ಕತ್ತರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಮಹಿಳೆ

|

Updated on: Dec 19, 2024 | 9:30 AM

ಮಹಿಳೆಯೊಬ್ಬಳು ತನ್ನ ಕತ್ತರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು, ಜಲೋರ್​ನ ಸೈಲಾ ಮೂಲದ ಕುಕಿ ದೇವಿ ಎಂಬಾಕೆ ಪಾಲಿಯಲ್ಲಿರುವ ಆಸ್ಪತ್ರೆಗೆ ಓಡಿ ಬಂದಿದ್ದಾರೆ, ಜತೆಗೆ ಕತ್ತರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಬಂದಿದ್ದರು.

ಕತ್ತರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಮಹಿಳೆ
Nose
Follow us on

ಮಹಿಳೆಯೊಬ್ಬಳು ತನ್ನ ಕತ್ತರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು, ಜಲೋರ್​ನ ಸೈಲಾ ಮೂಲದ ಕುಕಿ ದೇವಿ ಎಂಬಾಕೆ ಪಾಲಿಯಲ್ಲಿರುವ ಆಸ್ಪತ್ರೆಗೆ ಓಡಿ ಬಂದಿದ್ದಾರೆ, ಜತೆಗೆ ಕತ್ತರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಬಂದಿದ್ದರು.

ಕುಕಿ ದೇವಿ ಕೆಲವು ದಿನಗಳಿಂದ ಸೈಲಾ ಗ್ರಾಮದ ಮೋಕ್ನಿ ಎಂಬಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು, ಆಕೆಯ ಸಂಬಂಧಿಗಳ ನಡುವೆ ಜಮೀನಿನ ವಿಷಯದಲ್ಲಿ ಮನಸ್ತಾಪವಿತ್ತು. ಮಂಗಳವಾರ ಓಂ ಪ್ರಕಾಶ್ ಎಂಬುವವರು ಹಾಗೂ ಇತರರು ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ, ಚಾಕುವಿನಿಂದ ಕುಕಿ ಮೂಗನ್ನು ಕತ್ತರಿಸಿದ್ದಾರೆ. ಆಕೆ ಕೂಡಲೇ ತುಂಡರಿಸಿದ ಮೂಗನ್ನು ಬ್ಯಾಗ್​ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದಳು.

ಕುಕಿ ದೇವಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರ್ ಆಸ್ಪತ್ರೆಯ ಡಾ.ಜುಗಲ್ ಮಹೇಶ್ವರಿ ಅವರ ಮೂಗು ತೀವ್ರವಾಗಿ ಕತ್ತರಿಸಲ್ಪಟ್ಟಿದೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರ ಅದನ್ನು ಮರು ಜೋಡಿಸಬಹುದು ಎಂದು ಹೇಳಿದರು.

ಮತ್ತಷ್ಟು ಓದಿ: ಕೊಡಗು: ಒಡಹುಟ್ಟಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ, ಆಗಿದ್ದೇನು?

ಮಾಹಿತಿ ಪ್ರಕಾರ ಸಂತ್ರಸ್ತೆ ಕುಕಿ ದೇವಿ ತನ್ನ ಸಹೋದರ ರಮೇಶ್ ಜತೆ ಜಮೀನು ವಿವಾದ ಬಗೆಹರಿಸಲು ಮೊಕನಿ ಗ್ರಾಮಕ್ಕೆ ತೆರಳಿದ್ದರು. ಘಟನೆ ನಡೆದ ತಕ್ಷಣ ಸೈಲಾ ಪೊಲೀಸರು ಕ್ರಮ ಕೈಗೊಂಡು ಪ್ರಮುಖ ಆರೋಪಿ ಓಂಪ್ರಕಾಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಓಂಪ್ರಕಾಶ್ ಅವರ ನಿವೇಶನವನ್ನು ಆಕ್ರಮಿಸಿಕೊಂಡಿದ್ದು, ಈ ಕಾರಣಕ್ಕಾಗಿ ಬಹಳ ದಿನಗಳಿಂದ ಜಗಳ ನಡೆಯುತ್ತಿತ್ತು ಎಂದು ಸಂತ್ರಸ್ತೆಯ ಸಹೋದರ ರಮೇಶ್ ಹೇಳಿದ್ದಾರೆ. ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಕುಕಿ ದೇವಿ ಓಂಪ್ರಕಾಶ್ ಅವರೊಂದಿಗೆ ಮಾತನಾಡಲು ಹೋಗಿದ್ದರು, ಆದರೆ ಸಂಭಾಷಣೆಯ ಸಮಯದಲ್ಲಿ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:25 am, Thu, 19 December 24