ ಅವರ ಬಾಕಿ 8.41 ಕೋಟಿ ರೂ.ವನ್ನು ಪಾವತಿಸಿದೆ. ಡೋರೀನ್ ಈಗ ಸಂಪೂರ್ಣ ಹಣವನ್ನು ಪಡೆದಿದ್ದಾರೆ. 78 ವರ್ಷದ ತಾಯಿ ಇನ್ನು ಮುಂದೆ ಮಕ್ಕಳ ಬಗ್ಗೆ ಚಿಂತಿಸಬೇಕಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಧನ್ಯವಾದ ಅರ್ಪಿಸಿದರು.
ಡೋರೀನ್ ಫೆರ್ನಾಂಡಿಸ್ ಅವರ ಕುಟುಂಬವು 1994 ರಲ್ಲಿ ಪುನರಾಭಿವೃದ್ಧಿಗಾಗಿ ರಹೇಜಾಸ್‌ಗೆ ತಮ್ಮ ಬಂಗಲೆಗಳನ್ನು ನೀಡಿತ್ತು. ಡೆವಲಪರ್‌ಗಳು ಅದನ್ನು ಸಮೀರ್ ಭುಜಬಲ್ ಅವರ ಪರ್ವೇಶ್ ಕನ್‌ಸ್ಟ್ರಕ್ಷನ್‌ಗೆ ಮಾರಾಟ ಮಾಡಿದರು, ಅದು ಅಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಿತು. ಆದರೆ, ಕುಟುಂಬಕ್ಕೆ ಏನೂ ಕೊಟ್ಟಿರಲಿಲ್ಲ.
ಇದಕ್ಕೂ ಮೊದಲು, ಸಮೀರ್ ಭುಜಬಲ್ ಆರೋಪವನ್ನು ನಿರಾಕರಿಸಿದರು ಮತ್ತು ರಹೇಜಾ ಕಂಪನಿಯಿಂದ ಆಸ್ತಿಯನ್ನು ಖರೀದಿಸಿರುವುದಾಗಿ ಹೇಳಿದರು. ಅವರು ಮಾನವೀಯ ಆಧಾರದ ಮೇಲೆ ಅವರಿಗೆ 50 ಲಕ್ಷ ರೂ.ಗಳನ್ನು ನೀಡಿದರು, ಆದರೆ ಡೋರೀನ್ ಅದನ್ನು ನಿರಾಕರಿಸಿದರು. ಸತತ ಕಾನೂನು ಹೋರಾಟ ನಡೆಸಿ ಈಗ ಗೆಲುವು ಸಾಧಿಸಿದ್ದಾರೆ ಬರೋಬ್ಬರಿ 8 ಕೋಟಿ ರೂ. ಅವರ ಕೈ ಸೇರಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ