ಚೆನ್ನೈ: ಡಿಎಂಕೆ (DMK) ನಾಯಕ ಎ ರಾಜಾ (A Raja) ಇಲ್ಲಿ ನಡೆದ ಸಭೆಯೊಂದರಲ್ಲಿ ಜಾತಿ ಕುರಿತು ಮಾಡಿದ ಹೇಳಿಕೆ ವಿವಾದಕ್ಕೀಡಾಗಿದ್ದು, ಎ ರಾಜಾ ಅವರು ದ್ವೇಷ ಕಾರುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮನುಸ್ಮೃತಿಯಲ್ಲಿ ಶೂದ್ರರನ್ನು ಅವಮಾನಿಸಲಾಗಿದೆ. ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ನೀವು ಹಿಂದೂ ಆಗಿ ಇರುವವರೆಗೂ ನೀವು ಶೂದ್ರರಾಗಿಯೇ ಇರುತ್ತೀರಿ. ಶೂದ್ರನಾಗಿರುವ ತನಕ ನೀವು ವೇಶ್ಯೆಯ ಮಗ. ನೀವು ಹಿಂದೂ ಆಗಿ ಇರವವರೆಗೂ ನೀವು ಪಂಚಮ (ದಲಿತ). ನೀವು ಹಿಂದೂವಾಗಿ ಇರುವವರೆಗೂ ನೀವು ಅಸ್ಪೃಶ್ಯರು ಎಂದು ದ್ರಾವಿಡರ್ ಕಳಗಂ ಸಭೆಯನ್ನುದ್ದೇಶಿಸಿ ಮಾತನಾಡಿದ ನೀಲಗಿರಿ ಸಂಸದ ಮತ್ತು ಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿ ರಾಜಾ ಹೇಳಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಅವರು “ನಿಮ್ಮಲ್ಲಿ ಎಷ್ಟು ಮಂದಿ ವೇಶ್ಯೆಯರ ಮಕ್ಕಳಾಗಿ ಉಳಿಯಲು ಬಯಸುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಅಸ್ಪೃಶ್ಯರಾಗಿ ಉಳಿಯಲು ಬಯಸುತ್ತೀರಿ? ಈ ಪ್ರಶ್ನೆಗಳ ಬಗ್ಗೆ ನಾವು ದನಿಯೆತ್ತಿದರೆ ಮಾತ್ರ ಅದು ಸನಾತನ (ಧರ್ಮ)ವನ್ನು ಮುರಿಯುವಲ್ಲಿ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ.
Who are Sudras? Are they not Hindus? Why they have been insulted in Manusmrithi denied equality, education, employment and Temple entry. Dravidian Movement as saviour of 90% Hindus questioned and redressed these, cannot be anti-Hindus.
— A RAJA (@dmk_raja) September 13, 2022
ಒಬ್ಬ ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಅಲ್ಲದಿದ್ದರೆ, ಅವನು ಹಿಂದೂ ಆಗಿರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇಂತಹ ಕ್ರೌರ್ಯವನ್ನು ಯಾವುದಾದರೂ ದೇಶ ಎದುರಿಸುತ್ತಿದೆಯೇ ಎಂದು ಮಾಜಿ ಕೇಂದ್ರ ಸಚಿವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಾಜಾ, “ಶೂದ್ರರು ಯಾರು? ಅವರು ಹಿಂದೂಗಳಲ್ಲವೇ? ಮನುಸ್ಮೃತಿಯಲ್ಲಿ ಅವರನ್ನು ಏಕೆ ಅವಮಾನಿಸಲಾಗಿದೆ. ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯ ಪ್ರವೇಶವನ್ನು ನಿರಾಕರಿಸಲಾಗಿದೆ. ದ್ರಾವಿಡ ಚಳುವಳಿ, ಶೇ 90 ಹಿಂದೂಗಳ ಸಂರಕ್ಷಕನಾಗಿ, ಇವುಗಳನ್ನು ಪ್ರಶ್ನಿಸಿದರೆ ಹಿಂದೂ ವಿರೋಧಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜಾ ಹೇಳಿಕೆ ಖಂಡಿಸಿದ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ತಮಿಳುನಾಡಿನ ರಾಜಕೀಯ ಭಾಷಣದ ಒಂದು ವಿಷಾದನೀಯ ಸ್ಥಿತಿ ಎಂದು ಬಣ್ಣಿಸಿದರು.
ಅರಿವಾಲಯಂ ಸಂಸದರು ಇತರರನ್ನು ಸಮಾಧಾನಪಡಿಸುವ ಏಕೈಕ ಗುರಿಯೊಂದಿಗೆ ಒಂದು ಸಮುದಾಯದ ವಿರುದ್ಧ ಮತ್ತೊಮ್ಮೆ ದ್ವೇಷವನ್ನು ಹೊರಹಾಕಿದ್ದಾರೆ. ತಮಿಳುನಾಡು ಅವರದೇ ಎಂದು ಭಾವಿಸುವ ಈ ರಾಜಕೀಯ ನಾಯಕರ ದುರದೃಷ್ಟಕರ ಮನಸ್ಥಿತಿ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಮಾತನಾಡಿ, ರಾಜಾ ಅನೇಕ ಸಂದರ್ಭಗಳಲ್ಲಿ ಮಹಿಳೆಯರು ಮತ್ತು ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದಿದ್ದಾರೆ .