ನೀವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದೀರಿ; ರಾಜ್ಯಸಭೆಯಲ್ಲಿ ನಗುತ್ತಾ ರಾಘವ್ ಚಡ್ಡಾ ಕಾಲೆಳೆದ ಧನ್ಖರ್

ರಾಘವ್ ಮತ್ತು ಪರಿಣಿತಿ ಅವರು ಮುಂಬೈನಲ್ಲಿ ಮಧ್ಯಾಹ್ನದೂಟ ಮತ್ತು ರಾತ್ರಿ ಭೋಜನಕ್ಕೆ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ವದಂತಿಗಳ ಹರಿದಾಡಿವೆ. ಆದರೆ ಇವರಿಬ್ಬರೂ ಡೇಟಿಂಗ್ ವದಂತಿಗಳನ್ನು ನಿರಾಕರಿಸಲಿಲ್ಲ.

ನೀವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದೀರಿ; ರಾಜ್ಯಸಭೆಯಲ್ಲಿ ನಗುತ್ತಾ ರಾಘವ್ ಚಡ್ಡಾ ಕಾಲೆಳೆದ ಧನ್ಖರ್
ರಾಘವ್ ಚಡ್ಡಾ

Updated on: Mar 25, 2023 | 11:52 AM

ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineeti Chopra) ಜತೆ  ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಇತ್ತ ರಾಜ್ಯಸಭೆಯಲ್ಲಿ ಮೆಹುಲ್ ಚೋಕ್ಸಿ ಅವರ ಆಂಟಿಗುವಾ ಪೌರತ್ವಕ್ಕೆ ಸರ್ಕಾರದ ಎನ್‌ಒಸಿ ಕುರಿತು ಚರ್ಚಿಸಲು ಚಡ್ಡಾ ವ್ಯವಹಾರದ ಸೂಚನೆಯನ್ನು ರದ್ದು ಮಾಡಲು ಮನವಿ ಮಾಡಿದಾಗ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ (Jagdeep Dhankar), ಚಡ್ಡಾ ಅವರು ತಮಾಷೆಯಾಗಿ ಕಾಲೆಳೆದಿದ್ದಾರೆ. ನೀವು ಈಗಾಗಲೇ ಇದ್ದೀರಿ….ನೀವು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದೀರಿ. ಇದು ನಿಮಗೆ ಸುಮ್ಮನಿರುವ ದಿನವಾಗಿರಬಹುದು ಎಂದು ಶುಕ್ರವಾರದ ಕಲಾಪ ವೇಳೆ ಜಗದೀಪ್ ಧನ್ಖರ್ ಹೇಳಿದ್ದಾರೆ. ಸಭಾಪತಿಯವರ ಕಾಮೆಂಟ್ ಬಗ್ಗೆ ಏನನ್ನೂ ಉಲ್ಲೇಖಿಸದಿದ್ದರೂ ಎಎಪಿ ಸಂಸದರೇ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ರಾಘವ್ ಮತ್ತು ಪರಿಣಿತಿ ಅವರು ಮುಂಬೈನಲ್ಲಿ ಮಧ್ಯಾಹ್ನದೂಟ ಮತ್ತು ರಾತ್ರಿ ಭೋಜನಕ್ಕೆ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ವದಂತಿಗಳ ಹರಿದಾಡಿವೆ. ಆದರೆ ಇವರಿಬ್ಬರೂ ಡೇಟಿಂಗ್ ವದಂತಿಗಳನ್ನು ನಿರಾಕರಿಸಲಿಲ್ಲ. ಡೇಟಿಂಗ್ ವದಂತಿಗಳ ಬಗ್ಗೆ ಕೇಳಿದಾಗ “ಪರಿಣಿತಿ ಬಗ್ಗೆ ಅಲ್ಲ, ರಾಜನೀತಿ (ರಾಜಕೀಯ) ಬಗ್ಗೆ ನನ್ನನ್ನು ಕೇಳಿ” ಎಂದಿದ್ದರು. ಮದುವೆ ಯಾವಾಗ ಎಂದು ಕೇಳಿದಾಗ, ಸಮಯ ಬಂದಾಗ ಅದನ್ನು ಬಹಿರಂಗಪಡಿಸುತ್ತೇನೆ ಎಂದು ರಾಘವ್ ಚಡ್ಡಾ ಹೇಳಿದ್ದರು.


ನೀವು ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೀರಾ. ಮದುವೆ ಸುದ್ದಿ ನಿಜವೇ?’ ಎಂದು ರಾಘವ್​​ ಅವರಲ್ಲಿ  ಕೇಳಲಾಗಿತ್ತು. ಇದಕ್ಕೆ ಅವರು  ‘ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿ, ಪರಿಣಿತಿಗೆ ಸಂಬಂಧಿಸಿದ್ದು ಅಲ್ಲ ಎಂದು ನಗುತ್ತಾ ಉತ್ತರಿಸಿದ್ದಾರೆ. ಮದುವೆ ಬಗ್ಗೆ  ಕೇಳಿದಾಗಲ ‘ಮದುವೆ ಆಗುವಾಗ ಹೇಳ್ತೀನಿ’ ಎಂದಿದ್ದರು. ಲಂಡನ್  ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಪರಿಣಿತಿ ಹಾಗೂ ರಾಘವ್ ಚಡ್ಡಾ ಜತೆಯಾಗಿ ಓದಿದ್ದರು. ಹೀಗಾಗಿ ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ. ಈ ಕಾರಣಕ್ಕೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪರಿಣಿತಿ ಚೋಪ್ರಾ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ಯಶಸ್ಸು ಸಿಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ಹೆಸರು ರಾಜಕಾರಣಿಯ ಜೊತೆ ತಳಕು ಹಾಕಿಕೊಂಡಿದೆ.

ಇದನ್ನೂ ಓದಿ:Land For Employment Case: ತೇಜಸ್ವಿ ಯಾದವ್ ಇಂದು ಸಿಬಿಐ ಮುಂದೆ ವಿಚಾರಣೆಗೆ ಹಾಜರು

ಬುಧವಾರ ಗುರುಗ್ರಾಮದ ಹೋಟೆಲ್​ ಒಂದರಲ್ಲಿ ಪರಿಣಿತಿ ಹಾಗೂ ಚಡ್ಡಾ ರಾತ್ರಿ ಊಟ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಮುಂಬೈನ ಬಾಂದ್ರಾದ ಹೋಟೆಲ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಇಬ್ಬರೂ ಒಟ್ಟಾಗಿ ಊಟ ಮಾಡಲು ಸೇರಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಈ ಫೋಟೋಗಳನ್ನು ಕ್ಲಿಕ್ಕಿಸಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇಬ್ಬರೂ ಮ್ಯಾಚಿಂಗ್ ಶರ್ಟ್ ಧರಿಸಿದ್ದರು ಅನ್ನೋದು ವಿಶೇಷ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ