ತುಂಬು ಗರ್ಭಿಣಿ(Pregnant)ಯೊಬ್ಬರು ತ್ರಿಶೂರ್ನಿಂದ ಕೋಳಿಕ್ಕೋಡ್ಗೆ ಬಸ್‌ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ತೊಟ್ಟಿಲ್‌ಪಾಲಮ್‌ಗೆ ಪ್ರಯಾಣಿಸುತ್ತಿದ್ದಾಗ ನೋವು ಹೆಚ್ಚಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೆರಿಗೆ ಮಾಡಿಸಲಾಗಿದೆ. ಬಸ್ ಪೆರಮಂಗಲಂ ಮೂಲಕ ಹಾದು ಹೋಗುವಾಗ ಮಹಿಳೆಗೆ ಹೆರಿಗೆ ನೋವು ಜೋರಾಗಿತ್ತು.
ಬಸ್ ತ್ರಿಶೂರ್ ಜಿಲ್ಲೆಯ ಪೆರಮಂಗಲಂ ದಾಟುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ತ್ವರಿತವಾಗಿ ಯೋಚಿಸಿದ ಬಸ್ ಚಾಲಕ ತಕ್ಷಣ ಮಾರ್ಗವನ್ನು ಬದಲಿಸಿ ಅಮಲಾ ಆಸ್ಪತ್ರೆಯ ಕಡೆಗೆ ಹೊರಟರು. ಕೂಡಲೇ ಹೆರಿಗೆ ಬಗ್ಗೆ ಬಸ್ ಸಿಬ್ಬಂದಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.
ಅಷ್ಟೊತ್ತಿಗಾಗಲೇ ಮಹಿಳೆ ಹೆರಿಗೆಯ ಹಂತದಲ್ಲಿದ್ದಳು. ಆಸ್ಪತ್ರೆಯನ್ನು ತಲುಪಿದ ನಂತರ, ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಲಾಯಿತು, ವೈದ್ಯರು ಮತ್ತು ದಾದಿಯರು ತಕ್ಷಣವೇ ಬಸ್ ಏರಿದ್ದರು.
ಮತ್ತಷ್ಟು ಓದಿ: ಕೆಎಸ್‌ಆರ್‌ಟಿಸಿ ಬಸ್ನಲ್ಲಿಯೇ ಹೆರಿಗೆ, ಮಹಿಳಾ ಕಂಡಕ್ಟರ್ ಸಮಯ ಪ್ರಜ್ಞೆಗೆ ಶ್ಲಾಘನೆ
ಅಮಲಾ ಆಸ್ಪತ್ರೆಯ ಬಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಸಕಾಲಿಕ ನೆರವಿನಿಂದ ಅವರು ಬಸ್‌ನೊಳಗೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆಗೆ ಅಗತ್ಯ ವೈದ್ಯಕೀಯ ನೆರವು ಸಿಗುವಂತೆ ಮತ್ತು ಆ ಸಂದರ್ಭದಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಲು ಸಾಧ್ಯವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿ ಮತ್ತು ವೈದ್ಯಕೀಯ ತಂಡವು ಕೆಲಸ ಮಾಡುವುದುದನ್ನು ವಿಡಿಯೋ ತೋರಿಸಿದೆ.
ತಾಯಿ ಮತ್ತು ಅವರ ನವಜಾತ ಶಿಶುವನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ