ಮಕ್ಕಳ ಚಿಕಿತ್ಸೆಗಾಗಿ ತನ್ನ ಅಂಗಾಂಗಳನ್ನೇ ಮಾರಲು ಮುಂದಾದ ಮಹಾತಾಯಿ, ಮುಂದೇನಾಯ್ತು?

| Updated By: ಸಾಧು ಶ್ರೀನಾಥ್​

Updated on: Sep 22, 2020 | 1:45 PM

ತಿರುವನಂತಪುರಂ: ತಾಯಿಯ ಹಾರ್ಟು ಆ ಮೌಂಟ್​ ಎವರೆಸ್ಟು. ಆ ಶಿಖರದ ಬೀಟು ಅಹಾ ತಿಳಿದವರೆಷ್ಟು ಅನ್ನೋ ಸಿನಿಮಾ ಹಾಡಿನ ಸಾಲೊಂದನ್ನು ನಾವು ಕೇಳಿದ್ದೇವೆ. ಅಂತೆಯೇ, ತನ್ನ ಮಕ್ಕಳ ಒಳಿತಿಗಾಗಿ ತಾಯಂದಿರು ಯಾವ ತ್ಯಾಗ ಮಾಡಲೂ ಸಿದ್ಧ. ಹೀಗೆ, ತನ್ನ ಮಕ್ಕಳ ಚಿಕಿತ್ಸೆಗಾಗಿ ಮಹಿಳೆಯೊಬ್ಬಳು ತನ್ನ ಅಂಗಾಂಗಳನ್ನು ಮಾರಾಟ ಮಾಡೋಕೆ ಮುಂದಾಗಿದ್ದ ಮನಕಲುಕುವ ಘಟನೆ ಕೇರಳದ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಹೌದು, 44 ವರ್ಷದ ಶಾಂತಿ ಎಂಬ ಮಹಿಳೆ ಐದು ಮಕ್ಕಳ ತಾಯಿ. ಈಕೆಯ ಕೆಲ ಮಕ್ಕಳಿಗೆ ಅನಾರೋಗ್ಯ […]

ಮಕ್ಕಳ ಚಿಕಿತ್ಸೆಗಾಗಿ ತನ್ನ ಅಂಗಾಂಗಳನ್ನೇ ಮಾರಲು ಮುಂದಾದ ಮಹಾತಾಯಿ, ಮುಂದೇನಾಯ್ತು?
Follow us on

ತಿರುವನಂತಪುರಂ: ತಾಯಿಯ ಹಾರ್ಟು ಆ ಮೌಂಟ್​ ಎವರೆಸ್ಟು. ಆ ಶಿಖರದ ಬೀಟು ಅಹಾ ತಿಳಿದವರೆಷ್ಟು ಅನ್ನೋ ಸಿನಿಮಾ ಹಾಡಿನ ಸಾಲೊಂದನ್ನು ನಾವು ಕೇಳಿದ್ದೇವೆ. ಅಂತೆಯೇ, ತನ್ನ ಮಕ್ಕಳ ಒಳಿತಿಗಾಗಿ ತಾಯಂದಿರು ಯಾವ ತ್ಯಾಗ ಮಾಡಲೂ ಸಿದ್ಧ. ಹೀಗೆ, ತನ್ನ ಮಕ್ಕಳ ಚಿಕಿತ್ಸೆಗಾಗಿ ಮಹಿಳೆಯೊಬ್ಬಳು ತನ್ನ ಅಂಗಾಂಗಳನ್ನು ಮಾರಾಟ ಮಾಡೋಕೆ ಮುಂದಾಗಿದ್ದ ಮನಕಲುಕುವ ಘಟನೆ ಕೇರಳದ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, 44 ವರ್ಷದ ಶಾಂತಿ ಎಂಬ ಮಹಿಳೆ ಐದು ಮಕ್ಕಳ ತಾಯಿ. ಈಕೆಯ ಕೆಲ ಮಕ್ಕಳಿಗೆ ಅನಾರೋಗ್ಯ ಎದುರಾದ ಹಿನ್ನೆಲಯಲ್ಲಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಮಕ್ಕಳ ಚಿಕಿತ್ಸಾ ವೆಚ್ಚಕ್ಕಾಗಿ ಶಾಂತಿ ಸುಮಾರು 20 ಲಕ್ಷ ಸಾಲ ಮಾಡಿದ್ದಾರಂತೆ. ಹಾಗಾಗಿ, ಸಾಲ ತೀರಿಸಲು ಹಾಗೂ ಮಕ್ಕಳ ಚಿಕಿತ್ಸೆಗೆಂದು ಮತ್ತುಷ್ಟು ಹಣ ಕೂಡಿಸಲು ಶಾಂತಿ ಈ ನಿರ್ಧಾರ ಕೈಗೊಂಡಿದ್ದಾರೆ.

ನೆರವಿನ ಹಸ್ತ ಚಾಚಿದ ಆರೋಗ್ಯ ಸಚಿವೆ KK ಶೈಲಜಾ
ಈ ನಿಟ್ಟಿನಲ್ಲಿ ಶಾಂತಿ ತಮ್ಮ ಬಾಡಿಗೆ ಮನೆಯನ್ನು ತೊರೆದು ತನ್ನ ಐವರು ಮಕ್ಕಳೊಟ್ಟಿಗೆ ಬೀದಿ ಬದಿ ಟೆಂಟ್​ ಹಾಕಿಕೊಂಡು ವಾಸಿಸುತ್ತಿದ್ದಾರೆ. ಇನ್ನು ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಕೇರಳ ಆರೋಗ್ಯ ಸಚಿವೆ KK ಶೈಲಜಾ ಶಾಂತಿಯ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಹಾಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.