ಭಾರತದ ಜಿಡಿಪಿ ಭಾರೀ ಕುಸಿತ, ಆತಂಕ ಮೂಡಿಸಿದ ವಿಶ್ವ ಬ್ಯಾಂಕ್ ವರದಿ

|

Updated on: Oct 16, 2019 | 12:27 PM

ವಾಷಿಂಗ್ಟನ್​: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದಲೂ ಭಾರತದ ಜಿಡಿಪಿ ದರ ಸತತವಾಗಿ ಇಳಿಕೆಯಾಗುತ್ತಿರುವ ವಿಚಾರ ದೇಶದಾದ್ಯಂತ ಭಾರಿ ಚರ್ಚೆಯಾಗ್ತಿದೆ. ಇದರ ನಡುವೆಯೇ ವಿಶ್ವಬ್ಯಾಂಕ್​ ಭಾರತದ ಅಭಿವೃದ್ಧಿ ಸೂಚ್ಯಂಕವನ್ನ ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇಕಡಾ 6ಕ್ಕೆ ಕುಸಿತ ಕಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆಗಿನ ಸಭೆ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಈ ವರದಿಯನ್ನ ಬಿಡುಗಡೆ ಮಾಡಿದೆ. ಅದರಂತೆ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ. 6ಕ್ಕೆ ಕುಸಿಯಲಿದೆ […]

ಭಾರತದ ಜಿಡಿಪಿ ಭಾರೀ ಕುಸಿತ, ಆತಂಕ ಮೂಡಿಸಿದ ವಿಶ್ವ ಬ್ಯಾಂಕ್ ವರದಿ
Follow us on

ವಾಷಿಂಗ್ಟನ್​: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದಲೂ ಭಾರತದ ಜಿಡಿಪಿ ದರ ಸತತವಾಗಿ ಇಳಿಕೆಯಾಗುತ್ತಿರುವ ವಿಚಾರ ದೇಶದಾದ್ಯಂತ ಭಾರಿ ಚರ್ಚೆಯಾಗ್ತಿದೆ. ಇದರ ನಡುವೆಯೇ ವಿಶ್ವಬ್ಯಾಂಕ್​ ಭಾರತದ ಅಭಿವೃದ್ಧಿ ಸೂಚ್ಯಂಕವನ್ನ ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇಕಡಾ 6ಕ್ಕೆ ಕುಸಿತ ಕಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆಗಿನ ಸಭೆ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಈ ವರದಿಯನ್ನ ಬಿಡುಗಡೆ ಮಾಡಿದೆ. ಅದರಂತೆ
ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ. 6ಕ್ಕೆ ಕುಸಿಯಲಿದೆ
2017-18ನೇ ಹಣಕಾಸು ವರ್ಷದಲ್ಲಿ ಈ ದರ ಶೇ. 7.2ರಷ್ಟಿತ್ತು
2018-19ರಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 6.8ರಷ್ಟು ದಾಖಲು
ಆದರೆ ಈ ದರವು 2019-20ರಲ್ಲಿ ಶೇಕಡಾ 6ಕ್ಕೆ ಕುಸಿಯಲಿದೆ ಆದ್ರೂ ಭಾರತದ ಅಭಿವೃದ್ಧಿ ದರ ನಿಧಾನವಾಗಿ ಚೇತರಿಕೆ ಕಾಣಲಿದೆ. 2021ರಲ್ಲಿ 6.9 ಹಾಗೂ 2022ಕ್ಕೆ ಅಭಿವೃದ್ಧಿ ದರ 7.2ಕ್ಕೆ ಏರಿಕೆ ಎಂದು ವಿಶ್ವಬ್ಯಾಂಕ್​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸತತವಾಗಿ ಕುಸಿಯುತ್ತಿರೋ ಜಿಡಿಪಿಯಿಂದ ಅಟೋಮೊಬೈಲ್ ಹಾಗೂ ಸೇವಾ ಕ್ಷೇತ್ರಗಳ ಪ್ರಗತಿ ಕುಂಟುತ್ತಾ ಸಾಗಿದೆ. ಇಂಥಾ ಆರ್ಥಿಕತೆಯನ್ನ ಮೇಲೆತ್ತಲು ಕೇಂದ್ರ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಸದ್ಯ ದೇಶದಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದರೂ ಕ್ರಮೇಣ ಚೇತರಿಕೆಯ ಹಾದಿ ಕಂಡುಕೊಳ್ಳಲಿದೆ. ಇದು ದೀರ್ಘಾವಧಿಯಲ್ಲಿ ಫಲ ನೀಡಲಿದೆ ಅಂತ ವರದಿ ಹೇಳಿದೆ. ಸದ್ಯದ ಆರ್ಥಿಕ ಇಕ್ಕಟ್ಟಿಗೆ ಜಿಎಸ್​ಟಿ ಹಾಗೂ ನೋಟು ಅಮಾನ್ಯಿಕರಣ ಕಾರಣವಾಗಿದೆ. ಇವೆರಡು ಒಟ್ಟೊಟ್ಟಿಗೆ ಜಾರಿಯಾದ ಹಿನ್ನೆಲೆ ಗ್ರಾಮೀಣ ಆರ್ಥಿಕತೆಗೆ ಭಾರಿ ಪ್ರಮಾಣದ ಪೆಟ್ಟು ಬಿದ್ದಿದೆ ಎಂಬ ಅಂಶವನ್ನ ವಿಶ್ವ ಬ್ಯಾಂಕ್ ತೆರೆದಿಟ್ಟಿದೆ.

 

Published On - 8:16 am, Wed, 16 October 19