ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವ ಕೊವಿಡ್ 19 ರೂಪಾಂತರಿ ಎಕ್ಸ್ಇ ಭಾರತದಲ್ಲಿ ಮೊದಲು ಮುಂಬೈನಲ್ಲಿ ದಾಖಲಾಗಿತ್ತು. ಇದೀಗ ಗುಜರಾತ್ನಲ್ಲಿ ಎಕ್ಸ್ಇ ರೂಪಾಂತರಿಯ ಇನ್ನೊಂದು ಕೇಸ್ ಕಾಣಿಸಿಕೊಂಡಿದ್ದಾಗಿ ಸರ್ಕಾರಿ ಮೂಲಗಳಿಂದಲೇ ಮಾಹಿತಿ ಸಿಕ್ಕಿದೆ ಎಂದು ಎನ್ಡಿಟಿವಿ, ಇಂಡಿಯಾ ಟುಡೆ ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಎಕ್ಸ್ಇ ಒಮಿಕ್ರಾನ್‌ನ ಉಪ ರೂಪಾಂತರಿಯಾಗಿದೆ. ವಡೋದರಾದ ಗೋತ್ರಿ ಎಂಬ ಏರಿಯಾದ 60 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇವರಲ್ಲಿ ಮಾರ್ಚ್ 11ರಂದು ಕೊವಿಡ್ 19 ದೃಢಪಟ್ಟಿತ್ತು. ನಂತರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಜಿನೋಮ್ ಸಿಕ್ವೆನ್ಸಿಂಗ್ಗೆ ಕಳಿಸಲಾಗಿತ್ತು. ಇದೀಗ ವರದಿ ಬಂದಿದ್ದು ಎಕ್ಸ್ಇ ಇರುವುದು ಗೊತ್ತಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಈ ಎಕ್ಸ್ಇ ವೈರಸ್ ಎಂಬುದು ಒಮಿಕ್ರಾನ್‌ನ ಬಿಎ.1 ಮತ್ತು ಬಿಎ.2 ತಳಿಗಳ ರೂಪಾಂತರಿ ಹೈಬ್ರೀಡ್ ಆಗಿದೆ. ಸದ್ಯ ಜಗತ್ತಿನಾದ್ಯಂತ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಕಾಣಿಸಿವೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಒಮಿಕ್ರಾನ್‌ನ ಉಪ ರೂಪಾಂತರವಾದ ಬಿಎ.2ಗಿಂತಲೂ ಹತ್ತುಪಟ್ಟು ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಎಕ್ಸ್ಇ ಜತೆಗೆ, ಎಕ್ಸ್ ಎಂಬ ರೂಪಾಂತರಿಯೂ ಕೂಡ ಗುಜರಾತ್ ಮತ್ತು ಮುಂಬೈನಲ್ಲಿ ಪತ್ತೆಯಾಗಿದೆ. ಇದೂ ಸಹ BA.1 ಮತ್ತು BA.2 ತಳಿಗಳ ಮರುಸಂಯೋಜಕ ಹೈಬ್ರೀಡ್ ಆಗಿದೆ.
ಬುಧವಾರವಷ್ಟೇ ಮುಂಬೈನಲ್ಲಿ ಮೊದಲ ಎಕ್ಸ್ಇ ರೂಪಾಂತರಿ ಕೇಸ್ ದಾಖಲಾಗಿತ್ತು. ದೇಶದಲ್ಲಿ ಮೊದಲ ಪ್ರಕರಣ ಇದು ಎಂದು ಮುಂಬೈನ ನಾಗರಿಕ ಆಡಳಿತ ತಿಳಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿತ್ತು. ಈ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು ಎಂದು ಕೇಂದ್ರದ ಸಂಶೋಧನಾ ಸಂಸ್ಥೆಯಾದ INSACOG ತಿಳಿಸಿತ್ತು. ಅಂದಹಾಗೇ, ಮುಂಬೈನಲ್ಲಿ ಪತ್ತೆಯಾದ ಪ್ರಕರಣದ ಮರು ಪರೀಕ್ಷೆ ಇನ್ನೂ ಸಂಪೂರ್ಣವಾಗಿಲ್ಲ. ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ತಪಾಸಣೆ ಪರೀಕ್ಷೆ ನಡೆಯುತ್ತಿದೆ.
ಇನ್ನು ಒಮಿಕ್ರಾನ್‌ನ BA.2 ಉಪ-ವ್ಯತ್ಯಯವು ವಿಶೇಷವಾಗಿ ಅಮೆರಿಕಾ ಮತ್ತು ಇಂಗ್ಲೆಂಡ್ನಂತಹ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಎರಡು ರಾಷ್ಟ್ರಗಳ ಹೊರತಾಗಿ ಚೀನಾದಲ್ಲಿ ಕೂಡ ಕೊವಿಡ್ ಪ್ರಕರಣಗಳ ಉಲ್ಬಣವಾಗುತ್ತಿದೆ. ಮಾರ್ಚ್‌ನಲ್ಲಿ ಮಾತ್ರ ಭಾರತದಲ್ಲಿ 1.4 ಲಕ್ಷ ಕೊವಿಡ್ ಪ್ರಕರಣಗಳನ್ನು ಕಂಡಿತು. ಅವುಗಳಲ್ಲಿ ಹೆಚ್ಚಿನವು ಶಾಂಘೈ ಮತ್ತು ಜಿಲಿನ್ ಪ್ರದೇಶಗಳಲ್ಲಿ ಕಂಡುಬಂದಿವೆ.
ಇದನ್ನೂ ಓದಿ: ಮುಂಬೈ ಆಯ್ತು, ಈಗ ಗುಜರಾತ್ನಲ್ಲಿ ಕೊವಿಡ್ 19 ರೂಪಾಂತರಿ ಎಕ್ಸ್ಇ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು
Published On - 10:29 am, Sat, 9 April 22