Pooja Hegde: ‘ಬಜರಂಗಿ ಭಾಯಿಜಾನ್’ ಚಿತ್ರದ ಸೀಕ್ವೆಲ್ನಲ್ಲಿ ಕರೀನಾ ಕಪೂರ್ ಖಾನ್ ಬದಲಿಗೆ ಪೂಜಾ ಹೆಗ್ಡೆ?
Bajrangi Bhaijaan 2 | Kareena Kapoor Khan: ಕರೀನಾ ಕಪೂರ್ ಬದಲಿಗೆ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಗಾಸಿಪ್ ಹಬ್ಬಿದೆ. ಯಾವ ಕಾರಣಕ್ಕಾಗಿ ಇಂಥ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.
ನಟ ಸಲ್ಮಾನ್ ಖಾನ್ (Salman Khan) ವೃತ್ತಿಜೀವನದ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ‘ಬಜರಂಗಿ ಭಾಯಿಜಾನ್’ ಚಿತ್ರಕ್ಕೂ ಸ್ಥಾನವಿದೆ. ಕಬೀರ್ ಖಾನ್ ನಿರ್ದೇಶನ ಆ ಸಿನಿಮಾ 2015ರಲ್ಲಿ ತೆರೆಕಂಡು ಧೂಳೆಬ್ಬಿಸಿತ್ತು. ಸಲ್ಮಾನ್ ಖಾನ್ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುವುದು ಖಚಿತ ಎಂದು ಈ ಮೊದಲೇ ಸುದ್ದಿ ಆಗಿತ್ತು. ಅಲ್ಲದೇ ಸೀಕ್ವೆಲ್ಗೆ ‘ಪವನ್ ಪುತ್ರ’ (Pawan Putra) ಎಂದು ಶೀರ್ಷಿಕೆ ಇಡಲಾಗುವುದು ಎಂದು ಸ್ವತಃ ಸಲ್ಮಾನ್ ಖಾನ್ ತಿಳಿಸಿದ್ದರು. ಈಗ ಈ ಸಿನಿಮಾ ಬಗ್ಗೆ ಒಂದು ಗಾಸಿಪ್ ಕೇಳಿಬಂದಿದೆ. ‘ಪವನ್ ಪುತ್ರ’ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ (Kareena Kapoor Khan) ಬದಲಿಗೆ ಪೂಜಾ ಹೆಗ್ಡೆ ಅವರು ನಾಯಕಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ಅವರ ಪಾತ್ರಕ್ಕೆ ಮಹತ್ವ ನೀಡಲಾಗಿತ್ತು. ಆ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದರು. ಈಗ ಸೀಕ್ವೆಲ್ನಲ್ಲಿ ಕರೀನಾ ಕಪೂರ್ ಬದಲಿಗೆ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಗಾಸಿಪ್ ಹಬ್ಬಿದೆ. ಯಾವ ಕಾರಣಕ್ಕಾಗಿ ಇಂಥ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: Pooja Hegde: ಒಂದೇ ವರ್ಷ ಪೂಜಾ ಹೆಗ್ಡೆ ನಟನೆಯ ನಾಲ್ಕು ಸಿನಿಮಾಗಳು ಫ್ಲಾಪ್; ಮುಂದೇನು?
ಈ ಕುರಿತಾಗಿ ಮೂಲಗಳು ಪ್ರತಿಕ್ರಿಯೆ ನೀಡಿರುವುದಾಗಿ ಇಟೈಮ್ಸ್ ವರದಿ ಮಾಡಿದೆ. ‘ಚಿತ್ರದ ಶೀರ್ಷಿಕೆ ಪವನ್ ಪುತ್ರ ಎಂಬುದು ಸರಿ. ಆದರೆ ಬಾಕಿ ಎಲ್ಲವೂ ಊಹಾಪೋಹ. ಸ್ಕ್ರಿಪ್ಟ್ ಇನ್ನೂ ಸಿದ್ಧವಾಗಿಲ್ಲ. ಈ ಹಂತದಲ್ಲಿ ಕಲಾವಿದರನ್ನು ಬದಲಾಯಿಸಲು ಹೇಗೆ ಸಾಧ್ಯ? ಈ ಸಿನಿಮಾದ ಶೂಟಿಂಗ್ ಆರಂಭವಾಗಲು ಇನ್ನೂ ಸಾಕಷ್ಟು ಸಮಯ ಇದೆ. ಹೀಗಿರುವಾಗ ಕರೀನಾ ಬದಲಿಗೆ ಪೂಜಾ ಹೆಗ್ಡೆ ಆಯ್ಕೆ ಆಗುತ್ತಾರೆ ಎಂಬುದು ಅಸಾಧ್ಯ’ ಅಂತ ಮೂಲಗಳು ಹೇಳಿವೆ ಎಂದು ವರದಿ ಆಗಿದೆ.
ಇದನ್ನೂ ಓದಿ: Kareena Kapoor: ‘ಬೇರೆ ಯಾವ ನಟಿಯೂ ಮದುವೆ ಆಗದಿದ್ದಾಗ ಸೈಫ್ ಜತೆ ನಾನು ವಿವಾಹವಾದೆ’: ಕರೀನಾ ಕಪೂರ್ ಖಾನ್
ಇತ್ತೀಚಿನ ವರ್ಷಗಳಲ್ಲಿ ಪೂಜಾ ಹೆಗ್ಡೆ ನಟಿಸಿದ ಯಾವ ಸಿನಿಮಾಗಳೂ ಗೆಲ್ಲುತ್ತಿಲ್ಲ. ಅವರಿಗೆ ಸತತವಾಗಿ ಸೋಲು ಎದುರಾಗಿದೆ. ಹಾಗಿದ್ದರೂ ಕೂಡ ಹೊಸ ಹೊಸ ಅವಕಾಶಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ.
ಇನ್ನು, ಕರೀನಾ ಕಪೂರ್ ಕೂಡ ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡಿಲ್ಲ. ಸಿನಿಮಾಗಳ ವಿಚಾರದಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ‘ದಿ ಬಕ್ಕಿಂಗ್ಹ್ಯಾಮ್ ಮರ್ಡರ್ಸ್’ ಮತ್ತು ‘ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್’ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ನಟಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Sun, 26 March 23