ದೆಹಲಿ: ಪತಂಜಲಿ ಸಂಸ್ಥೆ ವೈಜ್ಞಾನಿಕ ಸಂಶೋಧನೆ ನಡೆಸಿ, ಕೊರೊನಾಗೆ ಔಷಧ ತಯಾರಿಸಿದೆ ಎಂದು ಪತಂಜಲಿ ಸಂಸ್ಥೆಯ ಸಂಸ್ಥಾಪಕ ಯೋಗಗುರು ಬಾಬಾ ರಾಮ್ದೇವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ‘ಕೊರೊನಿಲ್’ ಔಷಧ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಕೇಂದ್ರ ಆರೋಗ್ಯ ಇಲಾಖೆ ಸಚಿವ ಡಾ.ಹರ್ಷವರ್ಧನ್ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗಗುರು ಬಾಬಾ ರಾಮ್ದೇವ್, ಕೊರೊನಾಗೆ ಪತಂಜಲಿ ಸಂಶೋಧನಾ ಸಂಸ್ಥೆಯಿಂದ ವೈಜ್ಞಾನಿಕ ಸಂಶೋಧನೆ ‘ಕೊರೊನಿಲ್’ ಔಷಧ ಅಭಿವೃದ್ಧಿ ಮಾಡಲಾಗಿದೆ. ಇದು ಮೊದಲ ಸಾಕ್ಷ್ಯ-ಆಧಾರಿತ ಕೊರೊನಾ ಔಷಧದ ಅಭಿವೃದ್ಧಿಯಾಗಿದೆ. ಕೊರೊನಾ ಔಷಧದಿಂದ ವಿಶ್ವದ 158 ದೇಶಗಳಿಗೆ ಪ್ರಯೋಜನವಾಗಿದೆ ಎಂದಿದ್ದಾರೆ.
योग, आयुर्वेद और ज्ञान पर आधारित विश्व का सबसे पहला अनुसंधान संस्थान भी यही हैं जहां 500 से अधिक
साइंटिस्ट काम कर रहे हैं।#Patanjalis_EvidenceBased_Medicine4Corona #PatanjaliCoronil pic.twitter.com/LUamlDsh4l— Patanjali Dairy (@PatanjaliDairy) February 19, 2021
ಈ ಕುರಿತಂತೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕೊರೊನಿಲ್ ಔಷಧ ಜನರಿಗೆ ವರದಾನವಾಗಲಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಔಷಧ ಅಸ್ತ್ರವಾಗಲಿದೆ. ಆತ್ಮನಿರ್ಭರ ಸಂಕೇತವಾಗಿ ಔಷಧ ಅಭಿವೃದ್ಧಿಪಡಿಸಲಾಗಿದೆ. ಈ ಔಷಧದಿಂದ ವಿಶ್ವದ ಹಲವು ದೇಶಗಳಿಗೆ ಅನುಕೂಲವಾಗಲಿದೆ. ಪ್ರಯೋಗದ ಸಾಕ್ಷ್ಯಗಳ ಮೂಲಕ ಮತ್ತೆ ಕೊರೊನಿಲ್ ಬಂದಿದೆ. ಇದರಿಂದ ವಿಶ್ವದ ನಾನಾ ದೇಶಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.
#Patanjalis_EvidenceBased_Medicine4Corona #PatanjaliCoronil pic.twitter.com/qUT8xGbDDJ
— Patanjali Ayurved (@PypAyurved) February 19, 2021
ಇದನ್ನೂ ಓದಿ: ಕೊರೊನಾಗೆ ‘ರಾಮ’ ಬಾಣ: ಮದ್ದು ಕಂಡು ಹಿಡಿದೇ ಬಿಟ್ರಾ ಬಾಬಾ ರಾಮ್ ದೇವ್..?