Kareena Kapoor: ‘ಬೇರೆ ಯಾವ ನಟಿಯೂ ಮದುವೆ ಆಗದಿದ್ದಾಗ ಸೈಫ್​ ಜತೆ ನಾನು ವಿವಾಹವಾದೆ’: ಕರೀನಾ ಕಪೂರ್​ ಖಾನ್​

Saif Ali Khan | Kareena Kapoor Khan: ಮದುವೆ, ಸಂಸಾರ, ಮಕ್ಕಳ ಸಲುವಾಗಿ ಕರೀನಾ ಕಪೂರ್​ ಅವರು ಹೆಚ್ಚು ಬ್ರೇಕ್​ ತೆಗೆದುಕೊಂಡಿಲ್ಲ. ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಕೇವಲ 2 ತಿಂಗಳು ವಿಶ್ರಾಂತಿ ಪಡೆದು ಮತ್ತೆ ನಟನೆಗೆ ಮರಳಿದ್ದರು.

Kareena Kapoor: ‘ಬೇರೆ ಯಾವ ನಟಿಯೂ ಮದುವೆ ಆಗದಿದ್ದಾಗ ಸೈಫ್​ ಜತೆ ನಾನು ವಿವಾಹವಾದೆ’: ಕರೀನಾ ಕಪೂರ್​ ಖಾನ್​
ಕರೀನಾ ಕಪೂರ್, ಸೈಫ್ ಅಲಿ ಖಾನ್
Follow us
ಮದನ್​ ಕುಮಾರ್​
|

Updated on: Mar 24, 2023 | 3:24 PM

ನಟಿ ಕರೀನಾ ಕಪೂರ್​ ಖಾನ್​ (Kareena Kapoor Khan) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮದುವೆ ಬಳಿಕವೂ ಅವರು ಸಿನಿಮಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆಗುತ್ತವೆ ಎಂಬಂತಹ ಕಾಲವೊಂದಿತ್ತು. ಅಂಥ ಸಂದರ್ಭದಲ್ಲೇ ಕರೀನಾ ಕಪೂರ್​ ಅವರು ಸೈಫ್​ ಅಲಿ ಖಾನ್​ (Saif Ali Khan) ಜೊತೆ ಮದುವೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಆ ದಿನಗಳ ಬಗ್ಗೆ ಅವರೀಗ ಮಾತನಾಡಿದ್ದಾರೆ. ಕರೀನಾ ಕಪೂರ್​ ಖಾನ್​ ಅವರು ಮದುವೆ ಆಗಿದ್ದು 2012ರಲ್ಲಿ. ಈಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಪುತ್ರ ತೈಮೂರ್​ ಅಲಿ ಖಾನ್​ (Taimur Ali Khan) ಹಾಗೂ ಎರಡನೇ ಪುತ್ರ ಜೇಹ್ ಅಲಿ ಖಾನ್​ಗೆ ಜನ್ಮ ನೀಡಿದ ಬಳಿಕವೂ ಬಾಲಿವುಡ್​ನಲ್ಲಿ ಕರೀನಾ ಕಪೂರ್​ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.

‘ನಾನು ಖುಷಿಯಾಗಿದ್ದೇನೆ. ಯಾಕೆಂದರೆ ಯಾವಾಗಲೂ ನನಗೆ ಬೇಕಾದ್ದನ್ನೇ ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಆ ವಿಚಾರದಲ್ಲಿ ನಾನು ಅದೃಷ್ಟವಂತೆ. ಮದುವೆ ಆಗಬೇಕು ಎನಿಸಿದಾಗ ಮದುವೆ ಆದೆ. ಆ ಸಂದರ್ಭದಲ್ಲಿ ಬೇರೆ ಯಾವ ನಟಿಯರೂ ಮದುವೆ ಆಗುತ್ತಿರಲಿಲ್ಲ. ಈಗ ತುಂಬ ನಟಿಯರು ಮದುವೆ ಆಗುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಸಿನಿಮಾದಲ್ಲಿ ಕೆಲಸ ಮಾಡುವುದು ತುಂಬ ಸಹಜ ಎಂಬಂತಾಗಿದೆ. ಮೊದಲು ಮಕ್ಕಳಾದರೆ ಸಮಸ್ಯೆ ಎನ್ನುತ್ತಿದ್ದರು. ಆದರೆ ಈಗ ಮಕ್ಕಳಿಗೆ ಜನ್ಮ ನೀಡಿದ ಬಳಿಕವೂ ಸಿನಿಮಾದಲ್ಲಿ ಕೆಲಸ ಮಾಡಬಹುದು’ ಎಂದು ಕರೀನಾ ಕಪೂರ್​ ಹೇಳಿದ್ದಾರೆ.

ಇದನ್ನೂ ಓದಿ: Kareena Kapoor Khan: ಎಲ್ಲರ ಎದುರು ಕರೀನಾ ಮೈ ಮೇಲೆ ಕೈ ಹಾಕಲು ಬಂದ ಅಭಿಮಾನಿ; ಶಾಕ್​ ಆದ ನಟಿಯ ವಿಡಿಯೋ ವೈರಲ್​

ಇದನ್ನೂ ಓದಿ
Image
Kareena Kapoor Khan: ಎಲ್ಲರ ಎದುರು ಕರೀನಾ ಮೈ ಮೇಲೆ ಕೈ ಹಾಕಲು ಬಂದ ಅಭಿಮಾನಿ; ಶಾಕ್​ ಆದ ನಟಿಯ ವಿಡಿಯೋ ವೈರಲ್​
Image
‘ಮಗನಿಗೆ ಒಳ್ಳೇ ಬುದ್ಧಿ ಕಲಿಸಿ’ ಎಂದು ಕರೀನಾ ಕಪೂರ್​ ಖಾನ್​ಗೆ ತಿವಿದ ನೆಟ್ಟಿಗರು: ತೈಮೂರ್​ ಮಾಡಿದ ತಪ್ಪೇನು?
Image
ಜಾಹೀರಾತಿನಲ್ಲಿ ಬಿಂದಿ ಇಡದೆ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್​ ಬಹಿಷ್ಕರಿಸಿ ಎಂದ ನೆಟ್ಟಿಗರು
Image
ಬಗೆಬಗೆಯ ಕಾಸ್ಟ್ಯೂಮ್​ನಲ್ಲಿ ಮಿಂಚಿದ ಕರೀನಾ ಕಪೂರ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು

ಮದುವೆ, ಸಂಸಾರ, ಮಕ್ಕಳ ಸಲುವಾಗಿ ಕರೀನಾ ಕಪೂರ್​ ಅವರು ಹೆಚ್ಚು ಬ್ರೇಕ್​ ತೆಗೆದುಕೊಂಡಿಲ್ಲ. ಪ್ರೆಗ್ನೆಂಟ್​ ಆಗಿದ್ದಾಗಲೂ ಕೂಡ ಅವರು ಕೆಲವು ಫೋಟೋಶೂಟ್​ನಲ್ಲಿ ಭಾಗಿ ಆಗಿದ್ದರು. ರ‍್ಯಾಂಪ್​ ವಾಕ್​ ಕೂಡ ಮಾಡಿದ್ದರು. ತೈಮೂರ್​ ಅಲಿ ಖಾನ್​ಗೆ ಜನ್ಮ ನೀಡಿದ ಬಳಿಕ ಕೇವಲ 2 ತಿಂಗಳು ವಿಶ್ರಾಂತಿ ಪಡೆದು ಮತ್ತೆ ನಟನೆಗೆ ಮರಳಿದ್ದರು.

ಇದನ್ನೂ ಓದಿ: ‘ಮಗನಿಗೆ ಒಳ್ಳೇ ಬುದ್ಧಿ ಕಲಿಸಿ’ ಎಂದು ಕರೀನಾ ಕಪೂರ್​ ಖಾನ್​ಗೆ ತಿವಿದ ನೆಟ್ಟಿಗರು: ತೈಮೂರ್​ ಮಾಡಿದ ತಪ್ಪೇನು?

ಆಮಿರ್ ಖಾನ್​ ಜೊತೆ ಕರೀನಾ ಕಪೂರ್​ ಖಾನ್​ ನಟಿಸಿದ ‘ಲಾಲ್​ ಸಿಂಗ್​ ಚೆಡ್ಡಾ’ ಸಿನಿಮಾ 2022ರಲ್ಲಿ ತೆರೆಕಂಡಿತು. ಆ ಚಿತ್ರ ಹೇಳಿಕೊಳ್ಳುವಂತಹ ಕಲೆಕ್ಷನ್​ ಮಾಡಲಿಲ್ಲ. ಆದರೆ ಕರೀನಾ ಕಪೂರ್​ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬಂತು. ಸಿನಿಮಾಗಳ ವಿಚಾರದಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ‘ದಿ ಬಕ್ಕಿಂಗ್​ಹ್ಯಾಮ್​ ಮರ್ಡರ್ಸ್​’ ಮತ್ತು ‘ದಿ ಡಿವೋಷನ್​ ಆಫ್​ ಸಸ್ಪೆಕ್ಟ್​ ಎಕ್ಸ್​’ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ