ಶರವೇಗದಲ್ಲಿ ಹಬ್ಬುತ್ತಿದೆ ಕೊರೊನಾ, ವಿಶ್ವದಲ್ಲಿ ಭಾರತಕ್ಕೆ 6 ನೇ ಸ್ಥಾನ!
ಬೆಂಗಳೂರು: ವರ್ಲ್ಡ್ ಕೊರೊನಾ ಲಿಸ್ಟ್ನಲ್ಲಿ, ಒಲಂಪಿಕ್ ಮೆಡಲ್ ಟೇಬಲ್ನಂತೆ ಪೈಪೋಟಿ ನಡೀತಿದೆ. ಅಲ್ಲೆಲ್ಲೋ ಕೆಳಗಿದ್ದ ದೇಶ ಬೆಳಗಾಗುವಷ್ಟರಲ್ಲಿ ಮೇಲೆ ಬಂದುಬಿಡುತ್ತೆ. ಅಷ್ಟೇ ಅಲ್ಲ ಸಾವಿರಾರು ಕೊರೊನಾ ಸೋಂಕಿತರು ಅಲ್ಲಿ ಪತ್ತೆಯಾಗ್ತಿದ್ದಾರೆ. ಇದು ಭಾರತಕ್ಕೂ ಅನ್ವಯ ಆಗ್ತಿದೆ. ಮುಠ್ಠಾಳ ಚೀನಾದಿಂದ ಹರಡಿರುವ ‘ಕೊರೊನಾ’ಗೆ ಭಾರತ ಬಲಿಪಶು ಆಗುತ್ತಿದೆ. ನೋಡ ನೋಡ್ತಿದ್ದಂತೆ ಕೊರೊನಾ ಟೇಬಲ್ನಲ್ಲಿ ಭಾರತ 6ನೇ ಸ್ಥಾನಕ್ಕೆ ಬಂದು ನಿಂತಿದೆ. ಲಾಕ್ಡೌನ್ಗೂ ಬಗ್ಗಲಿಲ್ಲ ಸೀಲ್ಡೌನ್ಗಂತೂ ಜಗ್ಗಲೇ ಇಲ್ಲ. ‘ಕೊರೊನಾ’ ಅನ್ನೋ ಡೆಡ್ಲಿ ವೈರಸ್ ನೋಡ ನೋಡ್ತಿದ್ದಂತೆ ಇಡೀ ದೇಶಕ್ಕೆ […]
ಬೆಂಗಳೂರು: ವರ್ಲ್ಡ್ ಕೊರೊನಾ ಲಿಸ್ಟ್ನಲ್ಲಿ, ಒಲಂಪಿಕ್ ಮೆಡಲ್ ಟೇಬಲ್ನಂತೆ ಪೈಪೋಟಿ ನಡೀತಿದೆ. ಅಲ್ಲೆಲ್ಲೋ ಕೆಳಗಿದ್ದ ದೇಶ ಬೆಳಗಾಗುವಷ್ಟರಲ್ಲಿ ಮೇಲೆ ಬಂದುಬಿಡುತ್ತೆ. ಅಷ್ಟೇ ಅಲ್ಲ ಸಾವಿರಾರು ಕೊರೊನಾ ಸೋಂಕಿತರು ಅಲ್ಲಿ ಪತ್ತೆಯಾಗ್ತಿದ್ದಾರೆ. ಇದು ಭಾರತಕ್ಕೂ ಅನ್ವಯ ಆಗ್ತಿದೆ. ಮುಠ್ಠಾಳ ಚೀನಾದಿಂದ ಹರಡಿರುವ ‘ಕೊರೊನಾ’ಗೆ ಭಾರತ ಬಲಿಪಶು ಆಗುತ್ತಿದೆ. ನೋಡ ನೋಡ್ತಿದ್ದಂತೆ ಕೊರೊನಾ ಟೇಬಲ್ನಲ್ಲಿ ಭಾರತ 6ನೇ ಸ್ಥಾನಕ್ಕೆ ಬಂದು ನಿಂತಿದೆ.
ಲಾಕ್ಡೌನ್ಗೂ ಬಗ್ಗಲಿಲ್ಲ ಸೀಲ್ಡೌನ್ಗಂತೂ ಜಗ್ಗಲೇ ಇಲ್ಲ. ‘ಕೊರೊನಾ’ ಅನ್ನೋ ಡೆಡ್ಲಿ ವೈರಸ್ ನೋಡ ನೋಡ್ತಿದ್ದಂತೆ ಇಡೀ ದೇಶಕ್ಕೆ ಹಬ್ಬಿದೆ. ಒಂದು, ಎರಡೂ ಅಂತಾ ಸಿಂಗಲ್ ಡಿಜಿಟ್ನಲ್ಲಿ ಏರಿಕೆ ಆಗುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ ಸಾವಿರದ ಲೆಕ್ಕದಲ್ಲಿ ಏರುತ್ತಿದೆ.ಕೊರೊನಾ ಸೋಂಕಿತರು ಇರುವ ಆಧಾರದಲ್ಲಿ ಭಾರತಕ್ಕೆ 6ನೇ ಸ್ಥಾನ ಸಿಕ್ಕಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಮಿಳುನಾಡು, ದೆಹಲಿಯಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ..! ಹೌದು ಭಾರತದಲ್ಲಿ ಕೊರೊನಾ ಸೋಂಕು ತನ್ನ ಅಬ್ಬರ, ಆರ್ಭಟ ಹಾಗೂ ಅಟ್ಟಹಾಸವನ್ನು ಮುಂದುವರಿಸಿದೆ. ಕೆಲ ದಿನಗಳ ಹಿಂದಷ್ಟೇ 2 ಲಕ್ಷದ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ, ಇದೀಗ 3 ಲಕ್ಷದತ್ತ ದಾಪುಗಾಲು ಇಡುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ಹಾಗಾದ್ರೆ ಸದ್ಯದ ಮಟ್ಟಿಗೆ ಯಾವ ಯಾವ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ ಅನ್ನೊದರ ಅಂಕಿ-ಅಂಶ ನೋಡೋದಾದ್ರೆ.
ಕಿಲ್ಲರ್ ‘ಕೊರೊನಾ’ ಕಿರಿಕಿರಿ ಮಹಾರಾಷ್ಟ್ರದಲ್ಲಿ ಈವರೆಗೂ 77 ಸಾವಿರದ 793 ಕೊರೊನಾ ಕೇಸ್ಗಳು ಕನ್ಫರ್ಮ್ ಆಗಿದ್ರೆ, 2710 ಜನರು ಮೃತಪಟ್ಟಿದ್ದಾರೆ. ಹಾಗೇ ತಮಿಳುನಾಡಿನಲ್ಲಿ 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕನ್ಫರ್ಮ್ ಆಗಿದ್ದು, 220 ಸೋಂಕಿತರು ಬಲಿಯಾಗಿದ್ದಾರೆ. ದೆಹಲಿಯಲ್ಲಿ 25 ಸಾವಿರ ಕೇಸ್ಗಳು ಪತ್ತೆಯಾಗಿದ್ರೆ, 650 ಜನರು ಅಸುನೀಗಿದ್ದಾರೆ. ಹಾಗೇ ಗುಜರಾತ್ನಲ್ಲೂ ಸೂಂಕಿನ ಬಲೆಯಲ್ಲಿ 18 ಸಾವಿರದ 584 ಸಿಲುಕಿದ್ದು, 1155 ಜನರು ಸಾವನ್ನಪ್ಪಿದ್ದಾರೆ.
ನೌಕಾಪಡೆಯ 16 ಸಿಬ್ಬಂದಿಗೆ ಕೊರೊನಾ ಕನ್ಫರ್ಮ್ ಭಾರತದಲ್ಲಿ ಕೊರೊನಾ ಯಾವ ಮಟ್ಟಿಗೆ ವೇಗವಾಗಿ ಹಬ್ಬುತ್ತಿದೆ ಅಂದ್ರೆ, ದೇಶದ ಯೋಧರನ್ನೂ ಈ ವೈರಸ್ ಬಿಡ್ತಿಲ್ಲ. ಅಷ್ಟಕ್ಕೂ ಕಳೆದ 4 ದಿನಗಳಲ್ಲಿ ಗುಜರಾತ್ನಲ್ಲಿ ನೌಕಾಪಡೆಯ 16 ಸಿಬ್ಬಂದಿಗೆ ಕೊರೊನಾ ಕನ್ಫರ್ಮ್ ಆಗಿದೆ. ಪೋರಬಂದರ್ ನೌಕಾನೆಲೆಯ ಸಿಬ್ಬಂದಿಗೆ ಸೋಂಕು ಹರಡಿರೋದು ಗೊತ್ತಾಗಿದ್ದು, ಬೆಚ್ಚಿಬೀಳುವಂತೆ ಮಾಡಿದೆ.
ವ್ಯಾಕ್ಸಿನ್ ಸಿಗುತ್ತಿಲ್ಲ, ಎಲ್ಲಿಂದ-ಹೇಗೆ ಅಟ್ಯಾಕ್ ಮಾಡ್ತಿದೆ ಅನ್ನೋದು ಅರಿವಾಗ್ತಿಲ್ಲ. ಹೀಗೆ ಲಕ್ಷಾಂತರ ಜನರಿಗೆ ಕೊರೊನಾ ಬಾಧಿಸುತ್ತಿದೆ.ಭಾರತದಲ್ಲಿ ಪರಿಸ್ಥಿತಿ ಕಂಟ್ರೋಲ್ಗೆ ಬಂತು ಅನ್ನುವಷ್ಟರಲ್ಲೇ ಭಯಾನಕ ಸ್ಥಿತಿ ಎದುರಾಗಿದೆ.
Published On - 9:11 am, Sat, 6 June 20