AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪರಿಣೀತಿ ಚೋಪ್ರಾ ಜೊತೆ ಮದುವೆ ಆಗ್ತೀರಾ’ ಎಂಬ ಪ್ರಶ್ನೆ ಬಗ್ಗೆ ಮೌನ ಮುರಿದ ಆಪ್ ನಾಯಕ

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಪರಿಣೀತಿ ಹಾಗೂ ರಾಘವ್ ಅಧ್ಯಯನ ನಡೆಸಿದ್ದರು. ಇಬ್ಬರೂ ಒಟ್ಟಾಗಿ ಓದಿದ್ದರಿಂದ ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ.

‘ಪರಿಣೀತಿ ಚೋಪ್ರಾ ಜೊತೆ ಮದುವೆ ಆಗ್ತೀರಾ’ ಎಂಬ ಪ್ರಶ್ನೆ ಬಗ್ಗೆ ಮೌನ ಮುರಿದ ಆಪ್ ನಾಯಕ
ರಾಘವ್-ಪರಿಣೀತಿ
ರಾಜೇಶ್ ದುಗ್ಗುಮನೆ
|

Updated on: Mar 25, 2023 | 10:38 AM

Share

ಮುಖ್ಯಾಂಶಗಳು

  • ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಪರಿಣೀತಿ ಹಾಗೂ ರಾಘವ್ ಅಧ್ಯಯನ
  • ಇಬ್ಬರೂ ಒಟ್ಟಾಗಿ ಸುತ್ತಾಟ ನಡೆಸಿದ್ದರಿಂದ ಹುಟ್ಟಿದೆ ವದಂತಿ
  • ಗೋಡೇ ಮೇಲೆ ದೀಪ ಇಟ್ಟಂತೆ ಉತ್ತರಿಸಿದ ರಾಘವ್

ಪರಿಣೀತಿ ಚೋಪ್ರಾ (Parineeti Chopra) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆದರೆ, ಈ ವಿಚಾರದ ಬಗ್ಗೆ ಪರಿಣೀತಿ ಚೋಪ್ರಾ ಉತ್ತರಿಸುತ್ತಿಲ್ಲ. ಹೀಗಿರುವಾಗಲೇ ರಾಘವ್ ಚಡ್ಡಾಗೆ (Raghav Chadha) ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಅವರು ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟು ಹೋಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದರಿಂದ ಫ್ಯಾನ್ಸ್​ಗೆ ಮತ್ತಷ್ಟು ಗೊಂದಲ ಆಗಿದೆ.

‘ನೀವು ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೀರಾ. ಮದುವೆ ಸುದ್ದಿ ನಿಜವೇ?’ ಎಂದು ರಾಘವ್​​ಗೆ ಪ್ರಶ್ನೆ ಮಾಡಲಾಯಿತು. ‘ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿ, ಪರಿಣೀತಿಗೆ ಸಂಬಂಧಿಸಿದ ವಿಚಾರ ಅಲ್ಲ’ ಎಂದು ರಾಘವ್ ಹೇಳಿದ್ದಾರೆ. ಈ ವೇಳೆ ಅವರು ಜೋರಾಗಿ ನಕ್ಕಿದ್ದಾರೆ. ‘ಮದುವೆ ಆಗುವಾಗ ಹೇಳ್ತೀನಿ’ ಎನ್ನುವ ಉತ್ತರ ಕೂಡ ಬಂದಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಪರಿಣೀತಿ ಹಾಗೂ ರಾಘವ್ ಅಧ್ಯಯನ ನಡೆಸಿದ್ದರು. ಇಬ್ಬರೂ ಒಟ್ಟಾಗಿ ಓದಿದ್ದರಿಂದ ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ. ಈ ಕಾರಣಕ್ಕೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪರಿಣೀತಿ ಚೋಪ್ರಾ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ಯಶಸ್ಸು ಸಿಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ಹೆಸರು ರಾಜಕಾರಣಿಯ ಜೊತೆ ತಳಕು ಹಾಕಿಕೊಂಡಿದೆ.

ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟು

ಬುಧವಾರ ಗುರುಗ್ರಾಮದ ಹೋಟೆಲ್​ ಒಂದರಲ್ಲಿ ಪರಿಣೀತಿ ಹಾಗೂ ರಾಘವ್ ರಾತ್ರಿ ಊಟ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಮುಂಬೈನ ಬಾಂದ್ರಾದ ಹೋಟೆಲ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಇಬ್ಬರೂ ಒಟ್ಟಾಗಿ ಊಟ ಮಾಡಲು ಸೇರಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಈ ಫೋಟೋಗಳನ್ನು ಕ್ಲಿಕ್ಕಿಸಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇಬ್ಬರೂ ಮ್ಯಾಚಿಂಗ್ ಶರ್ಟ್ ಧರಿಸಿದ್ದರು ಅನ್ನೋದು ವಿಶೇಷ.

ಇದನ್ನೂ ಓದಿ:Anushka Sharma: ಪ್ಯಾರಿಸ್​ನಿಂದ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ; ಲಂಡನ್​ನಿಂದ ಪರಿಣೀತಿ ಚೋಪ್ರಾ ವಿಶೇಷ ಮನವಿ 

ಪರಿಣೀತಿ ಚೋಪ್ರಾ ಅವರ ಕೈಯಲ್ಲಿ ಎರಡು ಸಿನಿಮಾ ಇದೆ. ‘ಚಂಕಿಲಾ’ ಹಾಗೂ ‘ಕ್ಯಾಪ್ಸೂಲ್ ಗಿಲ್​’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಎರಡೂ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ಅವರ ಯಾವ ಸಿನಿಮಾಗಳೂ ಗೆಲುವು ಕಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More