ಮುಂಬೈ ಆಯ್ತು, ಈಗ ಗುಜರಾತ್​ನಲ್ಲಿ ಕೊವಿಡ್ 19 ರೂಪಾಂತರಿ ಎಕ್ಸ್ಇ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು

ಬುಧವಾರವಷ್ಟೇ ಮುಂಬೈನಲ್ಲಿ ಮೊದಲ ಎಕ್ಸ್​ಇ ರೂಪಾಂತರಿ ಕೇಸ್​ ದಾಖಲಾಗಿತ್ತು. ದೇಶದಲ್ಲಿ ಮೊದಲ ಪ್ರಕರಣ ಇದು ಎಂದು ಮುಂಬೈನ ನಾಗರಿಕ ಆಡಳಿತ ತಿಳಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿತ್ತು.

ಮುಂಬೈ ಆಯ್ತು, ಈಗ ಗುಜರಾತ್​ನಲ್ಲಿ ಕೊವಿಡ್ 19 ರೂಪಾಂತರಿ ಎಕ್ಸ್ಇ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Apr 09, 2022 | 11:32 AM

ಇಂಗ್ಲೆಂಡ್​​ನಲ್ಲಿ ಪತ್ತೆಯಾಗಿರುವ ಕೊವಿಡ್​ 19 ರೂಪಾಂತರಿ ಎಕ್ಸ್​ಇ ಭಾರತದಲ್ಲಿ ಮೊದಲು ಮುಂಬೈನಲ್ಲಿ ದಾಖಲಾಗಿತ್ತು. ಇದೀಗ ಗುಜರಾತ್​​ನಲ್ಲಿ ಎಕ್ಸ್​ಇ ರೂಪಾಂತರಿಯ ಇನ್ನೊಂದು ಕೇಸ್​ ಕಾಣಿಸಿಕೊಂಡಿದ್ದಾಗಿ ಸರ್ಕಾರಿ ಮೂಲಗಳಿಂದಲೇ ಮಾಹಿತಿ ಸಿಕ್ಕಿದೆ ಎಂದು ಎನ್​ಡಿಟಿವಿ, ಇಂಡಿಯಾ ಟುಡೆ ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.  ಎಕ್ಸ್​ಇ ಒಮಿಕ್ರಾನ್​ನ ಉಪ ರೂಪಾಂತರಿಯಾಗಿದೆ. ವಡೋದರಾದ ಗೋತ್ರಿ ಎಂಬ ಏರಿಯಾದ 60 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇವರಲ್ಲಿ ಮಾರ್ಚ್​ 11ರಂದು ಕೊವಿಡ್​ 19 ದೃಢಪಟ್ಟಿತ್ತು. ನಂತರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಜಿನೋಮ್​ ಸಿಕ್ವೆನ್ಸಿಂಗ್​ಗೆ ಕಳಿಸಲಾಗಿತ್ತು. ಇದೀಗ ವರದಿ ಬಂದಿದ್ದು ಎಕ್ಸ್​ಇ ಇರುವುದು ಗೊತ್ತಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಈ ಎಕ್ಸ್​ಇ ವೈರಸ್​ ಎಂಬುದು ಒಮಿಕ್ರಾನ್​ನ ಬಿಎ.1 ಮತ್ತು ಬಿಎ.2 ತಳಿಗಳ ರೂಪಾಂತರಿ ಹೈಬ್ರೀಡ್ ಆಗಿದೆ. ಸದ್ಯ ಜಗತ್ತಿನಾದ್ಯಂತ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಕಾಣಿಸಿವೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಒಮಿಕ್ರಾನ್​ನ ಉಪ ರೂಪಾಂತರವಾದ ಬಿಎ.2ಗಿಂತಲೂ ಹತ್ತುಪಟ್ಟು ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಎಕ್ಸ್​ಇ ಜತೆಗೆ, ಎಕ್ಸ್​ ಎಂಬ ರೂಪಾಂತರಿಯೂ ಕೂಡ ಗುಜರಾತ್​ ಮತ್ತು ಮುಂಬೈನಲ್ಲಿ ಪತ್ತೆಯಾಗಿದೆ. ಇದೂ ಸಹ BA.1  ಮತ್ತು BA.2 ತಳಿಗಳ ಮರುಸಂಯೋಜಕ ಹೈಬ್ರೀಡ್​ ಆಗಿದೆ.

ಬುಧವಾರವಷ್ಟೇ ಮುಂಬೈನಲ್ಲಿ ಮೊದಲ ಎಕ್ಸ್​ಇ ರೂಪಾಂತರಿ ಕೇಸ್​ ದಾಖಲಾಗಿತ್ತು. ದೇಶದಲ್ಲಿ ಮೊದಲ ಪ್ರಕರಣ ಇದು ಎಂದು ಮುಂಬೈನ ನಾಗರಿಕ ಆಡಳಿತ ತಿಳಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿತ್ತು. ಈ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು ಎಂದು ಕೇಂದ್ರದ ಸಂಶೋಧನಾ ಸಂಸ್ಥೆಯಾದ INSACOG ತಿಳಿಸಿತ್ತು. ಅಂದಹಾಗೇ, ಮುಂಬೈನಲ್ಲಿ ಪತ್ತೆಯಾದ ಪ್ರಕರಣದ ಮರು ಪರೀಕ್ಷೆ ಇನ್ನೂ ಸಂಪೂರ್ಣವಾಗಿಲ್ಲ. ಪುಣೆಯ ನ್ಯಾಶನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ತಪಾಸಣೆ ಪರೀಕ್ಷೆ ನಡೆಯುತ್ತಿದೆ.

ಇನ್ನು ಒಮಿಕ್ರಾನ್‌ನ BA.2 ಉಪ-ವ್ಯತ್ಯಯವು ವಿಶೇಷವಾಗಿ ಅಮೆರಿಕಾ ಮತ್ತು ಇಂಗ್ಲೆಂಡ್​ನಂತಹ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಎರಡು ರಾಷ್ಟ್ರಗಳ ಹೊರತಾಗಿ ಚೀನಾದಲ್ಲಿ ಕೂಡ ಕೊವಿಡ್ ಪ್ರಕರಣಗಳ ಉಲ್ಬಣವಾಗುತ್ತಿದೆ. ಮಾರ್ಚ್‌ನಲ್ಲಿ ಮಾತ್ರ ಭಾರತದಲ್ಲಿ 1.4 ಲಕ್ಷ ಕೊವಿಡ್ ಪ್ರಕರಣಗಳನ್ನು ಕಂಡಿತು. ಅವುಗಳಲ್ಲಿ ಹೆಚ್ಚಿನವು ಶಾಂಘೈ ಮತ್ತು ಜಿಲಿನ್ ಪ್ರದೇಶಗಳಲ್ಲಿ ಕಂಡುಬಂದಿವೆ.

ಇದನ್ನೂ ಓದಿ: ಮುಂಬೈ ಆಯ್ತು, ಈಗ ಗುಜರಾತ್​ನಲ್ಲಿ ಕೊವಿಡ್ 19 ರೂಪಾಂತರಿ ಎಕ್ಸ್ಇ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು

Published On - 10:29 am, Sat, 9 April 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್