ತಮಿಳು ಸಿನಿಮಾ ರೀಮೇಕ್​ನಲ್ಲಿ ಆಮಿರ್ ಖಾನ್ ಪುತ್ರ: ಸಹಾಯ ಮಾಡಿಲ್ಲ ಎಂದ ಆಮಿರ್

ಆಮಿರ್ ಖಾನ್ ಪುತ್ರ ಝುನೈದ್ ಖಾನ್ ದಕ್ಷಿಣ ಭಾರತದ ಹಿಟ್ ಸಿನಿಮಾ ಒಂದರ ರೀಮೇಕ್​ನಲ್ಲಿ ನಟಿಸುತ್ತಿದ್ದಾರೆ. ಝುನೈದ್ ಖಾನ್ ಬಾಲಿವುಡ್​ಗೆ ಕಾಲಿಡುವಲ್ಲಿ ತಾವು ಯಾವ ಸಹಾಯವನ್ನು ಮಾಡಿಲ್ಲ ಎಂದಿದ್ದಾರೆ ಆಮಿರ್ ಖಾನ್.

ತಮಿಳು ಸಿನಿಮಾ ರೀಮೇಕ್​ನಲ್ಲಿ ಆಮಿರ್ ಖಾನ್ ಪುತ್ರ: ಸಹಾಯ ಮಾಡಿಲ್ಲ ಎಂದ ಆಮಿರ್
ಆಮಿರ್ ಖಾನ್-ಝುನೈದ್ ಖಾನ್
Follow us
ಮಂಜುನಾಥ ಸಿ.
|

Updated on: Mar 25, 2023 | 7:01 PM

ಬಾಲಿವುಡ್​ನಲ್ಲಿ (Bollywood) ನೆಪೊಟಿಸಮ್ (Nepotism) ಚರ್ಚೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಅದರಲ್ಲಿಯೂ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕವಂತೂ ಈ ಚರ್ಚೆ ಜೋರಾಗಿದೆ. ಹಲವು ಸ್ಟಾರ್​ಗಳ ಮಕ್ಕಳು, ಕೆಲವರ ಮೊಮ್ಮಕಳು ಸಹ ಚಿತ್ರರಂಗಕ್ಕೆ ಎಂಟ್ರಿ ನೀಡಿ ಆಗಿದೆ. ಇದೀಗ ನಟ ಆಮಿರ್ ಖಾನ್ ಪುತ್ರ ಝುನೈದ್ ಖಾನ್ ಸಹ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ ಮುಗಿಸಿರುವ ಜುನೈದ್, ದಕ್ಷಿಣ ಭಾರತ ಸಿನಿಮಾದ ರೀಮೇಕ್ ಅನ್ನು ತಮ್ಮ ಎರಡನೇ ಸಿನಿಮಾ ಆಗಿ ಆರಿಸಿಕೊಂಡಿದ್ದಾರೆ.

ಝುನೈದ್ ಖಾನ್ ಈಗಾಗಲೇ ಮಹಾರಾಜ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಅದಾಗಲೇ ಜುನೈದ್​ಗೆ ಎರಡನೇ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದ್ದು, ಆ ಸಿನಿಮಾವು ತಮಿಳಿನ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ಲವ್ ಟುಡೆಯ ರೀಮೇಕ್ ಆಗಿದೆ. ಆದರೆ ತಮ್ಮ ಮಗನ ಸಿನಿಮಾ ಜರ್ನಿಗೆ ತಾವು ಯಾವುದೇ ಸಹಾಯವನ್ನೂ ಮಾಡಿಲ್ಲವೆಂದು ಆಮಿರ್ ಖಾನ್ ಹೇಳಿಕೊಂಡಿದ್ದಾರೆ.

ಝುನೈದ್ ಖಾನ್​ ಮುಖ್ಯ ಪಾತ್ರದಲ್ಲಿ ನಟಿಸಲಿರುವ ಲವ್ ಟುಡೆ ಸಿನಿಮಾದ ರೀಮೇಕ್​ನಲ್ಲಿ ಬೋನಿ ಕಪೂರ್ ಎರಡನೇ ಪುತ್ರಿ ಖುಷಿ ನಾಯಕಿ. ಖುಷಿ ಕಪೂರ್, ಬಾಲಿವುಡ್​ನ ಜನಪ್ರಿಯ ಯುವನಟಿ ಜಾಹ್ನವಿ ಕಪೂರ್ ಸಹೋದರಿಯೂ ಹೌದು. ಖುಷಿಗೆ ಇದು ಮೂರನೇ ಸಿನಿಮಾ. ಝುನೈದ್ ಖಾನ್ ಈಗಾಗಲೇ ಮಹಾರಾಜ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾವನ್ನು ಯಶ್ ರಾಜ್ ಬ್ಯಾನರ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಶರ್ವರಿ ವಾಘ್ ನಾಯಕಿ.

ಝುನೈದ್ ಖಾನ್​ಗೆ ಮೊದಲ ಸಿನಿಮಾ ದೊರೆತಾಗ ಮಾಧ್ಯಮವೊಂದರ ಸಂದರ್ಶನದಲ್ಲಿ ನೆಪೊಟಿಸಮ್ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್, ”ನನ್ನ ಪುತ್ರ ಝುನೈದ್ ಖಾನ್ ಸಹ ಬಾಲಿವುಡ್​ಗೆ ಕಾಲಿಡುತ್ತಿದ್ದಾನೆ. ಅವನು ಮೊದಲು ಕೆಲವು ನಟನಾ ತರಬೇತಿ ಕೇಂದ್ರಗಳಿಗೆ ಸೇರಿ ನಟನೆ ಕಲಿತ ಬಳಿಕ ನಾಟಕಗಳಲ್ಲಿ ನಟಿಸಿದ. ಬಳಿಕ ಪ್ರತಿದಿನವೂ ಆಡಿಷನ್​ಗಳಿಗಾಗಿ ಹೋಗಿ ಆಡಿಷನ್ ನೀಡಿ ಬರುತ್ತಿದ್ದ. ಈಗ ಒಂದು ಸಿನಿಮಾಕ್ಕೆ ಆಯ್ಕೆ ಆಗಿದ್ದಾನೆ. ಆದರೆ ಅದಕ್ಕೆ ಮೊದಲು ಸುಮಾರು ಹದಿನೈದು ಬಾರಿ ರಿಜೆಕ್ಟ್ ಆಗಿದ್ದಾನೆ. ಯಾರಿಗಾದರೂ ಕರೆ ಮಾಡಿ ಅವನಿಗೆ ಅವಕಾಶ ಕೊಡಿ ಎಂದು ನಾನು ಹೇಳಿದ್ದಿದ್ದರೆ ಅವಕಾಶ ಸುಲಭವಾಗಿ ಸಿಗುತ್ತಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ನನ್ನ ನಂಬಿಕೆ ಏನೆಂದರೆ ಯಾರಿಗೆ ಪ್ರತಿಭೆ ಇರುತ್ತದೆಯೋ ಅವರಿಗೆ ಕೆಲಸ ಸಿಕ್ಕೇ ಸಿಗುತ್ತದೆ. ಪ್ರತಿಭೆ ಇರುವವರು ಆ ಕೆಲಸವನ್ನು ಹಾಗೆಯೇ ಉಳಿಸಿಕೊಂಡು ಹೋಗುತ್ತಾರೆ” ಎಂದಿದ್ದರು ಆಮಿರ್ ಖಾನ್.

ಆಮಿರ್ ಖಾನ್​ರ ಪುತ್ರಿ ಇರಾ ಖಾನ್ ಸಹ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ ಆದರೆ ನಟಿಯಾಗಿ ಅಲ್ಲ ಬದಲಿಗೆ ನಿರ್ದೇಶಕಿ ಆಗಿ. ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ನಟನೆಯ ಸಿನಿಮಾವನ್ನು ಇರಾ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಇರಾ ಖಾನ್ ತಮ್ಮ ಲವ್ ಸ್ಟೋರಿಯಿಂದಲೂ ಬಹಳ ಜನಪ್ರಿಯತೆ ಗಳಿಸಿದ್ದಾರೆ. ಆಮಿರ್ ಖಾನ್​ರ ಫಿಸಿಕಲ್ ಟ್ರೈನರ್ ಅನ್ನೇ ಪ್ರೇಮಿಸಿ ಲಿವಿನ್ ಟು ಗೆದರ್ ರಿಲೇಶನ್​ಶಿಪ್​ನಲ್ಲಿದ್ದಾರೆ ಇರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ