ಚಾಮರಾಜನಗರದ ಹಳ್ಳಿಯೊಂದರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ವ್ಯಕ್ತಿ; ಪೂಜೆಗಾಗಿ ಹಿಂದು ಅರ್ಚಕರ ನೇಮಕ

ನಮಗೆ ಅಲ್ಲಾ ಹೇಗೆ ದೇವರೋ, ಹಾಗೇ ಗಣೇಶ ಹಿಂದುಗಳಿಗೆ ದೇವರು. ಎಲ್ಲರ ರಕ್ತವೂ ಕೆಂಪು. ನನಗೆ ಯಾವುದೇ ಬೇಧವೂ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ ರೆಹಮಾನ್​,

ಚಾಮರಾಜನಗರದ ಹಳ್ಳಿಯೊಂದರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ವ್ಯಕ್ತಿ; ಪೂಜೆಗಾಗಿ ಹಿಂದು ಅರ್ಚಕರ ನೇಮಕ
ಗಣೇಶ ದೇಗುಲ
Follow us
TV9 Web
| Updated By: Lakshmi Hegde

Updated on: Apr 09, 2022 | 1:25 PM

ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದು-ಮುಸ್ಲಿಂ ಹಗ್ಗ-ಜಗ್ಗಾಟ ತುಸು ಜೋರಾಗಿಯೇ ನಡೆಯುತ್ತಿದೆ. ಹಿಜಾಬ್ ವಿವಾದದಿಂದ ಶುರುವಾಗಿದ್ದು, ಇದೀಗ ಮುಸ್ಲಿಂ ಚಾಲಕರ ವಾಹನದ ಮೇಲೆ ಹಿಂದುಗಳು ಪ್ರಯಾಣ ಮಾಡಬಾರದು ಎಂಬಲ್ಲಿವರೆಗೆ ಬಂದುನಿಂತಿದೆ. ಹಿಂದುಗಳ ಉತ್ಸವ, ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿ ಇಡಬಾರದು, ಮುಸ್ಲಿಮರ ಹಬ್ಬಗಳಲ್ಲಿ ಹಿಂದುಗಳು ಅಂಗಡಿ ಹಾಕಬಾರದು, ಮುಸ್ಲಿಮರು ಕೆತ್ತಿದ ಹಿಂದು ದೇವತೆಗಳ ವಿಗ್ರಹ ಪೂಜೆಗೆ ಯೋಗ್ಯವಲ್ಲ..ಹೀಗೆ ಒಂದರ ಬೆನ್ನಿಗೆ ಒಂದರಂತೆ ಸಂಘರ್ಷಗಳು ವರದಿಯಾಗುತ್ತಲೇ ಇವೆ. ಇದೆಲ್ಲದರ ಮಧ್ಯೆಯೊಂದು ಪಾಸಿಟಿವ್​ ವಿಷಯ ಬೆಳಕಿಗೆ ಬಂದಿದೆ.  

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಚಿಕ್ಕಹೊಳೆಯ ಪಿ.ರೆಹಮಾನ್​  ಎಂಬುವರು ಗಣಪತಿಯ ದೇವಸ್ಥಾನವನ್ನೊಂದನ್ನು ಕಟ್ಟಿ, ಅದಕ್ಕೆ ಪೂಜೆ ಸಲ್ಲಿಸಲು ಹಿಂದು ಅರ್ಚಕರನ್ನೇ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪಿಂಚಣಿ ಹಣದಲ್ಲಿ ಅರ್ಚಕರಿಗೆ ತಿಂಗಳಿಗೆ 4 ಸಾವಿರ ರೂಪಾಯಿ ಸಂಬಳವನ್ನೂ ನೀಡುತ್ತಿದ್ದಾರೆ. ಈ ವಿಚಾರ ಈಗ ಬೆಳಕಿಗೆ ಬಂದಿದ್ದು, ಅದೆಷ್ಟೋ ಜನ ಹುಬ್ಬೇರಿಸಿದ್ದಾರೆ. ರೆಹಮಾನ್​ರನ್ನು ಶ್ಲಾಘಿಸಿದ್ದಾರೆ.

ಅಂದಹಾಗೆ ಪಿ.ರೆಹಮಾನ್​ ಅವರು ಚಿಕ್ಕಹೊಳೆ ಜಲಾಶಯದಲ್ಲಿ ಗೇಟ್ ಆಪರೇಟರ್​ ಆಗಿದ್ದರು. 2018ರಲ್ಲಿ ಇವರು ನಿವೃತ್ತಗೊಂಡಿದ್ದಾರೆ. ಅದೇ ವರ್ಷ ಒಂದು ವಿಶಿಷ್ಟ ಘಟನೆ ನಡೆಯಿತು ಮತ್ತು ಅದೇ ಘಟನೆಯೇ ರೆಹಮಾನ್ ಅವರು ದೇವಸ್ಥಾನ ನಿರ್ಮಿಸಿ, ಅದರಲ್ಲಿ ಗಣೇಶನ ವಿಗ್ರಹ ಸ್ಥಾಪಿಸಲು ಕಾರಣವಾಯಿತು. 2018ರ ಹೊತ್ತಲ್ಲಿ, ರೆಹಮಾನ್ ನಿವೃತ್ತಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದಾಗ ಅಲ್ಲೇ ಚಿಕ್ಕಹೊಳೆ ಸಮೀಪದ ದೇವಸ್ಥಾನವೊಂದರಲ್ಲಿ ಇದ್ದ ಗಣೇಶನ ವಿಗ್ರಹವೊಂದು ಕಾಣೆಯಾಗಿತ್ತು. ಈ ದೇಗುಲ ರೆಹಮಾನ್ ಕೆಲಸ ಮಾಡುತ್ತಿದ್ದ ಜಲಾಶಯದ ಸಮೀಪವೇ ಇತ್ತು. ಆ ವಿಗ್ರಹವನ್ನು ರೆಹಮಾನ್ ಕೂಡ ನೋಡಿದ್ದರು.

ದೇವಾಲಯದಿಂದ ಕಾಣೆಯಾದ ವಿಗ್ರಹವನ್ನು ಪೊಲೀಸರು, ಸಾರ್ವಜನಿಕರು ಹುಡುಕಿದ್ದೇ ಬಂತು. ಆದರೆ ಅದು ಪತ್ತೆಯಾಗಲೇ ಇಲ್ಲ. ಹೀಗೆ ನಾನೊಂದು ದಿನ ರಾತ್ರಿ ಮಲಗಿದ್ದಾಗ ನನಗೊಂದು ಕನಸು ಬಿತ್ತು. ಅದರಲ್ಲಿ ಭಗವಂತ ಗಣಪತಿ ಬಂದು, ನನಗಾಗಿ ಒಂದು ದೇಗುಲ ಕಟ್ಟು ಎಂದು ಹೇಳಿದ. ನಾನು ಕೂಡಲೇ ಎದ್ದು ಕುಳಿತೆ. ನನಗೆ  ಆ ಕನಸನ್ನು ತಲೆಯಿಂದ ತೆಗೆದು ಹಾಕಲು ಸಾಧ್ಯವಾಗಲೇ ಇಲ್ಲ. ಹೀಗೆ ಯೋಚಿಸುತ್ತಲೇ ಇದ್ದೆ..ಅದಾಗಿ ಕೆಲವು ದಿನಗಳ ನಂತರ ನನಗೆ ನಿವೃತ್ತಿಯಾಯಿತು. ಈ ವೇಳೆ ನನಗೆ ಒಂದಷ್ಟು ಗ್ರಾಚ್ಯುಟಿ ಹಣವೂ ಬಂತು. ಕೂಡಲೇ ಒಂದು ದೇಗುಲ ನಿರ್ಮಾಣ ಮಾಡಿಸಿ, ಅದರಲ್ಲಿ ಗಣೇಶನ ವಿಗ್ರಹ ಸ್ಥಾಪಿಸಿದೆ ಎಂದು ರೆಹಮಾನ್ ಹೇಳಿದ್ದಾರೆ.

ನಮಗೆ ಅಲ್ಲಾ ಹೇಗೆ ದೇವರೋ, ಹಾಗೇ ಗಣೇಶ ಹಿಂದುಗಳಿಗೆ ದೇವರು. ಎಲ್ಲರ ರಕ್ತವೂ ಕೆಂಪು. ನನಗೆ ಯಾವುದೇ ಬೇಧವೂ ಕಾಣಿಸುತ್ತಿಲ್ಲ ಎಂದು ಹೇಳುವ ರೆಹಮಾನ್​, ಗಣಪತಿ ವಿಗ್ರಹಕ್ಕೆ ನಡೆಯಬೇಕಾದ ಪೂಜೆಯ ವಿಧಾನ ಬೇರೆ ಇರುತ್ತದೆ. ಹಾಗಾಗಿ ಒಬ್ಬ ಹಿಂದು ಅರ್ಚಕರನ್ನು ನೇಮಿಸಿಕೊಂಡಿದ್ದೇನೆ. ಪ್ರತಿನಿತ್ಯ ಈ ದೇಗುಲದಲ್ಲಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿರುತ್ತವೆ. ಜನರೂ ಬರುತ್ತಾರೆ. ನಾನು ಅರ್ಚಕರಿಗೆ ನನ್ನ ಪಿಂಚಣಿ ಹಣದಲ್ಲಿಯೇ 4 ಸಾವಿರ ರೂಪಾಯಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯ ದಾರುಣ ಘಟನೆ: ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದ ನವಜಾತ ಶಿಶು

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್