ಮಗನ ಬರ್ತ್​ ಡೇ ಪಾರ್ಟಿಯಲ್ಲಿ ಮಹಿಳೆಗೆ ಹೃದಯಾಘಾತ, ಸಾವು

|

Updated on: Sep 17, 2024 | 2:54 PM

ಮಹಿಳೆಯೊಬ್ಬರು ಮಗನ ಹುಟ್ಟುಹಬ್ಬದ ದಿನವೇ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ವಿಡಿಯೋವೊಂದು ವೈರಲ್ ಆಗಿದ್ದು, ಅಲ್ಲಿ ಇದ್ದಕ್ಕಿದ್ದಂತೆ ಮಹಿಳೆ ಕುಸಿದು ಬೀಳುವುದನ್ನು ಕಾಣಬಹುದು.

ಮಗನ ಬರ್ತ್​ ಡೇ ಪಾರ್ಟಿಯಲ್ಲಿ ಮಹಿಳೆಗೆ ಹೃದಯಾಘಾತ, ಸಾವು
ಮಹಿಳೆ ಸಾವು
Follow us on

ಮಕ್ಕಳ ಹುಟ್ಟುಹಬ್ಬವೆಂದರೆ ಸಂಭ್ರಮ, ತಾಯಿಯಾದವಳು ಬೆಳಗ್ಗೆಯಿಂದಲೂ ಊಟ, ತಿಂಡಿ ಬಿಟ್ಟು ಮಗುವಿನ ಅಲಂಕಾರ, ಮನೆಯ ಡೆಕೋರೇಷನ್​ ಕಡೆಯೇ ಹೆಚ್ಚು ಗಮನ ಹರಿಸುವುದು ಸಾಮಾನ್ಯ. ಹಾಗೆಯೇ ಇಲ್ಲೊಬ್ಬ ತಾಯಿ ಮಗನ ಬರ್ತ್ ಡೇ ದಿನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಮಗನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯು ಪಾರ್ಟಿಯಲ್ಲಿ ಹೃದಯಾಘಾತದಿಂದ ಮಹಿಳೆ ಕೆಲಗೆ ಬೀಳುತ್ತಿರುವುದನ್ನು ಕಾಣಬಹುದು.

ವಲ್ಸಾದ್‌ನ ರಾಯಲ್ ಶೆಲ್ಟರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬ ಸದಸ್ಯರು, ಸ್ನೇಹಿತರೆಲ್ಲಾ ಬಂದಿದ್ದರು. ವೀಡಿಯೊದಲ್ಲಿ ಕುಟುಂಬ ಸದಸ್ಯರು ನೃತ್ಯ ಮಾಡುವುದನ್ನು ಕಾಣಬಹುದು, ಆದರೆ ಮಹಿಳೆ, ಆಕೆಯ ಪತಿ ಮತ್ತು ಅವರ ಮಗು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿ ಆಕೆ ಮಗುವನ್ನು ಪತಿಯ ಕೈಗೆ ಕೊಡುತ್ತಿರುವುದನ್ನು ಕಾಣಬಹುದು, ಆಕೆ ನಂತರ ತಲೆ ಹಿಡಿದುಕೊಂಡು ಕೆಳಗೆ ಕುಸಿದು ಬೀಳುತ್ತಾಳೆ. ಮಹಿಳೆಯು ಕುಸಿದು ಬೀಳುವ ಮೊದಲು ಗಂಡನ ಭುಜದ ಕಡೆಗೆ ವಾಲುತ್ತಿರುವುದನ್ನು ಕಾಣಬಹುದು.

ಮತ್ತಷ್ಟು ಓದಿ: ಟಿವಿ ನಟ ವಿಕಾಸ್ ಸೇಥಿಗೆ ಹೃದಯಾಘಾತ: ಅಜೀರ್ಣತೆ ದೇಹ ನೀಡುವ ಎಚ್ಚರಿಕೆಯಾಗಿರಬಹುದೇ?

ಕುಟುಂಬ ಸದಸ್ಯರು ಅವಳ ಸಹಾಯಕ್ಕೆ ಧಾವಿಸಿದರು, ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಆಗಲೇ ಮೃತಪಟ್ಟಿದ್ದಳು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:47 pm, Tue, 17 September 24