ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

| Updated By: Digi Tech Desk

Updated on: Oct 21, 2021 | 2:52 PM

Farmers Protest "ಅಂತಿಮವಾಗಿ ಕೆಲವು ಪರಿಹಾರವನ್ನು ಕಂಡುಹಿಡಿಯಬೇಕು. ಕಾನೂನು ಸವಾಲು ಬಾಕಿಯಿರುವಾಗಲೂ ಪ್ರತಿಭಟಿಸುವ ಅವರ ಹಕ್ಕನ್ನು ನಾವು ವಿರೋಧಿಸುವುದಿಲ್ಲ, ಆದರೆ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ದೆಹಲಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ನ್ಯಾಯಮೂರ್ತಿ ಎಸ್‌ಕೆ ಕೌಲ್ ನೇತೃತ್ವದ ನ್ಯಾಯಪೀಠವು ರೈತ ಸಂಘಗಳಿಗೆ ಮೂರು ವಾರಗಳ ಸಮಯವನ್ನು ನೀಡಿತು. ದೆಹಲಿಯ ಗಡಿಗಳಲ್ಲಿ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಸುಮಾರು ಒಂದು ವರ್ಷಗಳಿಂದ ರೈತರು ಆಂದೋಲನ ನಡೆಸುತ್ತಿದ್ದಾರೆ. ಅವರನ್ನು ರಸ್ತೆಯಿಂದ ತೆರವುಗೊಳಿಸಲು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿತು. ನೋಯ್ಡಾದ ನಿವಾಸಿ ಮೊನಿಕಾ ಅಗರ್‌ವಾಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಪ್ರತಿಭಟನಾಕಾರರನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ರಸ್ತೆಗಳಿಂದ ತೆರವು ಮಾಡುವಂತೆ ಒತ್ತಾಯಿಸಿರುವ ಈ ಅರ್ಜಿಯಲ್ಲಿ ರೈತ ಆಂದೋಲನವು ದೈನಂದಿನ ಪ್ರಯಾಣಕ್ಕೆ ತಡೆಯುಂಟು ಮಾಡುತ್ತಿದೆ ಎಂದು ಹೇಳಿದೆ.

“ಅಂತಿಮವಾಗಿ ಕೆಲವು ಪರಿಹಾರವನ್ನು ಕಂಡುಹಿಡಿಯಬೇಕು. ಕಾನೂನು ಸವಾಲು ಬಾಕಿಯಿರುವಾಗಲೂ ಪ್ರತಿಭಟಿಸುವ ಅವರ ಹಕ್ಕನ್ನು ನಾವು ವಿರೋಧಿಸುವುದಿಲ್ಲ, ಆದರೆ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ನೀವು ಯಾವುದೇ ರೀತಿಯಲ್ಲಿ ಆಂದೋಲನ ಮಾಡುವ ಹಕ್ಕನ್ನು ಹೊಂದಿರಬಹುದು ಆದರೆ ರಸ್ತೆಗಳನ್ನು ಈ ರೀತಿ ನಿರ್ಬಂಧಿಸಬಾರದು. ಜನರಿಗೆ ರಸ್ತೆಗಳಲ್ಲಿ ಹೋಗಲು ಹಕ್ಕಿದೆ ಆದರೆ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎಂಎಂ ಸುಂದ್ರೇಶ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ನ್ಯಾಯಾಂಗ ವೇದಿಕೆ, ಆಂದೋಲನ ಅಥವಾ ಸಂಸದೀಯ ಚರ್ಚೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಕರೆ ನೀಡಿದ್ದು, ರೈತರು ಹೆದ್ದಾರಿಗಳ ದಿಗ್ಬಂಧನವನ್ನು ಉಲ್ಲೇಖಿಸಿತ್ತು.
“ಸಮಸ್ಯೆಗಳ ಪರಿಹಾರವು ನ್ಯಾಯಾಂಗ ವೇದಿಕೆ, ಆಂದೋಲನ ಅಥವಾ ಸಂಸತ್ತಿನ ಚರ್ಚೆಗಳ ಮೂಲಕ ಆಗಿರಬಹುದು. ಆದರೆ ಹೆದ್ದಾರಿಗಳನ್ನು ಹೇಗೆ ನಿರ್ಬಂಧಿಸಬಹುದು ಮತ್ತು ಇದು ನಿರಂತರವಾಗಿ ನಡೆಯುತ್ತಿದೆ. ಇದು ಎಲ್ಲಿ ಕೊನೆಗೊಳ್ಳುತ್ತದೆ?” ನ್ಯಾಯಾಲಯ ಹೇಳಿತ್ತು.

ಕೇಂದ್ರದ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ಸುಮಾರು ಒಂದು ವರ್ಷದಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Police Commemoration Day 2021 ಕರ್ತವ್ಯದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ನರೇಂದ್ರ ಮೋದಿ

Published On - 1:43 pm, Thu, 21 October 21