ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಡಬಲ್, ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದ ವಿಶ್ವ ಸಂಸ್ಥೆ

ದೆಹಲಿ: ದೇಶದಲ್ಲಿ ‘ಕೊರೊನಾ’ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಲಾಕ್​ಡೌನ್​ನಿಂದ ಒಂದಷ್ಟು ರಿಲೀಫ್ ಸಿಗುತ್ತಿದ್ದಂತೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯರು ಬೆಚ್ಚಿಬೀಳುವಂಥ ಸುದ್ದಿ ಕೊಟ್ಟಿದ್ದು, ಭಾರತದಲ್ಲಿ ಕೊರೊನಾ ಸೋಂಕು ಡೆಡ್ಲಿ ಸ್ವರೂಪ ತಾಳುತ್ತಿದೆಯಂತೆ. ವಯಸ್ಸಿನ ಹಂಗಿಲ್ಲ, ಹಣದ ಅಮಲೂ ಇಲ್ಲ. ಕೊರೊನಾ ಕಂಡ ಕಂಡವರಿಗೆ ಅಟ್ಯಾಕ್ ಆಗುತ್ತೆ, ಸ್ವಲ್ಪ ಕೇರ್​ಲೆಸ್ ಆದ್ರೆ ಜೀವವೇ ಹೋಗಿಬಿಡುತ್ತೆ. ಅಂದಹಾಗೆ ನಾನಾ ರೂಪದಲ್ಲಿ ವಕ್ಕರಿಸುತ್ತಿರುವ ಕೊರೊನಾ ಸೋಂಕಿನ ಅಬ್ಬರ, ಆರ್ಭಟ ಹೆಚ್ಚಾಗುತ್ತಲೇ ಸಾಗಿದೆ. ಭಾರತದಲ್ಲಿ […]

Follow us
ಆಯೇಷಾ ಬಾನು
|

Updated on:Jun 07, 2020 | 8:06 AM

ದೆಹಲಿ: ದೇಶದಲ್ಲಿ ‘ಕೊರೊನಾ’ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಲಾಕ್​ಡೌನ್​ನಿಂದ ಒಂದಷ್ಟು ರಿಲೀಫ್ ಸಿಗುತ್ತಿದ್ದಂತೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯರು ಬೆಚ್ಚಿಬೀಳುವಂಥ ಸುದ್ದಿ ಕೊಟ್ಟಿದ್ದು, ಭಾರತದಲ್ಲಿ ಕೊರೊನಾ ಸೋಂಕು ಡೆಡ್ಲಿ ಸ್ವರೂಪ ತಾಳುತ್ತಿದೆಯಂತೆ.

ವಯಸ್ಸಿನ ಹಂಗಿಲ್ಲ, ಹಣದ ಅಮಲೂ ಇಲ್ಲ. ಕೊರೊನಾ ಕಂಡ ಕಂಡವರಿಗೆ ಅಟ್ಯಾಕ್ ಆಗುತ್ತೆ, ಸ್ವಲ್ಪ ಕೇರ್​ಲೆಸ್ ಆದ್ರೆ ಜೀವವೇ ಹೋಗಿಬಿಡುತ್ತೆ. ಅಂದಹಾಗೆ ನಾನಾ ರೂಪದಲ್ಲಿ ವಕ್ಕರಿಸುತ್ತಿರುವ ಕೊರೊನಾ ಸೋಂಕಿನ ಅಬ್ಬರ, ಆರ್ಭಟ ಹೆಚ್ಚಾಗುತ್ತಲೇ ಸಾಗಿದೆ. ಭಾರತದಲ್ಲಿ ‘ಕೊರೊನಾ’ ನಿಯಂತ್ರಣದಲ್ಲಿದೆ ಅನ್ನುವಾಗಲೇ ಸೋಂಕು ಉಗ್ರರೂಪ ತಾಳಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಭಾರತೀಯರು ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದ್ದು, ಕೊರೊನಾ ಸೋಂಕಿನಿಂದ ಭಾರತೀಯರ ಭವಿಷ್ಯ ಮತ್ತಷ್ಟು ಕಠೋರವಾಗಿರಲಿದೆ.

ಲಾಕ್​ಡೌನ್ ಬಳಿಕ ಕೊರೊನಾ ಆಡಿದ್ದೇ ಆಟ! ಹೌದು, ದೇಶದಲ್ಲಿ ಕೊರೊನಾ ಸೋಂಕು ರಾಕೆಟ್ ವೇಗದಲ್ಲಿ ಹಬ್ಬುತ್ತಾ ಇದೆ‌. ಲಾಕ್​ಡೌನ್ ಮುಗಿದು ಒಂದಷ್ಟು ‘ಫ್ರೀಡಂ’ ಸಿಗುತ್ತಿದ್ದಂತೆ ಸೋಂಕು ಕೂಡ ಅಬ್ಬರಿಸುತ್ತಿದೆ. ಅದರಲ್ಲೂ ಮುಂಬೈ, ಅಹಮದಾಬಾದ್, ಚೆನ್ನೈ ಹಾಗೂ ದೆಹಲಿ ನಗರಗಳಲ್ಲಿ ಅಕ್ಷರಶಃ ತನ್ನ ವಿರಾಟ ರೂಪ ಪ್ರದರ್ಶಿಸುತ್ತಿದೆ.

ದೇಶದಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವುದು ಈ ನಗರಗಳಲ್ಲೇ ಅನ್ನೋದು ಆತಂಕಕಾರಿ ವಿಚಾರವೇ ಸರಿ. ಇನ್ನು ಹೀಗೆ ದೇಶದಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗಿತ್ತಿರುವ ಸೋಂಕಿತರ ಸಂಖ್ಯೆ ಭಯ ಹುಟ್ಟಿಸುತ್ತಿದೆ. ನಿತ್ಯ ಭಾರತದಲ್ಲಿ 8ರಿಂದ10 ಸಾವಿರ ಕೇಸ್​ಗಳು ಪತ್ತೆಯಾಗ್ತಿದ್ದು, ನಿನ್ನೆ ಹೆಲ್ತ್ ಬುಲೆಟಿನ್ ಬಳಿಕ ಭಾರತ ಮತ್ತೊಂದು ಕೆಟ್ಟ ದಾಖಲೆ ಬರೆದಿದೆ. ಭಾರತ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ 6ನೇ ಸ್ಥಾನಕ್ಕೆ ಏರಿದೆ. ಯುನೈಟೆಡ್ ಕಿಂಗ್​ಡಮ್ ನಂತರದ ಸ್ಥಾನದಲ್ಲಿ ಭಾರತ ಇದೆ.

ಭಾರತದಲ್ಲಿ ಡೆಡ್ಲಿ ಕೊರೊನಾ ಸೋಂಕಿತರ ಸಂಖ್ಯೆ ಡಬಲ್! ಭಾರತ ನೋಡನೋಡುತ್ತಿದ್ದಂತೆ ಇಟಲಿ, ಫ್ರಾನ್ಸ್, ಪೆರು, ಜರ್ಮನಿ, ಟರ್ಕಿ, ಇರಾನ್, ಮೆಕ್ಸಿಕೋ ದೇಶಗಳನ್ನೆಲ್ಲಾ ಹಿಂದಿಕ್ಕಿ ಮುಂದೆ ಸಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ ಇನ್ನೂ ಕೊರೊನಾ ಸ್ಫೋಟವಾಗಿಲ್ಲ. ಆದರೆ ಸದ್ಯ ಲಾಕ್​ಡೌನ್​ನಿಂದ ರಿಯಾಯಿತಿ ಸಿಕ್ಕಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಇನ್ನು ಮತ್ತೊಂದ್ಕೆಡೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು, 3 ವಾರಗಳಿಗೆ ಕೊರೊನಾ ಪ್ರಕರಣಗಳು ಡಬಲ್ ಆಗುತ್ತಿವೆಯಂತೆ. ದಕ್ಷಿಣಏಷ್ಯಾ ದೇಶಗಳಾದ ಭಾರತ, ಬಾಂಗ್ಲಾದೇಶ ಮತ್ತು ಪಾಕ್‌ನಲ್ಲಿ ಸೋಂಕು ಸ್ಫೋಟಗೊಂಡಿಲ್ಲ ಅಂತಾ ವಿಶ್ವಆರೋಗ್ಯ ಸಂಸ್ಥೆ ಹೇಳಿದ್ದರೂ, ಲಾಕ್​ಡೌನ್​ನಿಂದ ಸಿಕ್ಕಿರುವ ವಿನಾಯಿತಿ ಅಪಾಯಕ್ಕೆ ಆಹ್ವಾನ ನೀಡಿದಂತಿದೆ ಅಂತಾ ಎಚ್ಚರಿಸಿದೆ.

ಅದೆಲ್ಲಿಂದ ಬಂದು ವಕ್ಕರಿಸಿತೋ ಮಹಾಮಾರಿ ಕೊರೊನಾ, ಭಾರತವನ್ನ ಬಿಟ್ಟುಬಿಡದಂತೆ ಕಾಡುತ್ತಿದೆ. ಪ್ರಪಂಚದ ಬಲಾಢ್ಯ ರಾಷ್ಟ್ರಗಳೇ ‘ಕೊರೊನಾ’ ಕಾಟಕ್ಕೆ ಬೆಚ್ಚಿಬಿದ್ದಿರುವಾಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲೂ ಪರಿಸ್ಥಿತಿ ಹೀಗೆ ಕೈಮೀರುತ್ತಿದೆ. ದಿನದಿಂದ ದಿನಕ್ಕೆ ಸೋಂಕಿನ ಸ್ಫೋಟವಾಗ್ತಿದ್ದು ಲಾಕ್​ಡೌನ್ ವಿನಾಯಿತಿ ‘ಕೊರೊನಾ’ಗೆ ವರವಾದಂತಿದೆ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದು, ಜನರು ಕೂಡ ಕೊರೊನಾ ಸೋಂಕಿನಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ತಪ್ಪದೆ ಪಾಲಿಸಬೇಕಿದೆ.

Published On - 8:05 am, Sun, 7 June 20