ಹೌದು, ನಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೇ; ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡ ಕಾಂಗ್ರೆಸ್ ಶಾಸಕ

| Updated By: Lakshmi Hegde

Updated on: Mar 23, 2022 | 10:50 AM

ಈ ದೇಶವನ್ನು ಕಟ್ಟಿದ್ದು ನೆಹರೂ-ಗಾಂಧಿ ಕುಟುಂಬ. ಹಾಗಾಗಿ ನಾವು ಅವರ ಗುಲಾಮರಾಗಿದ್ದೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ ಎಂದು ಸಂಯಮ್​ ಲೋಧಾ ಹೇಳುತ್ತಿದ್ದಂತೆ ಬಿಜೆಪಿ ತೀವ್ರವಾಗಿ ಟೀಕಿಸಿದೆ. 

ಹೌದು, ನಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೇ; ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡ ಕಾಂಗ್ರೆಸ್ ಶಾಸಕ
ಸಂಯಮ್ ಲೋಧಾ
Follow us on

‘ಹೌದು.. ನಾವು ನೆಹರು-ಗಾಂಧಿ ಕುಟುಂಬದ ಗುಲಾಮರೇ’ ಹೀಗೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದು ರಾಜಸ್ಥಾನದ ಸಿರೋಹಿ ಶಾಸಕ ಸಂಯಮ್ ಲೋಧಾ(Sirohi MLA Sanyam Lodha) ರಾಜಸ್ಥಾನ ವಿಧಾನಸಭೆಯಲ್ಲಿ (Rajasthan Assembly) ಬಜೆಟ್​ ಅಧಿವೇಶನವದ ವೇಳೆ ಮಾತನಾಡಿದ ಅವರು ಈ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ಕೊನೇ ಉಸಿರು ಇರುವ ತನಕವೂ ನಾವು ನೆಹರು-ಗಾಂಧಿ ಕುಟುಂಬದ ಗುಲಾಮರಾಗಿಯೇ ಉಳಿಯುತ್ತೇವೆ ಎಂದಿದ್ದಾರೆ. ಅಂದಹಾಗೇ, ಈ ಲೋಧಾ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರ  ಸಲಹೆಗಾರರೂ ಆಗಿದ್ದಾರೆ. ಹರಿದೇವ್ ಜೋಶ್​ ವಿಶ್ವವಿದ್ಯಾನಿಲಯ ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತಿದ್ದುಪಡಿ ಮಸೂದೆ ಸಂಬಂಧ ಮಾತನಾಡುವಾಗ ಹೀಗೆ ಹೇಳಿದ್ದಾರೆ.

ಈ ದೇಶವನ್ನು ಕಟ್ಟಿದ್ದು ನೆಹರೂ-ಗಾಂಧಿ ಕುಟುಂಬ. ಹಾಗಾಗಿ ನಾವು ಅವರ ಗುಲಾಮರಾಗಿದ್ದೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ ಎಂದು ಸಂಯಮ್​ ಲೋಧಾ ಹೇಳುತ್ತಿದ್ದಂತೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.  ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ಉಪನಾಯಕ ರಾಜೇಂದ್ರ ರಾಥೋಡ್​, ನಿಮ್ಮ ಗುಲಾಮಗಿರಿಗೆ ಅಭಿನಂದನೆಗಳು. ಈ ಗುಲಾಮರು ಸಮಾಜಕ್ಕೆ ಏನು ಸಂದೇಶ ಕೊಡಲು ಸಾಧ್ಯ. ಯಾರಿಗೇ ಗುಲಾಮನಾದವನು ಅವನ ಸ್ವಂತ ಇಚ್ಛೆಯಿಂದ, ಮನಸಿನಿಂದ, ಬುದ್ಧಿಯಿಂದ ಏನೂ ಮಾತನಾಡುವುದಿಲ್ಲ. ಅವರೇ ಒಪ್ಪಿಕೊಂಡಿದ್ದಾರೆ ತಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೆಂದು ಎಂದು ವಾಗ್ದಾಳಿ ನಡೆಸಿದ್ದಾರೆ.  ಬಳಿಕ ವಿಧಾನಸಭೆಯಲ್ಲಿ ಇದೇ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ಜೋರಾಗಿತ್ತು. ಇಡೀ ಸದನ ಅವ್ಯವಸ್ಥೆಗೊಂಡಿತ್ತು. ಬಳಿಕ ವಿಧಾನಸಭೆ ಸ್ಪೀಕರ್​ ಮಧ್ಯಪ್ರವೇಶ ಮಾಡಿ, ಎರಡೂ ಪಕ್ಷಗಳ ನಾಯಕರನ್ನು ಸಮಾಧಾನ ಮಾಡಿದರು.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?

Published On - 9:35 am, Wed, 23 March 22